Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸ್ವಾದಿಷ್ಟ ಮಾವಿನ ಹಣ್ಣಿನ ಬರ್ಫಿ

ಮಾವಿನ ಹಣ್ಣಿನ ಗುಳಂಬ, ಜ್ಯೂಸು, ಮಾವಿನ ಹಣ್ಣಿನ ಸೀಕರಣೆ, ಮಾವಿನ ಹಣ್ಣಿನ ದೋಸೆ, ಮಾವಿನ ಹಪ್ಪಳ, ಸಂಡಿಗೆ... ಹೀಗೆ ನಾನಾ ಬಗೆಯ ತಿಂಡಿ ತಿನಿಸುಗಳಿಗೆ ಸುಗ್ಗಿಯ ಕಾಲ. ಹಾಗೆಯೇ, ಕಳಿತ ಮಾವಿನ ಹಣ್ಣಿನಿಂದ ಸ್ವಾದಿಷ್ಟಕರವಾದ ಸಿಹಿ ತಿನಿಸು ಬರ್ಫಿಯನ್ನು ಕೂಡ ಮನೆಯಲ್ಲಿಯೇ ತಯಾರಿಸಬಹುದು. ಮಾಡುವ ವಿಧಾನ ಕೂಡ ಅಷ್ಟೇ ಸುಲಭ.
ಬೇಕಾಗುವ ಸಾಮಗ್ರಿಗಳು :
ಮಾವಿನ ಹಣ್ಣು 3 | ತುಪ್ಪ 1/4 ಲೋಟ | ಸಕ್ಕರೆ 3 ಲೋಟ | ತೆಂಗಿನಕಾಯಿ ತುರಿ 1 ಬಟ್ಟಲು | ಅಲಂಕಾರಕ್ಕೆ ಗೋಡಂಬಿ, ಪಿಸ್ತಾ, ಬಾದಾಮಿ ಎಟ್ಸಿಟ್ರಾ.
ಮಾಡುವ ವಿಧಾನ :
ಮಾವಿನ ಹಣ್ಣಿನ ಮೇಲೆ ಕೆಡದಂತೆ ರಾಸಾಯನಿಕ ಸಿಂಪಡಿಸಿರುತ್ತಾರಾದ್ದರಿಂದ ಮಾರುಕಟ್ಟೆಯಿಂದ ತಂದ ಮೇಲೆ ಚೆನ್ನಾಗಿ ತೊಳೆಯಿರಿ. ತುಂಬು ತೆಗೆದು, ಜುರಿ ಹಿಂಡಿ, ಸಿಪ್ಪೆ ಸುಲಿದು ಬರೀ ಓಟೆ ಮಾತ್ರ ಕಾಣುವಂತೆ ಒಂದು ಸ್ಟೀಲಿನ ಪಾತ್ರೆಯಲ್ಲಿ ಹಿಂಡಿಕೊಳ್ಳಿ. ಕೆಟ್ಟಿರಬಹುದೆಂಬ ಅನುಮಾನವಿದ್ದರೆ ನೀಟಾಗಿ ಚಾಕುವಿನಿಂದ ಹೆಚ್ಚಿ ನಂತರ ಅದರ ಕರಣೆಯನ್ನು ಹಿಂಡಿಕೊಳ್ಳಬಹುದು. ತೀರ ಆಸೆಯಾದರೆ ಒಂದು ಕರಣೆಯನ್ನು ಯಾರಿಗೂ ಗೊತ್ತಾಗದಂತೆ ಬಾಯಿಗೆ ಇಳಿಸಿರಿ.
ಹಣ್ಣನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ನೀರನ್ನು ಸೇರಿಸುವ ಅವಶ್ಯಕತೆಯಿಲ್ಲ. ನಂತರ ಅಗಲ ತಳವಿರುವ ನಾನ್ ಸ್ಟಿಕ್ ಪಾತ್ರೆಯಲ್ಲಿ ತುಪ್ಪವನ್ನು ಸುರಿಯಿರಿ. ಸ್ವಲ್ಪ ಕಾದಮೇಲೆ ಅದಕ್ಕೆ ರುಬ್ಬಿಕೊಂಡ ಮಾವಿನ ಹಣ್ಣಿನ ರಸ, ಸಕ್ಕರೆ ಮತ್ತು ತೆಂಗಿನ ತುರಿಯನ್ನು ಹಾಕಿ ಸೌಟು ಮತ್ತು ಕೈಗೆ ಕೆಲಸ ನೀಡಿ. ಎಲ್ಲ ಚೆನ್ನಾಗಿ ಕೂಡಿಕೊಳ್ಳುವವರೆಗೆ ಮತ್ತು ಸಕ್ಕರೆ ಕರಗುವವರವಗೆ ಕೈ ಆಡಿಸುತ್ತಲೇ ಇರಿ. ಮಿಶ್ರಣ ತಳಬಿಟ್ಟು ಬಂದಂತೆ ಉರಿಯಿಂದ ಕೆಳಗಿಳಿಸಿ.
ಈ ಮಿಶ್ರಣವನ್ನು ತುಪ್ಪ ಸವರಿದ ಅಗಲವಾದ ತಟ್ಟೆಗೆ ಹಾಕಿ ಹರವಿ. ಅಲ್ಲಲ್ಲಿ ಕತ್ತರಿಸಿದ ಗೋಡಂಬಿ, ಪಿಸ್ತಾ, ಬಾದಾಮಿಯನ್ನು ಅಂಟಿಸಿ ಅಲಂಕರಿಸಿಕೊಳ್ಳಿ. ಸ್ವಲ್ಪ ಆರಿದ ನಂತರ ಬೇಕಾದ ಆಕಾರದಲ್ಲಿ ತುಂಡು ಮಾಡಿರಿ. ಒಮ್ಮೆ ರುಚಿ ಹತ್ತಿದರೆ ಸಾಕು, ಆನಂತರ ಮಾಡುತ್ತಲೇ ಇರುವಿರಿ.



Click it and Unblock the Notifications
