Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗಣಪನಿಗೆ ಇಷ್ಟವಾದ ಕಡುಬು ನಿಮಗಿಷ್ಟ ತಾನೆ?

ಕಡುಬು ಮಾಡಲು ಏನೇನು ಬೇಕು?
* 1 ಪಾವು ಬೆಲ್ಲ
* 1 ಪಾವು ತೊಗರಿಬೇಳೆ
* 1 ಪಾವು ಚಿರೋಟಿರವೆ
* ಒಣಕೊಬ್ಬರಿ, ಗಸಗಸೆ
* ಏಲಕ್ಕಿ, ದ್ರಾಕ್ಷಿ, ಗೋಡಂಬಿ, ಪಚ್ಚಕರ್ಪೂರ
* ಚೂರು ಒಣಶುಂಠಿ
*ತುಪ್ಪ ಅಥವಾ ಎಣ್ಣೆ
ಕಡುಬು ಮಾಡುವುದು ಹೇಗೆ?
* ಹೂರಣ: ತೊಗರಿಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿ ನೀರು ಬಸಿದು ತಣ್ಣಗಾದ ಮೇಲೆ ಬೆಲ್ಲದ ಜತೆಗೆ ಹೋಳಿಗೆ ಹೂರಣಕ್ಕಿಂತ ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ತುಪ್ಪದಲ್ಲಿ ಹುರಿದ ಗಸಗಸೆ, ದ್ರಾಕ್ಷಿಗೆ ಕೊಬ್ಬರಿ ತುರಿ ಬೆರಸಿ ಹೂರಣದೊಂದಿಗೆ ಕಲಸಿ. ಕೊನೆಗೆ ಏಲಕ್ಕಿ ಪುಡಿ, ಪಚ್ಚಕರ್ಪೂರ, ಒಣಶುಂಠಿ ಬೆರೆಸಿದರೆ ಹೂರಣ ಘಮಘಮ ಎನ್ನುತ್ತದೆ.
* ಕಣಕ: ಚಿರೋಟಿ ರವೆಗೆ ಎರಡು ಚಮಚ ತುಪ್ಪ, ಸ್ವಲ್ಪ ಎಣ್ಣೆ , ಚೂರು ಉಪ್ಪು ಬೆರೆಸಿ ಪೂರಿಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಹಿಟ್ಟಿನ ಮೇಲೆ ಒದ್ದೆ ಬಟ್ಟೆ ಮುಚ್ಚಿಡಬೇಕು. ಹಿಟ್ಟು ಒಂದು ಗಂಟೆ ನೆನೆದ ನಂತರ ಪೂರಿ ತರಹ ತೆಳುವಾಗಿ ಲಟ್ಟಿಸಬೇಕು. ಹೂರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಲಟ್ಟಿಸಿದ ಹಿಟ್ಟಿನ ಮೇಲಿಟ್ಟು ಕಡುಬಿನಾಕಾರಕ್ಕೆ ಮಡಿಚಿ, ಅಂಚನ್ನು ಒತ್ತಿ ಕಾದ ಎಣ್ಣೆಯಲ್ಲಿ ಅಥವಾ ತುಪ್ಪದಲ್ಲಿ ಕರಿಯಬೇಕು.
ಈಗ ಘಮ ಘಮ ಎನ್ನುವ ಗರಿಗರಿಯಾದ ಕಡುಬು ರೆಡಿಯಾಗಿದೆ. ಗಣಪನ ಮುಂದೆ ನೈವೇದ್ಯಕ್ಕೆ ಇಟ್ಟು ನಂತರ ಮನೆಗೆ ಬಂದವರೊಂದಿಗೂ ಹಂಚಿ ತಿನ್ನಿ. ನೀವು ಮಾಡಿದ ಕಡುಬನ್ನು ತಿಂದವರು ಹೊಗಳದೆ ಹಿಂದಿರುಗುವುದಿಲ್ಲ.



Click it and Unblock the Notifications
