Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಾನಾ ಬಗೆಯ ಟಿಕ್ಕಿಗಳ ರುಚಿ ನೋಡಿದ್ದೀರಾ?

ಬೇಕಾಗುವ ಪದಾರ್ಥ :
* ಎಲೆಕೋಸು - ಒಂದು ಬಟ್ಟಲು
* ಈರುಳ್ಳಿ - ಅರ್ಧ ಬಟ್ಟಲು
* ಖಾರದ ಪುಡಿ - ೨ ಚಮಚ
* ಅರಿಶಿನ ಪುಡಿ - ೧ ಚಮಚ
* ಕೊತ್ತಂಬರಿ ಪುಡಿ - ೧ ೧/೨ ಚಮಚ
* ಹುಣಸೆ ಹಣ್ಣು - ಹುಳಿ ಬೇಕಾದಷ್ಟು
* ನೆನೆಸಿದ ಅಕ್ಕಿ - ಒಂದು ಬಟ್ಟಲು
* ನೆನೆಸಿದ ತೊಗರಿಬೇಳೆ - ಅರ್ಧ ಬಟ್ಟಲು
* ತೆಂಗಿನಕಾಯಿ - ಅರ್ಧ ಬಟ್ಟಲು
* ಅಕ್ಕಿ ಹಿಟ್ಟು
* ಬೆಲ್ಲಾ
* ಉಪ್ಪು
* ಎಣ್ಣೆ
ಮಾಡುವ ವಿಧಾನ :
1. ತೆಂಗಿನ ತುರಿ, ಕೊತ್ತಂಬರಿ ಪುಡಿ, ಅರಿಶಿನಪುಡಿ , ಖಾರದ ಪುಡಿ, ಹುಣಸೆಹಣ್ಣು ಹಾಗೂ ನೀರನ್ನು ಹಾಕಿ ಮಸಾಲೆ ಮಾಡಿಕೊಳ್ಳಬೇಕು.
2. ಅದಕ್ಕೆ ನೆನೆಸಿದ ಅಕ್ಕಿ, ನೆನೆಸಿದ ಬೇಳೆ ಹಾಕಿ ರುಬ್ಬಿಕೊಳ್ಳಬೇಕು. ಈ ಮಿಶ್ರಣಕ್ಕೆ ತುರಿದ ಎಲೆಕೋಸು,ಈರುಳ್ಳಿ , ಬೆಲ್ಲಾ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ 5 ನಿಮಿಷ ಕಾಲ ಇಡಬೇಕು.
3. ಮಿಶ್ರಣ ತೆಳ್ಳಗಾದರೆ ಸ್ವಲ್ಪ ಅಕ್ಕಿ ಹಿಟ್ಟು ಹಾಕಿಕೊಳ್ಳಬಹುದು. ಈ ಮಿಶ್ರಣವನ್ನು ತವಾದಲ್ಲಿ 2-3 ಚಮಚ ಎಣ್ಣೆ ಹಾಕಿ ಸಣ್ಣ ವಡೆ ರೀತಿಯಲ್ಲಿ ತಟ್ಟಿ ಕಂದು ಬಣ್ಣ ಬರುವ ತನಕ ಎರಡು ಬದಿ ಬೇಯಿಸಿ. ಹೀಗೆ ಬೇಯಿಸಿದ ನಂತರ ಎಲೆಕೋಸು ಟಿಕ್ಕಿ ತಿನ್ನಲು ತುಂಬಾ ರುಚಿಯಾಗಿರುತ್ತದೆ.
ಬಟಾಣಿ ಟಿಕ್ಕಿ ಮಾಡುವ ವಿಧಾನ:
ಬೇಕಾಗುವ ಸಾಮಗ್ರಿಗಳು :
* 1 ಕಪ್ ಬೇಯಿಸಿದ ಬಟಾಣಿ
*1 ಕಪ್ ಬೇಯಿಸಿ ಪುಡಿ ಮಾಡಿದ ಆಲೂಗಡ್ಡೆ
*ರುಚಿಗೆ ತಕ್ಕಷ್ಟು ಉಪ್ಪು
*1 ಚಮಚ ನಿಂಬೆರಸ
*1 ಕಪ್ ಜೋಳದ ಹಿಟ್ಟು
* ಸ್ವಲ್ಪ ಎಣ್ಣೆ,
* ಕತ್ತರಿಸಿದ ಕೊತ್ತಂಬರಿ ಸೊಪ್ಪು.
ಮಾಡುವ ವಿಧಾನ :
1. 4 ಹಸಿಮೆಣಸಿನಕಾಯಿ, 2 ಒಣಮೆಣಸಿನಕಾಯಿ, 2 ಕಾಳು ಕರಿಮೆಣಸು, 1/2 ಚಮಚ ಜೀರಿಗೆ, ಈ ಎಲ್ಲಾ ಸಾಮಾಗ್ರಿಗಳನ್ನು ಹುರಿದು ಪುಡಿ ಮಾಡಿ. 1 ಚಮಚ ಶುಂಠಿ ತುರಿ, 1/2 ಚಮಚ ಗರಂ ಮಸಲಾ ಪುಡಿ ಸೇರಿಸಿ, ಮತ್ತೊಮ್ಮೆ ಪುಡಿ ಮಾಡಬೇಕು.
2. ಬೆಂದ ಬಟಾಣಿಯನ್ನು ಒತ್ತಿ ಸ್ವಲ್ಪ ಪುಡಿ ಮಾಡಿಕೊಂಡು ಜೋಳದ ಹಿಟ್ಟು ಬಿಟ್ಟು, ತಯಾರಿಸಿದ ಮಸಾಲೆ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ, ದಪ್ಪ ನಿಂಬೆಗಾತ್ರದ ಉಂಡೆಗಳನ್ನಾಗಿ ಮಾಡಿ. ಈ ಉಂಡೆಗಳನ್ನು ಸ್ವಲ್ಪ ತಟ್ಟಿ ಚಪ್ಪಟೆ ಮಾಡಿ ಬೇಕಾದ ಆಕಾರಕ್ಕೆ ಸಿದ್ದ ಮಾಡಿ. ಜೋಳದ ಹಿಟ್ಟಿನಲ್ಲಿ ಹೊರಳಿಸಿ ತೆಗೆದಿಡಬೇಕು.
ದೋಸೆ ಮಾಡುವ ತವ ಕಾಯಿಸಿ ಸ್ವಲ್ಪ ಎಣ್ಣೆ ಹಾಕಿ ಬಟಾಣಿ ಮಸಾಲೆಯನ್ನು ಎರಡೂ ಬದಿ ತಿರುಗಿಸಿ ಹಾಕಿ ಕೆಂಪಾಗುವಂತೆ ಬೇಯಿಸಿದರೆ ಗರಿಗರಿಯಾದ ಮತ್ತು ರುಚಿಯಾದ ಬಟಾಣಿ ಟಿಕ್ಕಿ ಸಿದ್ಧ.
ಈ ಟಿಕ್ಕಿ ತಯಾರಿಸಿ, ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.



Click it and Unblock the Notifications
