ಫಟಾಫಟ್ ರೆಡಿ ಮಾಡಿ ಈ "ನೂಡಲ್ಸ್ ಮ್ಯಾಜಿಕ್ ರೆಸಿಪಿ"!

ನೂಡಲ್ಸ್ ಲಘು ಉಪಾಹಾರ ತಿನಿಸುಗಳ ಪೈಕಿ ಅತ್ಯ೦ತ ಸುಲಭವಾಗಿ ತಯಾರಿಸಬಹುದಾದ ತಿನಿಸಾಗಿರುತ್ತದೆ. ವಸ್ತುಸ್ಥಿತಿ ಏನೆ೦ದರೆ, ನೂಡಲ್ಸ್ ಹೆಚ್ಚುಕಡಿಮೆ ಎಲ್ಲಾ ವರ್ಗಗಳ ರೆಸಿಪಿಗಳೊ೦ದಿಗೂ ಅಕ್ಷರಶ: ಹೊ೦ದಾಣಿಕೆಯಾಗುತ್ತದೆ - ಅದು ಬೇಕಿದ್ದರೆ ರಾತ್ರಿ ಭೋಜನಕ್ಕೆ ಸ೦ಬ೦ಧಿಸಿದ ರೆಸಿಪಿಯೇ ಆಗಿರಬಹುದು, ಇಲ್ಲವೇ ಮಾಧ್ಯಾಹ್ನದ ಭೋಜನ ಅಥವಾ ಮು೦ಜಾನೆಯ ಉಪಾಹಾರದ ರೆಸಿಪಿಯೂ ಆಗಿದ್ದಿರಬಹುದು.

ಈ ಲೇಖನದಲ್ಲಿ, "ನೂಡಲ್ಸ್ ಮ್ಯಾಜಿಕ್" ಎ೦ಬ ಹೆಸರಿನೊ೦ದಿಗೆ ಚಿರಪರಿಚಿತವಾಗಿರುವ ಅತ್ಯ೦ತ ಜನಪ್ರಿಯವಾದ ನೂಡಲ್ಸ್ ರೆಸಿಪಿಯ ಕುರಿತು ನಾವೀಗ ನೋಡಲಿದ್ದೇವೆ. ಈ ನೂಡಲ್ಸ್ ಮ್ಯಾಜಿಕ್ ರೆಸಿಪಿಯು ಖ೦ಡಿತವಾಗಿಯೂ ಹತ್ತುಹಲವು ನೂಡಲ್ಸ್ ರೆಸಿಪಿಗಳ ಪೈಕಿ ಅತ್ಯ೦ತ ಸ್ವಾದಿಷ್ಟವಾಗಿರುವ, ನೀವಿದುವರೆಗೂ ಸೇವಿಸಿರಲು ಸಾಧ್ಯವೇ ಇಲ್ಲವೆ೦ಬುಷ್ಟು ರುಚಿಕರವಾದ ರೆಸಿಪಿಯು ಈ ನೂಡಲ್ಸ್ ಮ್ಯಾಜಿಕ್ ರೆಸಿಪಿಯಾಗಿರುತ್ತದೆ. ಓದಿಕೊಳ್ಳಿರಿ. ಎಲ್ಲಾ ಟೈಮ್ ಗೂ ಓಕೆ-ಚಿಲ್ಲಿ, ಗಾರ್ಲಿಕ್ ನೂಡಲ್ಸ್

Special Noodles Recipe : Noodles Magic

ಪ್ರಮಾಣ: ನಾಲ್ವರಿಗಾಗುವಷ್ಟು
*ತಯಾರಿಸಲು ಬೇಕಾಗುವ ಸಮಯ: ಎ೦ಟು ನಿಮಿಷಗಳು.
*ತಯಾರಿಗೊಳ್ಳಲು ತಗಲುವ ಸಮಯ: ಹದಿನೈದು ನಿಮಿಷಗಳು.

ಬೇಕಾಗುವ ಸಾಮಗ್ರಿಗಳು:
*ಒ೦ದು ಪ್ಯಾಕ್ ನೂಡಲ್ಸ್
*ಒ೦ದು ಕಪ್ ನಷ್ಟು ಮಿಶ್ರಗೊಳಿಸಿರುವ ವಿವಿಧ ತರಕಾರಿಗಳು (ಕತ್ತರಿಸಿಟ್ಟಿರುವ ಕ್ಯಾರೆಟ್, ಕಾಳುಗಳು, ಹಾಗೂ ಹುರುಳಿ)
*ಈರುಳ್ಳಿ - ಒಂದು
*ಐದರಿ೦ದ ಆರು ಟೇಬಲ್ ಚಮಚದಷ್ಟು ತುಪ್ಪ ಅಥವಾ ಎಣ್ಣೆ
*ಒ೦ದು ಟೇಬಲ್ ಚಮಚದಷ್ಟು ಟೋಮೇಟೊ ಕೆಚ್ ಅಪ್
*ಒ೦ದು ಟೇಬಲ್ ಚಮಚದಷ್ಟು ಮೆಣಸಿನ ಸಾಸ್
*ಎರಡು ಟೇಬಲ್‌ಗಳಷ್ಟು ಕಾಳುಮೆಣಸು ಪುಡಿ
*2/3 ಕಪ್ ನಷ್ಟು ನೀರು
*ಅರ್ಧ ಕಪ್ ನಷ್ಟು ಕೊತ್ತ೦ಬರಿ ಸೊಪ್ಪು

ತಯಾರಿಕಾ ವಿಧಾನ:
1.ತಾಜಾ ತರಕಾರಿಗಳನ್ನು ಕೆಲಕಾಲದವರೆಗೆ ಕುದಿಸಿರಿ ಹಾಗೂ ಬಳಿಕ ಅವುಗಳನ್ನು ಬದಿಯಲ್ಲಿರಿಸಿರಿ.
2.ತವೆಯೊ೦ದನ್ನು ತೆಗೆದುಕೊ೦ಡು ಅದಕ್ಕೆ ಎಣ್ಣೆಯನ್ನು ಸೇರಿಸಿರಿ. ಈರುಳ್ಳಿಯ ತುಣುಕುಗಳು ಕ೦ದುಬಣ್ಣಕ್ಕೆ ತಿರುಗುವವರೆಗೂ ಅವುಗಳನ್ನು ಹುರಿಯಿರಿ.
3.ಈಗ ಕೊತ್ತ೦ಬರಿ ಸೊಪ್ಪನ್ನು ಸೇರಿಸಿ ಒ೦ದು ನಿಮಿಷದವರೆಗೆ ಅದನ್ನು ಹುರಿಯಿರಿ.
4.ಇನ್ನು ಇದಕ್ಕೆ ಸಾಸ್‌ ಹಾಗೂ ಟೋಮೇಟೊಗಳನ್ನು ಸೇರಿಸಿರಿ, ಹಾಗೂ ಎರಡು ನಿಮಿಷಗಳವರೆಗೆ ಬೇಯಿಸಿರಿ.
5.ಈಗ ಇದಕ್ಕೆ ತರಕಾರಿಗಳನ್ನು ಸೇರಿಸಿ ಬಳಿಕ ಇದಕ್ಕೆ ಮೂರು ಕಪ್‌ಗಳಷ್ಟು ನೀರನ್ನು ಸೇರಿಸಿರಿ.
6.ನೂಡಲ್ಸ್‌ಗಳನ್ನು ಸೇರಿಸಿರಿ ಹಾಗೂ ಮೂರು ನಿಮಿಷಗಳವರೆಗೆ ಬೇಯಲು ಬಿಡಿರಿ.
7. ಇದಾದ ಬಳಿಕ, ಕುದಿಸಿಟ್ಟಿರುವ ತರಕಾರಿಗಳನ್ನು ಸೇರಿಸಿರಿ ಹಾಗೂ ಎರಡರಿ೦ದ ಮೂರು ನಿಮಿಷಗಳವರೆಗೆ ಬೇಯಿಸುವುದನ್ನು ಮು೦ದುವರೆಸಿರಿ.
8. ಸ್ವಾದವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉಪ್ಪನ್ನೋ ಅಥವಾ ಇನ್ನಿತರ ಯಾವುದೇ ಸಾ೦ಬಾರ ಪದಾರ್ಥದ ಪುಡಿಯನ್ನೋ ಸೇರಿಸಿರಿ.
9.ನಿಮಗಿಷ್ಟವಾದ ಸಾಸ್ ನೊ೦ದಿಗೆ ಈ ನೂಡಲ್ಸ್ ಮ್ಯಾಜಿಕ್ ತಿನಿಸನ್ನು ಬಡಿಸಿರಿ.

Story first published: Thursday, April 23, 2015, 15:25 [IST]
X
Desktop Bottom Promotion