Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಬಿಸಿ ಕಾಫಿ ಜೊತೆ ಗರಿಗರಿಯಾದ ಕಾರ್ನಫಿಂಗರ್ಸ್
ಮುಸ್ಸಂಜೆಯ ಮೈಮುದುರಿಸುವ ಚಳಿಯಲ್ಲಿ ಬಿಸಿ ಕಾಫಿ ಹೀರುತ್ತಾ ಗರಿಗರಿಯಾದ ಕಾರ್ನಫಿಂಗರ್ಸ್ ತಿಂದರೆ ಹೇಗೆ? ಆಹಾ! ಅನ್ನಿಸ್ತಿದೆ ಅಲ್ವಾ? ಬನ್ನಿ ಹಾಗಿದ್ದರೆ ಈವತ್ತು ಸಂಜೆ ಕಾಫಿ ಜೊತೆ ಈ ರುಚಿರುಚಿಯಾದ ತಿಂಡಿಯನ್ನು ಸವಿಯೋಣ. ನೀವು, ಕಾಫಿ ಮತ್ತು ಕಾರ್ನ್ ಫಿಂಗರ್ಸ್ ಮತ್ತು ನಿಮ್ಮವರು ಆಹಾ ಇದಕ್ಕಿಂತ ಸಂಜೆ ರಂಗೇರಲು ಮತ್ತೇನು ಬೇಕು ಅಲ್ಲವೆ.
ಕಾರ್ನ್ ಫಿಂಗರ್ಸ್ ಮಾಡುವುದು ಬಹಳ ಸುಲಭ. ಮನೆಯಲ್ಲಿ ಜೋಳದ ಕಾಳುಗಳು ರೆಡಿಯಾಗಿದ್ದರೆ ಇದನ್ನ ಕೆಲವೇ ಕ್ಷಣಗಳಲ್ಲಿ ರೆಡಿಮಾಡಿಬಿಡಬಹುದು.

ಬೇಕಾಗುವ ಸಾಮಗ್ರಿಗಳು
1. ಜೋಳದ ಕಾಳುಗಳು- 1 ಕಪ್ (ಬೇಯಿಸಿ ಮತ್ತದನ್ನು ಹಿಸುಕಿಟ್ಟುಕೊಳ್ಳಿ)
2. ಹಾಲು- 1 ಕಪ್
3. ಆಲೂಗಡ್ಡೆ- 2 (ಬೇಯಿಸಿಕೊಂಡು ಹಿಸುಕಿಟ್ಟುಕೊಳ್ಳಿ)
4. ಚೀಸ್- 2ಟೀಚಮಚ (ತುರಿದುಕೊಳ್ಳಿ)
5. ಆಲ್ ಪರ್ಪಸ್ ಫ್ಲೋರ್- 2ಟೀಚಮಚ
6. ಜೋಳದ ಹಿಟ್ಟು- 1 ಟೀಚಮಚ
7. ಹಸಿಮೆಣಸಿನಕಾಯಿ- 2 (ಕತ್ತರಿಸಿಕೊಳ್ಳಿ)
8. ಜೀರಿಗೆ ಪುಡಿ- 1 ಟೀಚಮಚ
9. ಮೆಣಸು ಪುಡಿ- 1 ಟೀಚಮಚ
10. ಉಪ್ಪು ರುಚಿಗೆ ತಕ್ಕಷ್ಟು
11. ಕೊತ್ತಂಬರಿ ಸೊಪ್ಪು- ಸ್ವಲ್ಪ(ಕತ್ತರಿಸಿಕೊಳ್ಳಿ)
12. ನೀರು- 1/2 ಕಪ್
13. ಬ್ರೆಡ್ ತುಂಡುಗಳು- 1/2 ಕಪ್
14. ತುಪ್ಪ- 1 ಟೀಚಮಚ
15. ಎಣ್ಣೆ- ಕರಿಯಲು
ಮಾಡುವ ವಿಧಾನ
1. ಬಾಣಲಿಯಲ್ಲಿ ತುಪ್ಪವನ್ನು ಹಾಕಿ ಕಾಯಿಸಿಕೊಳ್ಳಿ. ಇದಕ್ಕೆ ಜೋಳದ ಕಾಳು, ಉಪ್ಪು, ಹಾಲು ಹಾಕಿ 6-7 ನಿಮಿಷಗಳವರೆಗೆ ಮಂದ ಉರಿಯಲ್ಲಿ ಹಾಲನ್ನು ಕಾಳುಗಳು ಹೀರಿಕೊಳ್ಳುವವರೆಗೆ ಬೇಯಿಸಿ.
2. ಈ ಮಿಶ್ರಣವನ್ನು ಪಾತ್ರೆಗೆ ಹಾಕಿಕೊಂಡು ತಣ್ಣಗಾಗಲು ಬಿಡಿ.
3.ಇದಕ್ಕೆ ಬೇಯಿಸಿ ಪುಡಿಮಾಡಿಟ್ಟುಕೊಂಡ ಆಲೂಗಡ್ಡೆ, ಮೆಣಸು ಪುಡಿ, ಹಸಿಮೆಣಸಿನಕಾಯಿ, ಚೀಸ್, ಕೊತ್ತಂಬರಿಸೊಪ್ಪು ಮತ್ತು ಜೀರಿಗೆ ಪುಡಿಯನ್ನು ಹಾಕಿ.
4. ಇವನ್ನೆಲ್ಲ ಮೃದುವಾದ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
5. ಈ ಮಿಶ್ರಣದಿಂದ 10-12 ಫಿಂಗರ್ ಗಳನ್ನು ಮಾಡಿ 15 ನಿಮಿಷ ರೆಫ್ರಿಜಿರೇಟರ್ ನಲ್ಲಿಡಿ.
6. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾಯಿಸಿಕೊಳ್ಳಿ
7. ಆಲ್ ಪರ್ಪಸ್ ಫ್ಲೋರ್, ಜೋಳದ ಹಿಟ್ಟು, ಉಪ್ಪು ಮತ್ತು ನೀರನ್ನು ಹಾಕಿ ಹಿಟ್ಟನ್ನು ಕಲಸಿಕೊಳ್ಳಿ.
8. ಬ್ರೆಡ್ ತುಂಡುಗಳನ್ನು ಪುಡಿ ಮಾಡಿ ತಟ್ಟೆಯಲ್ಲಿ ಹರಡಿ.
9. ರೆಫ್ರಿಜಿರೇಟರ್ ನಿಂದ ಕಾರ್ನ್ ಫಿಂಗರ್ ಗಳನ್ನು ತೆಗೆದು ಅವುಗಳನ್ನು ಹಿಟ್ಟಿನಲ್ಲಿ ಅದ್ದಿ.
10. ನಂತರ ಹಿಟ್ಟಿನಲ್ಲಿ ಅದ್ದಿದ ತುಂಡುಗಳನ್ನು ತೆಗೆದು ಬ್ರೆಡ್ ಪುಡಿಯ ಮೇಲೆ ಹೊರಳಾಡಿಸಿ.
11. ಇದನ್ನು ಎಣ್ಣೆಯಲ್ಲಿ ಹಾಕಿ 3-4 ನಿಮಿಷ ಈ ತುಂಡುಗಳು ಹೊಂಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ.
12. ಎಣ್ಣೆಯನ್ನು ಸೋಸಿ ತಟ್ಟೆಯಲ್ಲಿಡಿ.
ಬಿಸಿ ಕಾಫಿಯೊಂದಿಗೆ ಬಿಸಿ ಕಾರ್ನ್ ಫಿಂಗರ್ ತಿನ್ಲಲು ರೆಡಿ.



Click it and Unblock the Notifications
