Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಕ್ಕಳ ಬೆಳವಣಿಗಾಗಿ ಒಣ ಹಣ್ಣುಗಳ ಉಂಡೆ

ಸರ್ವತೋಮುಖ ಬೆಳವಣಿಗೆಗಾಗಿ ವೈದ್ಯರ ಬಳಿ ಹೋಗಿ ಟಾನಿಕ್ಕುಗಳನ್ನು ಕುಡಿಸುವ ಬದಲು, ಮಕ್ಕಳ ಮೂಳೆ, ಹಲ್ಲುಗಳು ಗಟ್ಟಿಯಾಗಲು ಒಣ ಹಣ್ಣುಗಳ ಉಂಡೆ ಮಾಡಿ ತಿನ್ನಲು ನೀಡಬಹುದು. ಡ್ರೈ ಫ್ರುಟ್ಸ್ ಗಳನ್ನು ಬಿಡಿಬಿಡಿಯಾಗಿ ಕೊಟ್ಟಾಗ ಕೆಲ ಮಕ್ಕಳು ತಕರಾರು ಮಾಡಬಹುದು. ಆದ್ದರಿಂದ, ಬೆಳೆಯುತ್ತಿರುವ ಮಕ್ಕಳಿಗೆ ರುಚಿರುಚಿ ಉಂಡೆ ಮಾಡಿ ತಿನ್ನಿಸಿದರೆ ಇಷ್ಟಪಟ್ಟು ತಿನ್ನುತ್ತಾರೆ.
ಬೇಕಾಗುವ ಪದಾರ್ಥಗಳು
ಗೋಡಂಬಿ 50 ಗ್ರಾಂ
ಉತ್ತತ್ತಿ 50 ಗ್ರಾಂ
ಒಣದ್ರಾಕ್ಷಿ 50 ಗ್ರಾಂ
ಬಾದಾಮಿ 50 ಗ್ರಾಂ
ಪಿಸ್ತಾ 50 ಗ್ರಾಂ
ಏಲಕ್ಕಿ 4
ಗಸಗಸೆ 3 ಚಮಚ
ಉಂಡೆ ಬೆಲ್ಲ 250 ಗ್ರಾಂ
ಒಣ ಕೊಬ್ಬರಿ ಕಾಲು ಬಟ್ಟಲು
ತಯಾರಿಸುವ ವಿಧಾನ
ಡ್ರೈ ಫ್ರುಟ್ಸ್(ಒಣ ಹಣ್ಣು)ಗಳನ್ನು ಅಡಕತ್ತರಿಯಲ್ಲಿ ಸಣ್ಣದಾಗಿ ಕತ್ತರಿಸಿಕೊಳ್ಳಿ. ಒಣ ಕೊಬ್ಬರಿಯನ್ನು ಐದಾರು ಚಮಚ ಆಗುವಷ್ಟು ತುರಿದುಕೊಂಡು ಒಣ ಹಣ್ಣುಗಳೊಂದಿಗೆ ಸೇರಿಸಿಟ್ಟುಕೊಳ್ಳಿ. ಇನ್ನೊಂದೆಡೆ ಗಸಗಸೆಯನ್ನು ಹುರಿದಿಟ್ಟುಕೊಳ್ಳಿ.
ಉಂಡೆ ಬೆಲ್ಲವನ್ನು ಆಲೂಗಡ್ಡೆ ಚಿಪ್ಸ್ ನಂತೆ ತುರಿದುಕೊಂಡು ಅಥವಾ ಬೇಕಿದ್ದರೆ ಜಜ್ಜಿಕೊಂಡು ಅರ್ಧ ಲೋಟ ನೀರಿನಲ್ಲಿ ಕುದಿಯಲು ಬಿಡಿ. ಕುದಿ ಬಂದು ನೀರಿನಲ್ಲಿ ಬೆಲ್ಲ ಕೂಡಿಕೊಳ್ಳುತ್ತಿದ್ದಂತೆ ಹುರಿದಿಟ್ಟ ಗಸಗಸೆ ಸೇರಿಸಿ ಚೆನ್ನಾಗಿ ಕೈಯಾಡಿಸಿ ಕೆಳಗಿಳಿಸಿಕೊಳ್ಳಿ. ಬೆಲ್ಲದ ಪಾಕ ತೀರಾ ಗಟ್ಟಿಯಾಗುವುದೂ ಬೇಡ, ಅಳ್ಳಕಾಗುವುದೂ ಬೇಡ.
ಬೆಲ್ಲ ತುಸು ಆರಿದ ನಂತರ ಒಣ ಹಣ್ಣುಗಳ ಮಿಶ್ರಣದಲ್ಲಿ ಸೇರಿಸಿ ಉಂಡೆಗಳಾಗಿ ಕಟ್ಟಿಡಿ. ಒಣ ಆಗಿರುವ ಡಬ್ಬಿಯಲ್ಲಿ ತುಂಬಿಟ್ಟು ಮಕ್ಕಳು ಬೇಕೆಂದಾಗೆಲ್ಲ ತಿನ್ನಲು ನೀಡಿರಿ.
ಎಚ್ಚರಿಕೆ : ಒಣ ಹಣ್ಣುಗಳು ಬಲು ದುಬಾರಿ. ಡ್ರೈ ಫ್ರುಟ್ಸ್ ಉಂಡೆ ತಯಾರಿಸುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ.



Click it and Unblock the Notifications
