For Quick Alerts
ALLOW NOTIFICATIONS  
For Daily Alerts

ದಮ್ರೋಟಿಗೆ ಕುಂಬಳಕಾಯಿ ಬಲಿ

By *ಶೈಲಜಾ ಸುಬ್ಬುಕೃಷ್ಣ, ಮೂಡಿಗೆರೆ
|
ಆಯುಧ ಪೂಜೆಗೆ ಬಲಿಯಾಗಲು ಕರ್ನಾಟಕದಲ್ಲಿ ಲಕ್ಷಾಂತರ ಕುಂಬಳಕಾಯಿಗಳು ಉಲ್ಡಾಡುತ್ತಿವೆ. ಎಲ್ಲಾ ಫುಟ್ ಪಾತುಗಳಲ್ಲಿ ಕುಂಬಳಕಾಯಿ ಗುಡ್ಡಗಳು ತಲೆಎತ್ತಿವೆ. ಒಂದು ಪುಟ್ಟ ಕುಂಬಳ ಎತ್ತಿಕೊಂಡು ಬಂದು ಸಿಹಿತಿಂಡಿ ಮಾಡುವಾ!ಅರ್ಧ ಕುಂಬಳದಿಂದ ದಮ್ ರೋಟ್ ಮಾಡಿ ನಾಳೆ ಹುಳಿಗೆ ಇನ್ನರ್ಧ ಇಟ್ಟುಕೊಳ್ಳಿ.

ಬೇಕಾಗುವ ಸಾಮಾನುಗಳು:

ಅರ್ಧ ಅಥವಾ ಇಡೀ ಕುಂಬಳಕಾಯಿ
ಕಾಲು ಕೆಜಿ ಸಣ್ಣರವೆ
ಒಂದು ಲೋಟ ಸಕ್ಕರೆ
ಒಂದು ಲೋಟ ತುಪ್ಪ
ಎರಡು ಲೋಟ ಗಟ್ಟಿ ಹಾಲು
ಗೋಡಂಬಿ ಏಲಕ್ಕಿ ದ್ರಾಕ್ಷಿ

ತಯಾರಿಸುವ ವಿಧಾನ:

ಕುಂಬಳಕಾಯಿ ಹೆಚ್ಚಿ, ಬೀಜತೆಗೆದು ಸಣ್ಣಗೆ ತುರಿ ಮಾಡಿಕೊಳ್ಳಿ. ಸಣ್ಣ ರವೆಯನ್ನು ಸ್ವಲ್ಪ ತುಪ್ಪದಲ್ಲಿ ಹುರಿಯಿರಿ. ಇನ್ನೊಂದು ಬರ್ನರ್ ಮೇಲೆ ಪಾತ್ರೆ ಇಟ್ಟು ಕುಂಬಳಕಾಯಿ ತುರಿ ಮತ್ತು ಹಾಲು ಹಾಕಿರಿ. ಬೇಯುತ್ತಲಿರಲಿ. ಕುಂಬಳಕಾಯಿ ಮೆತ್ತಗಾದ ನಂತರ ತುಪ್ಪ ಸಕ್ಕರೆ ಹಾಕಿ ಕುದಿಸಿರಿ. ಪಾಕವಾದ ನಂತರ ಹುರಿದ ರವೆಯನ್ನು ಸುರುವಿ ಚೆನ್ನಾಗಿ ಕಲಕಬೇಕು. ರವೆ ಚೆನ್ನಾಗಿ ಹುರಿದಿದ್ದರೆ ಬೇಯುವಾಗ ಉಂಡೆ ಕಟ್ಟಿಕೊಳ್ಳುವುದಿಲ್ಲ. ಬೆಂದನಂತರ ಪಾತ್ರೆಯ ಬಾಯಿ ಮುಚ್ಚಿ ಸಣ್ಣ ಉರಿಯಲ್ಲಿ ದಮ್ ರೋಟ್ ಹದವಾಗಲು ಬಿಡಿ.

ಬಳಿಕ ಏಲಕ್ಕಿ ಪುಡಿ ಒಣದ್ರಾಕ್ಷಿ ಮತ್ತು ಗೋಡಂಬಿಗಳನ್ನು ಬೆರೆಸಿ. ಏಲಕ್ಕಿ ಪುಡಿ ಒಣದ್ರಾಕ್ಷಿ ಮತ್ತು ಗೋಡಂಬಿಗಳನ್ನು ಮುಂಚೆಯೇ ಚೂರು ತುಪ್ಪದಲ್ಲಿ ಬಾಡಿಸಿಟ್ಟುಕೊಳ್ಳಲು ಮರೆಯಬೇಡಿ. ತಿಂದುಳಿದ ಸಿಹಿಯನ್ನು ಡಬ್ಬಿಯಲ್ಲಿ ಭದ್ರವಾಗಿ ಮುಚ್ಚಿ ಪ್ರಿಜ್ ನಲ್ಲಿ ಇಟ್ಟರೆ ನಾಕಾರು ದಿನ ಹಾಯಾಗಿರುತ್ತದೆ.

Story first published: Friday, September 25, 2009, 13:42 [IST]
X
Desktop Bottom Promotion