Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕಾಜು ಕ್ಯಾರೆಟ್ ಡಿಲೈಟ್

ಬೇಕಾಗಿರುವ ಸಾಮಾನುಗಳು
1 ಕ್ಯಾರೆಟ್
50 ಗ್ರಾಂ ಗೋಡಂಬಿ (ಸ್ವಲ್ಪಹೊತ್ತು ಹಾಲಿನಲ್ಲಿ ನೆನೆಸಿ, ರುಬ್ಬಿಕೊಳ್ಳಬೇಕು)
2 ಬಟ್ಟಲು ಹಾಲು
50 ಗ್ರಾಂ ಸಕ್ಕರೆ (ಸಿಹಿ ಜಾಸ್ತಿ ಬೇಕು ಅಂದ್ರೆ 100 ಗ್ರಾಂ ಸಕ್ಕರೆ ಹಾಕಿಕೊಳ್ಳಬಹುದು)
ತುಪ್ಪ 1 ಚಮಚ
ಮಾಡುವ ವಿಧಾನ:
ಮೊದಲು ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಕ್ಯಾರೆಟ್ನ ಹಸಿ ವಾಸನೆ ಹೋಗೋವರೆಗೂ ಹುರಿದುಕೊಳ್ಳಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಕಾಯಿಸಿ (2 ಕಪ್ ಹಾಲು 1 ಕಪ್ ಆಗೋತನಕ ಕಾಯಿಸಬೇಕು). ಹಾಲು ಕಾದ ನಂತರ ಅದಕ್ಕೆ ಸಕ್ಕರೆಯನ್ನು ಹಾಕಿ ಕೈಯಾಡಿಸಿ ಕರಗಿಸಿ. ಸಕ್ಕರೆ ಕರಗಿದ ನಂತರ ರುಬ್ಬಿಕೊಂಡ ಗೋಡಂಬಿ ಮತ್ತು ಹುರಿದಿಟ್ಟ ಕ್ಯಾರೆಟ್ ಹಾಕಿ 3ರಿಂದ 4 ನಿಮಿಷ ಸಣ್ಣ ಉರಿಯಲ್ಲಿ ಕುದಿಸಬೇಕು. ನೆನಪಿರಲಿ ಇದು ತಳ ಹೊತ್ತುವ ಸಾಧ್ಯತೆಗಳು ಜಾಸ್ತಿ ಇರುವುದರಿಂದ ಕೈಯಾಡುತ್ತಿರಲೇ ಇರಬೇಕು. ಕುದಿಸಿದ್ದು ಸಾಕು ಅನಿಸಿದ ನಂತರ ಇದನ್ನು ಒಲೆಯ ಮೇಲಿನಿಂದ ಕೆಳಗಿಳಿಸಿ, ಸ್ವಲ್ಪ ಹೊತ್ತು ಆರಲು ಬಿಡಿ.
ತಣ್ಣಗೆ ತಿನ್ನಲು ಇಷ್ಟಪಡುವವರು, ಇದನ್ನು ಸ್ವಲ್ಪ ಹೊತ್ತು fridgeನಲ್ಲಿ ಇಟ್ಟು ತಂಪು ಮಾಡಿಕೊಂಡು ತಿನ್ನಬಹುದು. ನಿಮ್ಮ ಪ್ರೀತಿ ಪಾತ್ರರ ಜೊತೆ ಹಂಚಿಕೊಂಡು ತಿಂದರೆ ಇನ್ನೂ ಒಳ್ಳೆ ರುಚಿ ಸಿಗುತ್ತದೆ.



Click it and Unblock the Notifications
