Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಆಹಾ ಅಕ್ಕಿಪಾಯಸ!
ನೀರು ಬೆರೆಸದ ಹಾಲು ಬಳಸಿದರೆ, ಈ ಅಕ್ಕಿ ಪಾಯಸದ ಸೊಗಸು ಹೆಚ್ಚು!
ಹರುಕು ಹೋಳಿಗೆ ಲೇಸು। ಮುರುಕು ಹಪ್ಪಳ ಲೇಸು।
ಕುರುಕುರು ಕಡಲೆ ಲೇಸು। ಪಾಯಸದ
ಸುರುಕು ಬಲುಲೇಸು ಸರ್ವಜ್ಞ।।
ಅಡುಗೆ ಕುರಿತು ಕವಿ ಸರ್ವಜ್ಞ ಹೇಳಿರುವ ಈ ವಚನ ಎಷ್ಟು ಜನರಿಗೆ ಗೊತ್ತಿದೆಯೋ ಏನೋ...? ಆದರೆ ಪಾಯಸ ಗೊತ್ತಿಲ್ಲದವರು ಯಾರಿದ್ದಾರೆ ಹೇಳಿ? ಅಂದಹಾಗೆ ಪಾಯಸಗಳಲ್ಲಿ ಹಲವು ಬಗೆಗಳುಂಟು. ಇಂದು ಅಕ್ಕಿ ಪಾಯಸ ಮಾಡುವ ಕುರಿತು ತಿಳಿಯೋಣ ಬನ್ನಿ...
ಬೇಕಾಗುವ ಸಾಮಗ್ರಿಗಳು :
ಅರ್ಧ ಲೀಟರ್ ಗಟ್ಟಿ ಹಾಲು
ಒಂದೂವರೆ ಟೀ ಗ್ಲಾಸ್‌ನಷ್ಟು ಅಕ್ಕಿ
ಎರಡು ಟೀ ಗ್ಲಾಸ್‌ನಷ್ಟು ಸಕ್ಕರೆ
ಅರ್ಧ ಚಹಾ ಚಮಚದಷ್ಟು ಏಲಕ್ಕಿ ಪುಡಿ
ಒಂದು ಚಿಟಿಕೆ ಕೇಸರಿ
ಗೋಡಂಬಿ
ಒಣಗಿದ ದ್ರಾಕ್ಷಿ
ಸ್ವಲ್ಪ ಬೆಣ್ಣೆ
ಮಾಡುವ ವಿಧಾನ :
ಹಾಲು ಹಾಗೂ ಅಕ್ಕಿಯನ್ನು ಪಾತ್ರೆಯಾಂದರಲ್ಲಿ ಹಾಕಿಕೊಂಡು, ಕಡಿಮೆ ಪ್ರಮಾಣದ ಶಾಖದಲ್ಲಿ ಕುದಿಯಲು ಬಿಡಿ. ಸುಮಾರು 20-30ನಿಮಿಷಗಳ ಕಾಲ ಬೇಯಿಸಿದ ನಂತರ ಅದಕ್ಕೆ ಸಕ್ಕರೆ, ಏಲಕ್ಕಿ, ಕೇಸರಿ, ಗೋಡಂಬಿ, ಒಣಗಿದ ದ್ರಾಕ್ಷಿ ಹಾಕಿ. ಬೇಕಿದ್ದರೆ ಸ್ವಲ್ಪ ಬೆಣ್ಣೆಯನ್ನೂ ಹಾಕಿಕೊಳ್ಳಿ.
ಹದಿನೈದು-ಇಪ್ಪತ್ತು ನಿಮಿಷಗಳ ಕಾಲ ಈ ಮಿಶ್ರಣವನ್ನು ಹಾಗೆಯೇ ತಿರುವಾಡುತ್ತಿರಿ. ಎಲ್ಲವೂ ಹದವಾಗಿ ಬೆರೆತ ಮೇಲೆ ಒಲೆಯಿಂದ ಕೆಳಕ್ಕೆ ಇಳಿಸಿ. ಈಗ ಅಕ್ಕಿಪಾಯಸ ರೆಡಿ. ಇದನ್ನು ಹಾಗೆಯೇ ಸವಿಯಬಹುದು ಅಥವಾ ಚಪಾತಿಯನ್ನು ಇದರಲ್ಲಿ ಅದ್ದಿಕೊಂಡೂ ತಿನ್ನಬಹುದು. ನೀರು ಬೆರೆಸದ ಹಾಲು ಬಳಸಿದರೆ ಪಾಯಸದ ಸೊಗಸು ಹೆಚ್ಚು.



Click it and Unblock the Notifications
