Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಇಡ್ಲಿ ಮತ್ತು ಕ್ಯಾರೆಟ್‌ನ ಸ್ವಾದಿಷ್ಟಕರ ಉಪ್ಪಿಟ್ಟು

ಶಾಲೆಯಿಂದ ಮಕ್ಕಳು ಹೊಟ್ಟೆ ಹಸಿದು ಬಂದಾಗ ಈ ರೀತಿ ಮಾಡಿಕೊಟ್ಟರೆ ಹೊಟ್ಟೆಯೂ ತುಂಬುವುದು ಮತ್ತು ಇದರ ರುಚಿ ಎಲ್ಲರಿಗೆ ಇಷ್ಟವಾಗುತ್ತದೆ. ಇದನ್ನು ತಯಾರಿಸುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* 8-10 ಇಡ್ಲಿ
* 2-3 ಹಸಿಮೆಣಸಿನ ಕಾಯಿ (ಕತ್ತರಿಸಿದ್ದು)
* ಸಾಸಿವೆ
* ಒಂದು ಕತ್ತರಿಸಿದ ಈರುಳ್ಳಿ
* ಒಂದು ತುರಿದ ಕ್ಯಾರೆಟ್
* ಸ್ವಲ್ಪ ಕೊತ್ತಂಬರಿ ಸೊಪ್ಪು
* 1/4 ಚಮಚ ಅರಿಶಿಣ ಪುಡಿ
* 1/2 ಚಮಚ ಕೆಂಪು ಮೆಣಸಿನ ಪುಡಿ'
* ಚಿಟಿಕೆಯಷ್ಟು ಗರಂ ಮಸಾಲ ಪುಡಿ
* 1/4 ಚಮಚ ಮೆಂತೆ ಕಾಳು ಅಥವಾ ಸ್ವಲ್ಪ ಮೆಂತೆ ಸೊಪ್ಪು
* ಒಂದು ಟೊಮೆಟೊ (ಕತ್ತರಿಸಿದ್ದು)
* ಸ್ವಲ್ಪ ತುರಿದ ತೆಂಗಿನ ಕಾಯಿ
* ರುಚಿಗೆ ತಕ್ಕ ಉಪ್ಪು
* ಸ್ವಲ್ಪ ಕರಿಬೇವಿನ ಎಲೆ
ತಯಾರಿಸುವ ವಿಧಾನ:
1. ಇಡ್ಲಿಯನ್ನು ಕೈಯಿಂದ ಹಿಸುಕಿ ಪುಡಿಪುಡಿ ಮಾಡಬೇಕು.
2. ಈಗ ಬಾಣಲೆಯನ್ನು ಬಿಸಿಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಬೇಕು. ಅದಕ್ಕೆ ಸಾಸಿವೆ ಹಾಕಿ, ಸಾಸಿವೆ ಚಟಾಪಟ ಶಬ್ದ ಬರುವಾಗ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನ ಕಾಯಿ ಮತ್ತು ಟೊಮೆಟೊ ಹಾಕಬೇಕು.
3. ಈರುಳ್ಳಿ ಕಂದು ಬಣ್ಣ ಬರುವವರೆಗೆ ಮತ್ತು ಟೊಮೆಟೊ ಮೆತ್ತಗಾಗುವವರೆಗೆ ಚೆನ್ನಾಗಿ ಹುರಿಯಬೇಕು. ನಂತರ ಸೌಟ್ ನಿಂದ ಕುಟ್ಟಿ ಟೊಮೆಟೊವನ್ನು ಪೇಸ್ಟ್ ರೀತಿ ಮಾಡಬೇಕು.
4. ಈಗ ಮೆಂತೆ ಕಾಳು ಅಥವಾ ಮೆಂತೆ ಸೊಪ್ಪು, ಕರಿಬೇವಿನ ಎಲೆ ಹಾಕಿ ನಂತರ , ಚಿಟಿಕೆಯಷ್ಟು ಗರಂ ಮಸಾಲ, ತುರಿದ ಕ್ಯಾರೆಟ್ ,ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿದರೆ ಗೊಜ್ಜು ರೀತಿಯಾಗುತ್ತದೆ. ಬೇಕಿದ್ದರೆ 1/4 ಗ್ಲಾಸ್ ಸ್ವಲ್ಪ ನೀರು ಹಾಕಬಹುದು.
5. ಇದಕ್ಕೆ ಪುಡಿ ಮಾಡಿದ ಇಡ್ಲಿ ಹಾಕಿ ಹಾಕಿ ಮಿಶ್ರ ಮಾಡಿ ತೆಂಗಿನ ತುರಿ ಹಾಕಿ 3-4 ನಿಮಿಷ ಬಿಸಿ ಮಾಡಿದರೆ ರುಚಿಕರವಾದ ಇಡ್ಲಿ ಉಪ್ಪಿಟ್ಟು ರೆಡಿ. ನಂತರ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬೇಕು.



Click it and Unblock the Notifications
