Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರುಚಿಯಾದ ಮಸಾಲ ಕುಲ್ಚಾ ರೆಸಿಪಿ
ಉತ್ತರ ಭಾರತದ ಪ್ರಮುಖ ಆಹಾರವಾಗಿರುವ ಕುಲ್ಚಾ ದಕ್ಷಿಣ ಭಾರತದಲ್ಲೂ ಪ್ರಸಿದ್ಧಿಯನ್ನು ಪಡೆದಿದೆ. ಇದನ್ನು ಸಾಮಾನ್ಯವಾಗಿ ಉಪ್ಪಿನಕಾಯಿ ಅಥವಾ ಸಾಸ್ ಜೊತೆ ತಿನ್ನಲು ಕೊಡಲಾಗುವುದು. ಕುಲ್ಚಾದಲ್ಲಿ ಮಸಾಲ ಕುಲ್ಚಾ ಅಂತೂ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಈ ಮಸಾಲ ಕುಲ್ಚಾವನ್ನು ಮನೆಯಲ್ಲಿಯೇ ತಯಾರಿಸಬಹುದಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಮೈದಾ ಹಿಟ್ಟು ಅರ್ಧ ಕೆಜಿ
* ಮೊಸರು 3 ಚಮಚ
* ಹಾಲು ಒಂದು ಕಪ್ (ಬಿಸಿಯಾದ ಹಾಲು)
* ಸಕ್ಕರೆ ಒಂದು ಚಮಚ
* ಈಸ್ಟ್ ಒಂದೂವರೆ ಚಮಚ (ಅಂಗಡಿಯಲ್ಲಿ ದೊರೆಯುತ್ತದೆ)
* ತುಪ್ಪ 2-3 ಚಮಚ
* ರುಚಿಗೆ ತಕ್ಕ ಉಪ್ಪು
* ಅರ್ಧಚಮಚ ಅಡುಗೆ ಸೋಡಾ
* ತುಪ್ಪ
ಉಳಿದ ಸಾಮಾಗ್ರಿಗಳು:
* 5-6 ಆಲೂಗೆಡ್ಡೆ
* 3-4 ಈರುಳ್ಳಿ(ಕತ್ತರಿಸಿದ್ದು)
* ಒಂದು ಚಮಚ ಹಸಿಮೆಣಸಿನಕಾಯಿ ಪೇಸ್ಟ್
* ತುಪ್ಪ 2-3 ಚಮಚ
* ಶುಂಠಿ ಪೇಸ್ಟ್ 1 ಚಮಚ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಈಸ್ಟ್ ಅನ್ನು ಸ್ವಲ್ಪ ಬಿಸಿನೀರಿನಲ್ಲಿ ಹಾಕಿ ಅದಕ್ಕೆ ಒಂದು ಚಮಚ ಸಕ್ಕರೆ ಹಾಕಿ 10 ನಿಮಿಷ ಇಡಬೇಕು. ನಂತರ ಅರ್ಧ ಚಮಚ ನಿಂಬೆ ರಸ ಹಾಕಿ ಮಿಶ್ರ ಮಾಡಬೇಕು.
2. ನಂತರ ಮೈದಾ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಅದರಲ್ಲಿ ಮೊಸರು, ಹಾಲು, ಸಕ್ಕರೆ, ಅಡುಗೆ ಸೋಡಾ ಮತ್ತು ಒಂದು ಚಮಚ ತುಪ್ಪ ಹಾಗೂ ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ತಿರುಗಿಸಬೇಕು.
2. ನಂತರ ಈ ಮಿಶ್ರಣಕ್ಕೆ ಸ್ವಲ್ಪ ನೀರು ಮತ್ತು ತಯಾರಿಸಿಟ್ಟ ಈಸ್ಟ್ ಹಾಕಿ ಮಿಶ್ರ ಮಾಡಿ 2 ಗಂಟೆಗಳ ಕಾಲ ಇಡಬೇಕು.
3. ನಂತರ ಆಲೂಗೆಡ್ಡೆಯನ್ನು ಬೇಯಿಸಿ ಅದರ ಸಿಪ್ಪೆ ಸುಲಿದು ಅದನ್ನು ಚೆನ್ನಾಗಿ ಹಿಸುಕಬೇಕು ನಂತರ ಈರುಳ್ಳಿ, ಹಸಿಮೆಣಸಿಕಾಯಿ ಪೇಸ್ಟ್, ಶುಂಠಿ ಪೇಸ್ಟ್ ಮತ್ತು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
4. ನಂತರ ಮೈದಾ ಮಿಶ್ರಣದಿಂದ ಸ್ವಲ್ಪ ದೊಡ್ಡ ನಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿ ಅದನ್ನು ಬೆರಳಿನಿಂದ ಗುಂಡಿ ರೀತಿ ಮಾಡಿ ಆಲೂಗೆಡ್ಡೆಯ ಮಿಶ್ರಣವನ್ನು ಹಾಕಬೇಕು. ನಂತರ ಇದನ್ನು ಕುಲ್ಚಾಕ್ಕೆ ಲಟ್ಟಿಸಬೇಕು.
5. ನಂತರ ತವಾನ್ನು ಬಿಸಿ ಮಾಡಿ ಅದರಲ್ಲಿ ತುಪ್ಪ ಹಾಕಿ ಅದರಲ್ಲಿ ಲಟ್ಟಿಸಿದ ಕುಲ್ಚಾ ಹಾಕಿ ಬೇಯಿಸಬೇಕು, ನಂತರ ಇದನ್ನು ಒಮ್ಮೆ ಮಗುಚಿ ಹಾಕಿ ಬೇಯಿಸಬೇಕು, ಕುಲ್ಚಾದ ಎರಡು ಬದಿ ಕಂದು ಬಣ್ಣಕ್ಕೆ ಬರುವವರೆಗೆ ಬೇಯಿಸಿ ತೆಗೆದರೆ ಮಸಾಲ ಕುಲ್ಚಾ ರೆಡಿ.
ಇದನ್ನು ಉಪ್ಪಿನ ಕಾಯಿ ಅಥವಾ ಟೊಮೆಟೊ ಸಾಸ್ ಜೊತೆ ತಿನ್ನಲು ರುಚಿಯಾಗಿರುತ್ತದೆ.



Click it and Unblock the Notifications
