Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಅಂತಿಂಥ ರಸಂ ಅಲ್ಲವಿದು ಇದು ಮಾವಿನ ರಸಂ!
ಮಾವಿನ ಹುಳಿಯನ್ನು ನೆನೆಸಿಕೊಂಡರೇ ಬಾಯಲ್ಲಿ ನೀರೂರುತ್ತದೆ. ಇನ್ನು ಈ ರಸಂ ಕುಡಿದರಂತೂ... ಇನ್ನೇಕೆ ತಡ ಒಂದು ಕೈ ನೋಡೇಬಿಡಿ
- ಉಮಾರಾವ್
ಮಾವಿನ ರಸಂಗೆ ಬೇಕಾಗುವ ಪದಾರ್ಥಗಳು :
1ಬಟ್ಟಲು ಬಲಿತ ಮಾವಿನ ಹೋಳುಗಳು
2 ಚಮಚ ರಸಂ ಪುಡಿ
1-2 ಉಂಡೆ ಬೆಲ್ಲ
ಮೂರು ಎಸಳು ಕರಿಬೇವು
3-4 ಒಣಮೆಣಸಿನಕಾಯಿ
ಸ್ವಲ್ಪ ಈರುಳ್ಳಿ ಚೂರು
ಸ್ವಲ್ಪ ಬೆಳ್ಳುಳ್ಳಿ ಚೂರು
ಅರ್ಧ ಚಮಚ ಸಾಸಿವೆ
ಉಪ್ಪು (ರುಚಿಗೆ ತಕ್ಕಷ್ಟು)
ಮಾಡುವ ವಿಧಾನ : ಮೊದಲು ಮಾವಿನ ಸಿಪ್ಪೆಯನ್ನು ನೀಟಾಗಿ ತೆಗೆಯಿರಿ. ಆಮೇಲೆ ಅದನ್ನು ಚಿಕ್ಕಚಿಕ್ಕ ಹೋಳುಗಳನ್ನಾಗಿ ಕತ್ತರಿಸಿ.
ಮೂರು ಬಟ್ಟಲು ನೀರಿನಲ್ಲಿ ಮಾವಿನ ಹೋಳುಗಳನ್ನು ಚೆನ್ನಾಗಿ ಬೇಯಿಸಿ. ಮಾವಿನ ಕಾಯಿಯ ಹೋಳುಗಳ ಬೆಂದ ಮೇಲೆ ಹೊರತೆಗೆಯಿರಿ. ಬಿಸಿ ಕಡಿಮೆಯಾದ ಮೇಲೆ ಮಾವಿನ ಹೋಳುಗಳನ್ನು ಮಿಕ್ಸಿಗೆ ಹಾಕಿ ರಸ ತೆಗೆದು ಒಂದು ಪಕ್ಕಕ್ಕೆ ಎತ್ತಿಡಿ.
ಪಾತ್ರೆಯಲ್ಲಿ ಎಣ್ಣೆ ಕಾಯಿಸಿ, ಒಗ್ಗರಣೆಯ ಸಾಮಗ್ರಿಗಳನ್ನು ಹಾಕಿ ಬಾಡಿಸಿ, ಅದಕ್ಕೆ ಮಾವಿನ ರಸ, ರಸಂ ಪುಡಿ, ಬೆಲ್ಲ, ಈರುಳ್ಳಿ, ಉಪ್ಪು ಎಲ್ಲವನ್ನೂ ಸೇರಿಸಿ ಮತ್ತೊಮ್ಮೆ ಬಾಡಿಸಿ. ಚೆನ್ನಾಗಿ ಕುದ್ದ ಮೇಲೆ ಮಾವಿನ ರಸಂನ ರುಚಿ ನೋಡಿ. ಮಾವಿನ ರಸಂಯಿದ್ದರೇ ಇನ್ನೊಂದು ತುತ್ತು ಜಾಸ್ತಿ ಊಟ ಮಾಡಬಹುದು!



Click it and Unblock the Notifications
