Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಂಗಳಗೌರಿಗೆ ಹೆಸರು ಬೇಳೆ ಪಾಯಸದ ನೈವೇದ್ಯ

ಶ್ರಾವಣದ ಮೊದಲ ಮಂಗಳಗೌರಿ ಹಬ್ಬಕ್ಕೆ ನೈವೇದ್ಯ ಮಾಡಲೇಬೇಕು. ಹೀಗಿದ್ದ ಮೇಲೆ ಏನಾದರೂ ವಿಶೇಷವಾಗಿರುವುದನ್ನೇ ನೈವೇದ್ಯಕ್ಕೆ ಮಾಡಿದರೆ ದೇವಿಗೆ ಸಂತೃಪ್ತಿ. ಈ ರುಚಿ ರುಚಿಯಾದ ಪಾಯಸವನ್ನು ಒಮ್ಮೆ ಮಾಡಿ ನೋಡಿ.
ಬೇಕಾಗುವ ಪದಾರ್ಥಗಳು:
* ಹೆಸರು ಬೇಳೆ 1 ಕಪ್
* ಸಬ್ಬಕ್ಕಿ- 2 ಚಮಚ
* ಬೆಲ್ಲದ ಪುಡಿ 2 ಕಪ್
* ಅರ್ಧ ಚಮಚ ಏಲಕ್ಕಿ ಪುಡಿ
* ಗೋಡಂಬಿ ಮತ್ತು ದ್ರಾಕ್ಷಿ 10
* 2 ಚಮಚ ಹಾಲಿನಲ್ಲಿ ನೆನೆಸಿಟ್ಟ 2 ದಳ ಕೇಸರಿ
* ತುಪ್ಪ ಮತ್ತು ತೆಂಗಿನಕಾಯಿ 1
ಮಾಡುವ ವಿಧಾನ : ಒಂದು ತೆಂಗಿನ ಕಾಯಿಯಲ್ಲಿ ಸ್ವಲ್ಪ ಕಾಯಿ ಕತ್ತರಿಸಿಕೊಂಡು ಚಿಕ್ಕ ಚೂರುಗಳಾಗಿ ಮಾಡಿಟ್ಟುಕೊಳ್ಳಬೇಕು. ಇನ್ನೊಂದು ಸ್ವಲ್ಪ ತೆಂಗಿನ ಕಾಯಿಯನ್ನು ತುರಿದಿಟ್ಟುಕೊಂಡು ಒಂದು ಕಪ್ ನೀರು ಬೆರೆಸಿ ತೆಂಗಿನ ಹಾಲು ತೆಗೆದಿಡಬೇಕು. ಮತ್ತೆ ಅದಕ್ಕೆ ಇನ್ನೊಂದು ಕಪ್ ನೀರು ಬೆರೆಸಿ ಇದರಿಂದಲೂ ತೆಂಗಿನ ಹಾಲು ತೆಗೆದುಕೊಂಡು ಇನ್ನೊಂದು ಬಟ್ಟಲಿನಲ್ಲಿ ಎತ್ತಿಟ್ಟುಕೊಳ್ಳಬೇಕು.
ಹೆಸರು ಬೇಳೆಯನ್ನು ಚೆನ್ನಾಗಿ ಹುರಿದುಕೊಂಡು ಹೆಸರುಬೇಳೆ ಮತ್ತು ಸಬ್ಬಕ್ಕಿಯನ್ನು ಕುಕ್ಕರಿನಲ್ಲಿ ಹಾಕಿ ಬೇಯಿಸಬೇಕು. ಇಳಿಸಿದ ನಂತರ ಇವೆರಡರ ಮಿಶ್ರಣವನ್ನು ಚೆನ್ನಾಗಿ ಮಸೆಯಬೇಕು. ನಂತರ ಪಾತ್ರೆಯೊಂದಕ್ಕೆ ಬೇಳೆ ಮಿಶ್ರಣ ಮತ್ತು ಬೆಲ್ಲದ ಪಾಕವನ್ನು ಒಟ್ಟಿಗೆ ಬೆರೆಸಿಕೊಂಡು 10 ನಿಮಿಷ ಬೇಯಿಸಬೇಕು. ಈಗ ಎರಡನೇ ಬಾರಿ ಎತ್ತಿಟ್ಟಿದ್ದ ತೆಂಗಿನಹಾಲನ್ನು ಇದಕ್ಕೆ ಬೆರೆಸಬೇಕು. ಅದು ಕುದಿಯಲು ಆರಂಭಿಸಿದ ನಂತರ ಮೊದಲನೆ ಬಾರಿ ಎತ್ತಿಟ್ಟಿದ್ದ ತೆಂಗಿನ ಹಾಲನ್ನು ಬೆರೆಸಿ ಒಲೆ ಆರಿಸಬೇಕು.
ಪ್ರತ್ಯೇಕ ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿಯಾದ ನಂತರ ಗೋಡಂಬಿ ಚೂರು, ತೆಂಗಿನ ಚೂರು ಮತ್ತು ಒಣದ್ರಾಕ್ಷಿಯನ್ನು ಅದಕ್ಕೆ ಹಾಕಿ ಹುರಿದುಕೊಂಡು ಬೇಳೆಗೆ ಬೆರೆಸಿ, ಕೇಸರಿ ದಳ ಹಾಗೂ ಏಲಕ್ಕಿ ಪುಡಿ ಸೇರಿಸಬೇಕು. ಈಗ ರುಚಿಕಟ್ಟಾದ ಹೆಸರು ಬೇಳೆ ಪಾಯಸ ನೈವೇದ್ಯಕ್ಕೆ ತಯಾರಾಗಿದೆ.



Click it and Unblock the Notifications
