Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹಬ್ಬದ ಮಾರನೆದಿನ ಮಾಡುವ ನಿರುಮ್ಮಳ ತಿಳಿಸಾರು
ತಿಳಿಸಾರು ರೆಸಿಪಿಗಳಲ್ಲಿ ಛಪ್ಪನ್ನಾರು ವೈವಿಧ್ಯವಿದೆ. ಈ ವಿಧಾನ ನಿಮಗೆ ಗೊತ್ತಿತ್ತಾ?
ಬೇವು ಬೆಲ್ಲ ತಿಂದು ಸರ್ವಜಿತ್ ಸಂವತ್ಸರವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾಯಿತು. 28 ತರಹ ಹಬ್ಬದ ಅಡುಗೆ ಮಾಡಿ ಬಡಿಸಿ ತಿಂದು ಉಂಡು ಸುಸ್ತಾಯಿತು! ಅಬ್ಬ ಸೊಂಟ ನೋವು...ಅದು ಸುಸ್ತಲ್ಲರೀ. ಒಂದು ಬಗೆಯ ಆಲಸ್ಯ. . ನಾನು ಹೇಳ್ತಾಯಿರೋದು ಕರೆಕ್ಟಾ? ಇವತ್ತು ಸ್ವಲ್ಪ ಆರಾಮ ತೊಗೊಳ್ಳಿ.
ಇವತ್ತು ಬಿಸಿ ಅನ್ನ ಮತ್ತು ಸಾರು ಮಾಡಿ ಊಟ ಮಾಡಿ ಸಿಂಪಲ್ಲಾಗಿ. ತಿಳಿ ಸಾರು ತಯಾರಿಸುವ ಒಂದು ವಿಧಾನವನ್ನು ಬರೆಯುತ್ತೇನೆ. ಗುರುತು ಮಾಡಿಕೊಳ್ಳಿ.
ನಿಮ್ಮ ಮನೆಯಲ್ಲಿ 4 ಜನ ಇದ್ದೀರಾ ಅಂದುಕೊಂಡರೆ ಒಂದು ಹಿಡಿ ತೊಗರಿ ಬೇಳೆ, 6 ಒಣಮೆಣಸಿನಕಾಯಿ ಮತ್ತು ಒಂದು ಚಮಚ ಜೀರಿಗೆಯನ್ನು ಎಣ್ಣೆ ಹಾಕದೆ ಹುರಿದುಕೊಳ್ಳಬೇಕು. ಚೆನ್ನಾಗಿ ಕೆಂಪಾಗುವತನಕ ಹುರಿದು ಆರಲು ಬಿಡಬೇಕು.
ಹುರಿದದ್ದನ್ನ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಹಾಕಬಾರದು. ಪೌಡರ್ ಆಗಬೇಕು. ಆನಂತರ ಸಾರು ಮಾಡುವ ಪಾತ್ರೆಗೆ ಸ್ವಲ್ಪ ಎಣ್ಣೆ ಸಾಸಿವೆ ಕರಿಬೇವು ಹಾಕಿ ಒಗ್ಗರಣೆ ಮಾಡಬೇಕು. ಒಗ್ಗರಣೆ ಆಗುವಾಗ ಹುಣಿಸೆ ಹಣ್ಣಿನ ನೀರು ಮತ್ತು ಸ್ವಲ್ಪ ಬೆಲ್ಲ ಕೊನೆಗೆ ಉಪ್ಪು ಇಂಗು ಹಾಕಿ ಕುದಿಸಬೇಕು.
ಈಗಾಗಲೇ ನೀವು ಮಾಡಿಟ್ಟುಕೊಂಡಿರುವ ಪೊಡರ್ ಅನ್ನು ಸಾರಿನ ಪಾತ್ರೆಗೆ ಹಾಕಿ ಮತ್ತೆ ಕುದಿಸಬೇಕು. ಅಷ್ಟೆ. ಸ್ಟೌವ್ ಆಫ್ ಮಾಡಿದ ಮೇಲೆ ಮೂರು ನಾಕು ಐದು ಬಾರಿ ತೊಳೆದ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸಾರಿನ ಮೇಲೆ ಚೆಲ್ಲಬೇಕು. ಈಗ ಸಿಂಪಲ್ ಆದ ತಿಳಿಸಾರು ಸೇವಿಸಲು ರೆಡಿ.



Click it and Unblock the Notifications
