Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನೀವು ಮಂಗಳೂರು ಬನ್ಸ್ ರೆಸಿಪಿಯ ರುಚಿ ನೋಡಿದಿರಾ?
ಸಂಜೆಗೆ ಬಿಸಿ ಬಿಸಿ ಚಹಾದೊಂದಿಗೆ ರುಚಿ ರುಚಿ ಖಾದ್ಯ ಇದ್ದರೆ ಅದರ ಅನುಭವವೇ ಬೇರೆ. ಊಟಕ್ಕೆ ಉಪ್ಪಿನಕಾಯಿ ಎಂಬಂತೆ ಚಹಾದ ರುಚಿಯನ್ನು ಸಂಜೆಯ ಕುರುಕಲು ಹೆಚ್ಚಿಸುತ್ತದೆ. ಹಿತಮಿತವಾಗಿ ತಯಾರಿಸಬಹುದಾದ ಸಂಜೆಯ ಸ್ನ್ಯಾಕ್ಸ್ ಐಟಂಗಳು ನಿಮಗೆ ಕೊಬ್ಬಿನ ತೊಂದರೆಯನ್ನು ಖಂಡಿತ ಉಂಟು ಮಾಡುವುದಿಲ್ಲ.
ಬೆಳಗ್ಗಿನ ಉಪಹಾರಕ್ಕಾಗಿ ರುಚಿಕರವಾದ ಆಮ್ಲೇಟ್ ರೆಸಿಪಿ!
ಇಲ್ಲಿ ನಾವು ನೀಡಿರುವ ತಿಂಡಿಯು ಖಂಡಿತ ನಿಮಗೆ ಸಂಜೆಗೆ ಒಂದು ಒಳ್ಳೆಯ ಸಂಗಾತಿಯಾಗುತ್ತದೆ. ಹೆಚ್ಚು ಎಣ್ಣೆಯನ್ನು ಎಳೆಯದೇ ಮನೆಯಲ್ಲೇ ಆರೋಗ್ಯವಾಗಿ ತಯಾರಿಸಬಹುದಾದ ಈ ತಿಂಡಿ ಆರೋಗ್ಯಕ್ಕೂ ಉತ್ತಮ.
ಬನ್ನಿ ಹಾಗಿದ್ದರೆ ಇಂದಿನ ಸವಿಯಾದ ಬಿಸಿಯಾದ ಸಂಜೆಯ ಸ್ನ್ಯಾಕ್ಸ್ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಈ ಸ್ನ್ಯಾಕ್ಸ್ ಬೇರಾವುದೂ ಅಲ್ಲ ದಕ್ಷಿಣ ಕನ್ನಡದಲ್ಲಿ ಪ್ರಸಿದ್ಧಿ ಪಡೆದಿರುವ ಬನ್ಸ್ ಆಗಿದೆ. ಕೆಳಗೆ ಅದನ್ನು ಹೇಗೆ ತಯಾರಿಸುವುದು ಎಂಬ ಸರಳವಾದ ವಿವರಣೆಯ ಮಾಹಿತಿಯನ್ನು ನಾವು ನೀಡಿದ್ದು ನೀವೂ ಒಮ್ಮೆ ಪ್ರಯತ್ನಿಸಿ
ರುಚಿ ರುಚಿಯಾದ ಕಡ್ಲೆಬೇಳೆ ಆಂಬೋಡೆ ರೆಸಿಪಿ!

ಹಾಗಾದರೆ ಇನ್ನೇಕೆ ತಡ? ಬನ್ನಿ ಈವತ್ತು ಸಂಜೆ ಇದರಿಂದಲೇ ಒಂದು ರುಚಿಕರವಾದ ತಿಂಡಿ ಮಾಡಿ ಹಾಗೂ ನಿಮ್ಮ ಮನೆಯವರನ್ನು ಇನ್ನಷ್ಟು ಸಂತೋಷಗೊಳಿಸಿ.
ಬೇಕಾಗುವ ಸಾಮಾಗ್ರಿಗಳು:
*ಬಾಳೆಹಣ್ಣು -2
*ಮೈದಾ- 1 ಕಪ್
*ಸಕ್ಕರೆ - 3 ಚಮಚ
*ಉಪ್ಪು- ರುಚಿಗೆ ತಕ್ಕಷ್ಟು
*ಎಳ್ಳು- 1 ಚಮಚ
*ಓಮ- 1 ಚಮಚ
*ಜೀರಿಗೆ - 1 ಚಮಚ
*ಮೊಸರು - 1 ಕಪ್
*ಕರಿಯಲು ಎಣ್ಣೆ
ಬಾಯಿಯಲ್ಲಿ ನೀರೂರಿಸುವ ಮಂಗಳೂರು ಬಜ್ಜಿ ರೆಸಿಪಿ
ಮಾಡುವ ವಿಧಾನ:
*ಬಾಳೆಹಣ್ಣಿನ ಸಿಪ್ಪೆ ತೆಗೆದು, ಅದನ್ನು ಚೆನ್ನಾಗಿ ಕೈಯಿಂದ ಹಿಚುಕಬೇಕು. ನಂತರ ಮೇಲಿನ ಎಲ್ಲ ಸಾಮಗ್ರಿಗಳನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ 5-6 ಗಂಟೆ ಮುಚ್ಚಿ ಇಡಬೇಕು. ಸಂಜೆಯ ಚಹಾ ಜೊತೆ ಮಾಡಬೇಕಾದಲ್ಲಿ ಎಂಟು ಗಂಟೆ ಮೊದಲು ಹಿಟ್ಟು ತಯಾರಿಸಿ ಇಡಬೇಕು.
* ಹಿಟ್ಟನ್ನು ಸಣ್ಣ ಗಾತ್ರದ ಉಂಡೆಗಳನ್ನಾಗಿ ಮಾಡಿ ಹಾಗೂ ಮೈದಾಹಿಟ್ಟಿನಲ್ಲಿ ಹೊರಳಿಸಿ ಪೂರಿ ಆಕಾರಕ್ಕೆ ತನ್ನಿ. ಲಟ್ಟಣಿಗೆ ಏನೂ ಬೇಕಾಗಿಲ್ಲ, ಕೈಯಲ್ಲೇ ತಟ್ಟಿಕೊಳ್ಳಬಹುದು. ಹೆಚ್ಚು ತೆಳ್ಳಗಾಗುವ ಅಗತ್ಯವೂ ಇಲ್ಲ.
* ಬಾಣಲೆಗೆ ಎಣ್ಣೆ ಎರೆದು ಒಲೆಯ ಮೇಲೆ ಇಡಿ. ಬಿಸಿ ಎಣ್ಣೆಗೆ ಒಂದೊಂದೇ ಹಾಕಿ. ಉಬ್ಬಿ ಬರುತ್ತಿದ್ದ ಹಾಗೇ ಸೌಟಿನಿಂದ ಬಿಸಿ ಎಣ್ಣೆ ಚಿಮುಕಿಸುತ್ತಿರಿ. ಕೆಂಪಗಾಗಿ ಉಬ್ಬಿ ಬಂದ ಮೇಲೆ ಕವುಚಿ ಹಾಕಿ ಕೂಡಲೇ ತೆಗೆಯಿರಿ. ಎಲ್ಲವನ್ನೂ ಹೀಗೆ ಒಂದೊಂದೇ ಬೇಯಿಸಿ.
* ಬಿಸಿ ಬಿಸಿಯಾಗಿರುಬ ಬನ್ಸ್ ಅನ್ನು ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬರ್ ಜೊತೆ ಸವಿಯಿರಿ.



Click it and Unblock the Notifications
