Latest Updates
-
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ಓಣಂಗೆ ಸ್ಪೆಷಲ್ ಹಾಲಿನ ಪಾಯಸದ ಸವಿಯಿರಲಿ

ಹಾಲಿನ ಪಾಯಸಕ್ಕೆ ಬೇಕಾಗುವ ಪದಾರ್ಥಗಳು:
* 1 ಲೀಟರ್ ಹಾಲು
* 1 ಲೀಟರ್ ನೀರು
* 1 ಕಪ್ ಅಕ್ಕಿ
* 1 ಕಪ್ ಸಕ್ಕರೆ (ನಿಮ್ಮ ರುಚಿಗೆ ತಕ್ಕಂತೆ)
* 100-125 ಗ್ರಾಂ ಗೋಡಂಬಿ
* 75-100 ಗ್ರಾಂ ಒಣದ್ರಾಕ್ಷಿ
* ತುಪ್ಪ
* 1/2 ಚಮಚ ಏಲಕ್ಕಿ ಪುಡಿ
ಹಾಲಿನ ಪಾಯಸ ಮಾಡುವುದು ಹೀಗೆ:
ಅಕ್ಕಿಯನ್ನು ಚೆನ್ನಾಗಿ ತೊಳೆದು ಸೋಸಿ ನೀರು ತುಂಬಿ ಒಂದೆಡೆ ಇಡಬೇಕು. ನಂತರ ತಳ ಗಟ್ಟಿ ಇರುವ ಪಾತ್ರೆಗೆ ಸ್ವಲ್ಪ ತುಪ್ಪ ಹಾಕಿ ಕಾದ ನಂತರ ಹಾಲು ಮತ್ತು ನೀರನ್ನು ಬೆರೆಸಿ ಸಣ್ಣ ಉರಿಯಲ್ಲಿ ಇಡಬೇಕು. ಅದು ಕುದಿಯಲು ಆರಂಭಿಸಿ ಸ್ವಲ್ಪ ಗಟ್ಟಿಯಾದಂತೆ ಕಾಣುವಾಗ ತೊಳೆದಿಟ್ಟ ಅಕ್ಕಿಯನ್ನು ಬೆರೆಸಬೇಕು.
ಸಣ್ಣ ಉರಿಯಲ್ಲಿ ಅದನ್ನು ಕದಡುತ್ತಾ ತಳ ಹಿಡಿಯದಂತೆ ನೋಡಿಕೊಳ್ಳಬೇಕು. ಅನ್ನವನ್ನು ಹಿಸುಕಿ ನೋಡಿದಾಗ ಅದು ಚೆನ್ನಾಗಿ ಬೆಂದಿದ್ದರೆ ಮಾತ್ರ ಸಕ್ಕರೆ ಬೆರೆಸಬೇಕು. ಒಮ್ಮೆ ಸಕ್ಕರೆ ಬೆರೆಸಿದರೆ ಅನ್ನ ಬೇಯುವುದಿಲ್ಲ. ಆದ್ದರಿಂದ ಅನ್ನ ಬೆಂದ ಮೇಲಷ್ಟೆ ಸಕ್ಕರೆ ಬೆರೆಸಬೇಕು.
ಕುದಿಯುತ್ತಾ ಕುದಿಯುತ್ತಾ ಹಾಲು ಬಣ್ಣ ಬದಲಾಯಿಸಿದಂತೆ ಕಂಡಾಗ ಪಾಯಸವನ್ನು ಕೆಳಗಿಳಿಸಬೇಕು. ಈಗ ಚಿಕ್ಕದೊಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಕಾಯಿಸಿ ಗೋಡಂಬಿ, ಒಣದ್ರಾಕ್ಷಿ ಯನ್ನು ಹುರಿದುಕೊಂಡು ಪಾಯಸಕ್ಕೆ ಬೆರೆಸಿ ಏಲಕ್ಕಿ ಪುಡಿ ಹಾಕಬೇಕು. ಓಣಂಗೆಂದು ವಿಶೇಷ ಹಾಲಿನ ಪಾಯಸ ತಯಾರಾಗಿದೆ.



Click it and Unblock the Notifications
