Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಸಿಹಿಪಾಕಶಾಲೆ:ಹೊಸಬಗೆಯ ಗಸಗಸೆ ಹಲ್ವಾ
ಸುಲಭವಾಗಿ ಮಾಡಬಹುದಾದಹಲ್ವಾಗಳಲ್ಲಿ ಗಸಗಸೆ ಹಲ್ವ ಕೂಡ ಒಂದು.ಇಲ್ಲಿ ಕೊಟ್ಟಿರುವ ವಿಧಾನದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಂಡು ಕಲ್ಲಂಗಡಿ ಹಣ್ಣಿನ ಬೀಜ ಹಾಗೂ ಸಿಹಿಗುಂಬಳ ಕಾಯಿ ಬೀಜಗಳ ಹಲ್ವಾವನ್ನು ತಯಾರಿಸಬಹುದು.
ಬೇಕಾಗುವ ಪದಾರ್ಥಗಳು:
ಗಸಗಸೆ:1ಕಪ್
ಸಕ್ಕರೆ:ಒಂದುಕಾಲು ಕಪ್
ತುಪ್ಪ : 2 ಟೇಬಲ್ ಚಮಚ
ಹಾಲು: ಗಸಗಸೆಯನ್ನು ರುಬ್ಬಲು ಸ್ವಲ್ಪ
ಜಾಕಾಯಿಪುಡಿ ಸ್ವಲ್ಪ
ಮಾಡುವ ವಿಧಾನ:
*ಗಸಗಸೆಯನ್ನು ಬಿಸಿ ನೀರಿನಲ್ಲಿ 4 ಅಥವಾ 5 ಗಂಟೆ ನೆನೆಸಿರಿ .
*ಅಧಿಕವಾದ ನೀರನ್ನು ಬಸಿದು, ಸ್ವಲ್ಪ ಹಾಲು ಸೇರಿಸಿ ಗಸಗಸೆಯನ್ನು ಮೃದುವಾದ ಪೇಸ್ಟ್ ನಂತೆ ರುಬ್ಬಿರಿ.
*ಈ ಪೇಸ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ, ಕುಕ್ಕರ್ ನಲ್ಲಿಟ್ಟು ಒಂದು ವಿಷಲ್ ಬರುವವರೆಗೂ ಬೇಯಿಸಿ.
*ಇದನ್ನು ತಣ್ಣಗಾಗಿಸಿ, ಸಕ್ಕರೆ ಸೇರಿಸಿ ದಪ್ಪ ತಳದ ಬಾಣಲೆಯಲ್ಲಿ ಸತತವಾಗಿ ಕಲೆಸುತ್ತಾ ಕುದಿಸಿರಿ.
*ಇದು ಬಾಣಲೆಯ ಅಡಿಭಾಗಕ್ಕೆ ಅಂಟಿಕೊಳ್ಳುವಾಗ, ಸ್ವಲ್ಪಸ್ವಲ್ಪವಾಗಿ ತುಪ್ಪವನ್ನು ಸೇರಿಸಿ.
*ತೇವವೆಲ್ಲವೂ ಹೋಗಿ, ಹಲ್ವಾಗೆ ಹೊಳಪು ಬಂದ ನಂತರ, ಉಳಿದ ತುಪ್ಪ, ಜಾಕಾಯಿಪುಡಿ ಸೇರಿಸಿ, ಪಾತ್ರೆಯನ್ನು ಒಲೆಯ ಮೇಲಿಂದ ಇಳಿಸಿ.
ಬದಲಿ ವಿಧಾನ:
ಕಲ್ಲಂಗಡಿ ಹಣ್ಣಿನ ಬೀಜಗಳ ಹಲ್ವಾ:
ಸಿಪ್ಪೆ ಸುಲಿದ ಕಲ್ಲಂಗಡಿಹಣ್ಣಿನ ಬೀಜಗಳಿಗೆ ತಕ್ಕಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಕುಕ್ಕರಿನಲ್ಲಿ ಬೇಯಿಸಬೇಡಿ. ಈ ಮಿಶ್ರಣಕ್ಕೆ ಸಕ್ಕರೆ ಸೇರಿಸಿ. ಉಳಿದ ವಿಧಾನವನ್ನು ಮುಂದುವರೆಸಿರಿ. ಜಾಕಾಯಿಪುಡಿಯನ್ನು ಸೇರಿಸುವ ಅಗತ್ಯವಿರುವುದಿಲ್ಲ.
ಕುಂಬಳಕಾಯಿ ಬೀಜಗಳ ಹಲ್ವಾ :
ಸಿಪ್ಪೆ ಸುಲಿದಬೀಜಗಳನ್ನು 1 ಗಂಟೆ ನೀರಿನಲ್ಲಿ ನೆನೆಸಿಡಿ. ಬೀಜಗಳನ್ನು ನೀರಿನಿಂದ ಹೊರತಗೆದು, ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ ಅವುಗಳನ್ನು ಒರಟಾದ ಕಲ್ಲಿನ ಮೇಲೆ ಉಜ್ಜಿರಿ. ಬೀಜಗಳ ಮೇಲಿರುವ ಬಣ್ಣ ಹಾಗು ಹೊಟ್ಟು ಹೋಗುವವರೆಗೂ ಈ ವಿಧಾನವನ್ನು ಅನುಸರಿಸಿ. ನಂತರ ಬೀಜಗಳನ್ನು ಚೆನ್ನಾಗಿ ತೊಳೆದು, ಮೇಲೆ ಹೇಳಿದ ವಿಧಾನವನ್ನು ಮುಂದುವರೆಸಿರಿ.
(ದಟ್ಸ್ ಕನ್ನಡ ಪಾಕಶಾಲೆ)



Click it and Unblock the Notifications
