Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ಮಧು ಖರ್ಜೂರ
ನೋಡಿದರೇನೇ ಬಾಯಲ್ಲಿ ನೀರೂರಿಸುವ ಈ ಹೊಸರುಚಿಯ ಹೆಸರು 'ಹನಿ ಡೇಟ್ ' ಅರ್ಥಾತ್ ಮಧು ಖರ್ಜೂರ ಎಂದು. ಕ್ರಿಸ್ಮಸ್‌ಗಾಗಿ ವಿಶೇಷ ಖಾದ್ಯ. ಈ ಬಾರಿಯ ಕ್ರಿಸ್ಮಸ್ ಅಡುಗೆ ಪಟ್ಟಿಯಲ್ಲಿ ಹನಿಡೇಟನ್ನೂ ಸೇರಿಸಿಕೊಳ್ಳಿ. ಇದನ್ನು ತಯಾರಿಸುವುದು ತುಂಬಾ ಸುಲಭ. ಬೇಕಾಗುವ ಪದಾರ್ಥಗಳೂ ಕಡಿಮೆ. ಪ್ರಯತ್ನಿಸಿ ನೋಡಿ.
ಬೇಕಾದ ಪದಾರ್ಥಗಳು :
ಮೈದಾಹಿಟ್ಟು : 250 ಗ್ರಾಂ
ಖರ್ಜೂರ : 250 ಗ್ರಾಂ
ಜೇನುತುಪ್ಪ : 100 ಗ್ರಾಂ
ಎಣ್ಣೆ : ಕರಿಯಲು ಬೇಕಾದಷ್ಟು
ಮಾಡುವ ವಿಧಾನ :
ಮೈದಾಹಿಟ್ಟನ್ನು ಚಪಾತಿ ಹಿಟ್ಟಿನ ತರಹ ಕಲಸಿ ಸ್ವಲ್ಪ ಸಮಯ ನೆನೆಯಲು ಬಿಡಬೇಕು. ಖರ್ಜೂರದಲ್ಲಿನ ಬೀಜಗಳನ್ನು ತೆಗೆದು ಮಿಕ್ಸಿಯಲ್ಲಿ ನುಣ್ಣಗೆ ಅರೆದು ಪೇಸ್ಟ್‌ನ ರೀತಿ ಮಾಡಿಕೊಳ್ಳಬೇಕು.
ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಕಲಸಿದ ಮೈದಾಹಿಟ್ಟನ್ನು ಹಪ್ಪಳಕ್ಕಿಂತಲೂ ಸಣ್ಣ ಅಳತೆಯಲ್ಲಿ ಮಾಡಿ(ಆದರೆ ಅದು ತುಂಬಾ ದಪ್ಪ ಇರಬೇಕು). ಖರ್ಜೂರದ ಪೇಸ್ಟನ್ನು ಒಳಗಡೆಯಿಟ್ಟು ಕಡುಬಿನ ರೀತಿ ಮುಚ್ಚಿರಿ. ಇದೇ ರೀತಿ ಮತ್ತಷ್ಟನ್ನು ತಯಾರಿಸಿ. ಹತ್ತು ನಿಮಿಷದ ನಂತರ, ಮಧ್ಯಕ್ಕೆ ಹೋಳುಗಳಾಗುವಂತೆ ಕತ್ತರಿಸಿ. ಆಮೇಲೆ ಎಣ್ಣೆಯಲ್ಲಿ ಹಾಕಿ ಕರಿಯಿರಿ. ಕರಿದ ಹೋಳುಗಳನ್ನು ಜೇನುತುಪ್ಪದಲ್ಲಿ ಅದ್ದಬೇಕು. ಸಿಹಿಯನ್ನು ಅಷ್ಟು ಇಷ್ಟಪಡದವರು ಜೇನುತುಪ್ಪವನ್ನು ಸ್ವಲ್ಪ ಸವರಬೇಕು. ಅಲ್ಲಿಗೆ ಮಧು ಖರ್ಜೂರ ರೆಡಿ.
(ದಟ್ಸ್‌ಕನ್ನಡ ಪಾಕಶಾಲೆ)



Click it and Unblock the Notifications
