Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಓಣಂ ಹಬ್ಬಕ್ಕೆ ಪಾಯಸ ಮೇಳದ ಮೆರುಗು

ಗುರುವಾರದಿಂದ ಶನಿವಾರದವರೆಗೆ (ಸೆಪ್ಟೆಂಬರ್ 8 ರಿಂದ 10 2011 ರವರೆಗೆ) ನಡೆಯಲಿರುವ ಓಣಂ ಹಬ್ಬಕ್ಕೆ ಎಲ್ಲೆಲ್ಲೂ ವಿಶೇಷ ತಯಾರಿ ನಡೆಯುತ್ತಿದೆ. ವಿವಿಧ ಭಾಷೆ, ಸಂಸ್ಕ್ರತಿಗಳ ಗೂಡಾದ ಬೆಂಗಳೂರು ಕೂಡ ಓಣಂಗೆ ಸಜ್ಜಾಗಿದೆ.
ಸಾಂಪ್ರದಾಯಿಕ ಉಡುಗೆ, ಹೂವಿನಿಂದ ಅಲಂಕರಿಸಿದ ರಂಗೋಲಿ (ಪೂಕಲಂ), ಅಲಂಕೃತಗೊಂಡ ಆನೆಗಳು, ಕಥಕ್ಕಳಿ, ದೋಣಿ ಸ್ಪರ್ಧೆ (ವಲ್ಲಂಕಲಿ) ಕೇರಳದಲ್ಲಿನ ಓಣಂನ ವಿಶೇಷ. ಆದರೆ ಪಾಯಸವಿಲ್ಲದೆ ಓಣಂಗೆ ಅರ್ಥ ಎಲ್ಲಿದೆ? ಹೌದು ಓಣಂ ಹಬ್ಬಕ್ಕೆ ವಿಧವಿಧವಾದ ಪಾಯಸಗಳ ಔತಣವೇ ಮೆರುಗು.
ಕೇರಳ ಸರ್ಕಾರ ಓಣಂ ಹಬ್ಬದ ಅವಧಿಯಲ್ಲಿ ಪ್ರತಿ ವರ್ಷ ವಿಶೇಷ ಮೇಳವನ್ನು ಆಯೋಜಿಸುತ್ತದೆ. ಅಂತೆಯೇ ಈ ಬಾರಿ ಕೂಡ ಬಗೆಬಗೆಯ ಪಾಯಸದ ಮೇಳವನ್ನು ಆಯೋಜಿಸಿದೆ.
ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಈ ಬಾರಿ ಕೇರಳದ ತಿರುವನಂತಪುರಂನ ತಂಪನೂರಿನಲ್ಲಿ ಪಾಯಸದ ಮೇಳವನ್ನು ಆಯೋಜಿಸಿದೆ. ಸೆಪ್ಟೆಂಬರ್ 7 ರಿಂದ 9ರವರೆಗೆ ಪಾಯಸದ ಮೇಳ ನಡೆಯಲಿದ್ದು, ಅನೇಕ ಬಗೆಯ ಪಾಯಸಗಳನ್ನು ಇಲ್ಲಿ ಮಾಡಲಾಗುತ್ತೆ. ಕ್ಯಾರೆಟ್ ನಿಂದ ಹಿಡಿದು ಹಲಸಿನ ಹಣ್ಣಿನ ಪಾಯಸದವರೆಗೂ ಇಲ್ಲಿ ಲಭ್ಯ. ಪಾಯಸ ಪ್ರಿಯರಿಗೆ ಇಲ್ಲಿದೆ ಪಾಯಸ ಸವಿಯುವ ಹೇರಳ ಅವಕಾಶ.
ಓಣಂಗೆ ಹಾಲಿನ ಪಾಯಸ ಮಾಡುವುದು ಹೇಗೆಂದು ಮುಂದೆ ತಿಳಿದುಕೊಳ್ಳಿ.



Click it and Unblock the Notifications
