Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕುರುಕಲು ತಿಂಡಿಗಿಂತ ಲೇಸು ಈ ಆರೋಗ್ಯಕರ ವಡೆ

ಬೇಕಾಗುವ ಸಾಮಾಗ್ರಿಗಳು:
* ಕತ್ತರಿಸಿದ ಈರುಳ್ಳಿ 4-5
* 2 ಕಪ್ ಮೈದಾ
* 1/4 ಕಪ್ ನೀರು
* 4 ಚಮಚ ಎಳ್ಳು
* ಎಣ್ಣೆ
* 1 ಚಮಚ ಅಡುಗೆ ಸೋಡಾ
* 3 ಕತ್ತರಿಸಿದ ಹಸಿ ಮೆಣಸಿನ ಕಾಯಿ
* ಒಂದು ಹಿಡಿಯಷ್ಟು ಕತ್ತರಿಸಿದ ಕೊತ್ತಂಬರಿ ಸೊಪ್ಪು
* 2 ಚಮಚ ಸಕ್ಕರೆ
* 1 ಚಮಚ ಉಪ್ಪು
ಸಲಹೆಗಳು:
1. ಹಿಟ್ಟನ್ನು ಕಲೆಸುವಾದ ಸ್ವಲ್ಪ ನೀರು ಮಾತ್ರ ಹಾಕಬೇಕು. ಹಿಟ್ಟನ್ನು ಕಲಿಸಿ ಮಸ್ಲೀನ್ ಬಟ್ಟೆಯಿಂದ ಮುಚ್ಚಿಡಬೇಕು.
2. ನಂತರ ಹಿಟ್ಟನ್ನು ಸ್ವಲ್ಪ-ಸ್ವಲ್ಪ ತೆಗೆದು ತೆಳುವಾಗಿ ವಡೆಯಷ್ಟು ಅಗಲದಲ್ಲಿ ತಟ್ಟಬೇಕು. ಈ ರೀತಿ ತಟ್ಟಿ ಫೋರ್ಕ್ ನಿಂದ ಅದರ ಮೇಲೆ ಗೀರಲು (ಚುಚ್ಚಲು) ಮರೆಯಬಾರದು.
3. ತುಂಬಾ ಬೇಯಿಸಬಾರದು. ಕಂದು ಬಣ್ಣ ಬರುವವಾಗ ಓವನ್ ನಿಂದ ತೆಗದು ಬಿಡಬೇಕು. ಏಕೆಂದರೆ ತುಂಬಾ ಬೆಂದರೆ ತಿಂಡಿ ಗಟ್ಟಿ ಮತ್ತು ಕಹಿಯಾಗುವುದು. ತಯಾರಿಸಿದ ತಿಂಡಿಯನ್ನು ಗಾಳಿ ಸೇರದ ಡಬ್ಬಿಯಲ್ಲಿ ಮುಚ್ಚಿಟ್ಟರೆ ಸ್ವಲ್ಪ ದಿನಗಳವರೆಗೆ ಬಳಸಬಹುದು.
ತಯಾರಿಸುವ ವಿಧಾನ:
1. ಒಂದು ಬಟ್ಟಲು ತೆಗೆದು ಅದರಲ್ಲಿ ಮೈದಾ, ಎಳ್ಳು, ಕತ್ತರಿಸಿದ ಈರುಳ್ಳಿ, ಅಡುಗೆ ಸೋಡಾ, ಸಕ್ಕರೆ, ಉಪ್ಪು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನಂತರ ಸ್ವಲ್ಪ ಬಿಸಿ ಎಣ್ಣೆ ಹಾಕಿ ಮಿಶ್ರ ಮಾಡಬೇಕು.
2. ಈಗ ಬಿಸಿ ನೀರನ್ನು ಸ್ವಲ್ಪ ಹಾಕಿ ಮಿಶ್ರಣದಿಂದ ಹಿಟ್ಟನ್ನು ಕಲೆಸಿಕೊಳ್ಳಬೇಕು. ಈರುಳ್ಳಿ ಜಾಸ್ತಿಯಾಯಿತು ಎಂದು ಬೇಸರ ಪಡಬೇಡಿ. ಜಾಸ್ತಿ ಈರುಳ್ಳಿ ಇದ್ದಷ್ಟು ತಿಂಡಿಯ ರುಚಿ ಹೆಚ್ಚುವುದು.
3. ನಂತರ ಹಿಟ್ಟನ್ನು ಮಸ್ಲೀನ್ ಬಟ್ಟೆಯಲ್ಲಿ ಮುಚ್ಚಿ 30 ನಿಮಿಷ ಇಡಬೇಕು.
4. ಈಗ ಅವನ್ ಅನ್ನು ಮುಂಚಿತವಾಗಿ 325 Fಗೆ ಬಿಸಿ ಮಾಡಬೇಕು.
5. ನಂತರ ಕಲೆಸಿದ ಹಿಟ್ಟಿನಿಂದ ತೆಳುವಾದ ವಡೆಗಳನ್ನು ತಟ್ಟಬೇಕು.
6. ನಂತರ ವೃತ್ತಾಕಾರವಾದ ವಡೆಯನ್ನು ಎಣ್ಣೆ ಸವರಿದ ಬೇಯಿಸುವ ಶೀಟ್ ನಲ್ಲಿಟ್ಟು, ವಡೆಯನ್ನು ಫೋರ್ಕ್ ನಿಂದ ಚುಚ್ಚಿ ತೂತ ಮಾಡಬೇಕು.
7. ನಂತರ 25-30 ನಿಮಿಷ ಬೇಯಿಸಬೇಕು. ಮೊದಲೇ ಹೇಳಿದಂತೆ ತುಂಬಾ ಬೇಯಿಸಬೇಡಿ. ಕಂದು ಬಣ್ಣ ಬರುವಾಗ ತೆಗೆದರೆ ರುಚಿಕರವಾದ ಈರುಳ್ಳಿ ವಡೆ ರೆಡಿ.



Click it and Unblock the Notifications
