Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ವಡಾ ಪಾವ್ ಅಲ್ಲ, ಇದು ಬಾಯಿ ನೀರೂರಿಸುವ ದಾಬೆಲಿ

ಬಾಯಿಯಲ್ಲಿ ನೀರೂರಿಸುವಂತಹ ಈ ತಿಂಡಿಯನ್ನು ಸುಲಭವಾಗಿ ಮಾಡಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
1 ಕೆಂಪು ಮೆಣಸು
1 ಚಮಚ ಕೊತ್ತಂಬರಿ
1/2 ಇಂಚಿನಷ್ಟು ಚಕ್ಕೆ
2 ಲವಂಗ
1/4 ಚಮಚ ಜೀರಿಗೆ
ಇತರ ಸಾಮಾಗ್ರಿಗಳು:
1 ಕಪ್ ಆಲೂಗೆಡ್ಡೆ (ಬೇಯಿಸಿ ಹಿಸುಕಿದ್ದು)
ಅರ್ಧ ಚಮಚ ಜೀರಿಗೆ
ಚಿಟಿಕೆಯಷ್ಟು ಇಂಗು
ಈರುಳ್ಳಿ (ಕತ್ತರಿಸಿದ್ದು)
ಖರ್ಜೂರದ ಅಥವಾ ಹುಣಸೆ ಹಣ್ಣಿನ ಚಟ್ನಿ
2 ಚಮಚ ಎಣ್ಣೆ
ರುಚಿಗೆ ತಕ್ಕ ಉಪ್ಪು
ಬನ್ಸ್
1 ಚಮಚ ಬೆಲ್ಲದ ಪಾಕ
ಅಲಂಕಾರಕ್ಕೆ
1 ಈರುಳ್ಳಿ
ಸ್ವಲ್ಪ ನೆಲೆಗಡಲೆ (ರೋಸ್ಟ್ ಮಾಡಿದ್ದು)
ಅರ್ಧ ಕಪ್ ಸೇವ್
ತಯಾರಿಸುವ ವಿಧಾನ:
* ಮೇಲೆ ಹೇಳಿದ ಸಾಮಾಗ್ರಿಗಳನ್ನು 2-3 ನಿಮಿಷ ಹುರಿಯಬೇಕು. ನಂತರ ಅವುಗಳನ್ನು ನುಣ್ಣಗೆ ಪುಡಿ ಮಾಡಬೇಕು. (ಇದೇ ದಾಬೆಲಿ ಮಸಾಲ)
* ಈಗ ತವಾವನ್ನು ಬಿಸಿ ಮಾಡಿ ಅದಕ್ಕೆ ಜೀರಿಗೆ, ದಾಬೆಲಿ ಮಸಾಲ, ಆಲೂಗೆಡ್ಡೆ, ರುಚಿಗೆ ತಕ್ಕ ಉಪ್ಪು, ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಬೇಕು. ನಂತರ ಉರಿಯಿಂದ ತೆಗೆಯಬೇಕು.
* ನಂತರ ಈ ಮಿಶ್ರಣಕ್ಕೆ 1 ಚಮಚ ಖರ್ಜೂರ ಚಟ್ನಿ ಅಥವಾ ಹುಣಸೆ ಹಣ್ಣಿನ ಚಟ್ನಿ ಹಾಕಬೇಕು.
* ಈಗ ಬರ್ಗರ್ ಬನ್ಸ್ ಕಟ್ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಹಾಕಿ ಬಿಸಿ ಮಾಡಿ.
* ಈಗ ಬನ್ ಒಳಗೆ ಆಲೂಗೆಡ್ಡೆ ಮಿಶ್ರಣ, ಸೇವ್, ಕತ್ತರಿಸಿದ ಈರುಳ್ಳಿ, ಹುರಿದ ನೆಲಗಡಲೆ, ಮೇಲೆ ಸ್ವಲ್ಪ ಬೆಲ್ಲದ ಪಾಕ (ಬೆಲ್ಲದ ಪಾಕ ನಿಮ್ಮ ಆಯ್ಕೆಗೆ ಬಿಟ್ಟದ್ದು) ಹಾಕಿದರೆ ದಾಬೆಲಿ ರೆಡಿ.



Click it and Unblock the Notifications
