Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಎಷ್ಟೇ ಆಗಲಿ ನಮ್ಮದು ಬಿಸಿಬೇಳೆ ಭಾತ್ ಘರಾನ ಅಲ್ವೇನ್ರಿ!
ದೇಶವಿದೇಶಗಳಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಕನ್ನಡಿಗರ ಕುಲದೇವತಾ ಪ್ರಸನ್ನ !
ಒಂದು ಕವಿಗೋಷ್ಠಿ, ಚೆನ್ನಾದ ರಸಸಂಜೆ, ಒಂದು ಸೆಮಿನಾರು, ಗೆಳೆಯರ ಗೆಟ್ ಟು ಗೆದರ್ರು, ಸ್ಥಳೀಯ ಕನ್ನಡ ಸಂಘದ ಮಾಹೆ ಮಂಥನ, ಶುಕ್ರವಾರದ ಬ್ರೇಕ್‌ಫಾಸ್ಟ್, ಶನಿವಾರದ ಡಿನ್ನರ್, ಭಾನುವಾರದ ಬ್ರಂಚ್.. ನಾಮಕರಣ, ನಿಶ್ಚಿತಾರ್ಥ, ಹುಟ್ಟಿದಹಬ್ಬ, ಇವೆಲ್ಲವೂ ಆರಂಭವಾಗುವುದು ಅಥವಾ ಕೊನೆಗೊಳ್ಳುವುದು ಬಹುತೇಕ ಬಿಸಿಬೇಳೆ ಭಾತ್ ಭಕ್ಷಣೆಯಾಂದಿಗೆ.
ಬಿಸಿಬೇಳೆ ಭಾತ್ ಗಂಡ, ಮೊಸರನ್ನ ಹೆಂಡತಿ- ಅದು ಕನ್ನಡದೂಟದ ಸಂಸ್ಕೃತಿ. ಈ ಪಾಕ ನಮ್ಮ ಸಂಸ್ಕೃತಿಯ ರೂಪಕ. ಒಂದೊಮ್ಮೆ ಸಂಗೀತ ಕಚೇರಿ ನಡೆಸಿಕೊಟ್ಟ ನಂತರ ತಟ್ಟೆ ಮುಂದೊಡ್ಡಿ ನಿಂತ ಮೈಸೂರು ಅನಂತಸ್ವಾಮಿ ಹೇಳಿದ್ದರು- ‘ನನಗೆ ಇಷ್ಟವಾಗುವ ಘರಾನವೇ ಬಿಸಿಬೇಳೆ ಭಾತ್ ಘರಾನ. ಭಾತು ಸಾಹಿತ್ಯ, ಮೊಸರನ್ನ ಲಾಲಿತ್ಯ’ !
ನಿಮಗೆ ಬಿಸಿಬೇಳೆ ಭಾತ್ ಮಾಡೋಕೆ ಬರುತ್ತಾ ? ಬರುತ್ತೆ. ನಮಗೆ ಗೊತ್ತು. ಆದರೆ ಇಲ್ಲಿರುವ ಶೈಲಿ ಡಿಫರೆಂಟ್ ಆಗಿದೆ. ಗಮನಿಸಿ.
ಬೇಕಾದ ಪದಾರ್ಥಗಳು :
1. ಒಂದೂವರೆ ಲೋಟ ಅಕ್ಕಿ (ಇಷ್ಟಕ್ಕೆ 6 ಲೋಟ ನೀರು ಬೇಕಾಗುತ್ತದೆ)
2. ಒಂದೂವರೆ ಲೋಟ ತೊಗರಿ ಬೇಳೆ.
3. ಹುರುಳಿಕಾಯಿ, ಕ್ಯಾರೆಟ್ಟು, ಆಲೂಗಡ್ಡೆ ಅಥವಾ ಗೆಡ್ಡೆಕೋಸು, ದೊಣ್ಣೆ ಮೆಣಸಿನಕಾಯಿ (ಎಲ್ಲವನ್ನೂ ತೊಳೆದು, ಒರೆಸಿ ಮಧ್ಯಮ ಆಕಾರಕ್ಕೆ ಹೆಚ್ಚಿ. ಪ್ರತಿಯಾಂದೂ ಒಂದೊಂದು ಲೋಟದಷ್ಟಿರಲಿ).
4. ಕಾಲು ಲೋಟಕ್ಕಿಂತ ಹೆಚ್ಚು, ಅರ್ಧ ಲೋಟಕ್ಕಿಂತ ಕಡಿಮೆ ಅಳತೆಯಷ್ಟು ಹಸಿರು ಬಟಾಣಿ.
5. ಸಣ್ಣದಾಗಿ ಉದ್ದುದ್ದ ಹೆಚ್ಚಿದ ಈರುಳ್ಳಿ (ಬಟಾಣಿಯಷ್ಟೇ ಅಳತೆಯ ಪ್ರಮಾಣ).
6. ಒಂದೂವರೆ ಚಮಚದಷ್ಟು ಹುಣಸೇ ಹಣ್ಣಿನ ಪೇಸ್ಟು
7. ರುಚಿಗೆ ತಕ್ಕಷ್ಟು ಉಪ್ಪು
8. ನಾಲ್ಕರಿಂದ ಐದು ಚಮಚ ಸಾಂಬಾರು ಪುಡಿ (ಹೆಚ್ಚಿಗೆ ಖಾರ ಬೇಕೆಂದರೆ, ಅದು ನಿಮ್ಮ ಯಜಮಾನರ ಕೋಪಕ್ಕೆ ಬಿಟ್ಟದ್ದು. )
9. ಕಾಲು ಲೋಟಕ್ಕಿಂತ ಸ್ವಲ್ಪ ಹೆಚ್ಚು ರಿಫೈಂಡ್ ಅಡುಗೆ ಎಣ್ಣೆ
10. ಒಗ್ಗರಣೆಗೆ- 2 ಒಣ ಮೆಣಸಿನಕಾಯಿ, ಸಾಸಿವೆ, ಸಣ್ಣದಾಗಿ ಮುರಿದ ಗೋಡಂಬಿ ಮತ್ತು ಫ್ರೆಶ್ ಆಗಿರೋ ಕರಿಬೇವಿನ ಸೊಪ್ಪು.
ಮಾಡುವ ವಿಧಾನ :
ತೊಗರಿಬೇಳೆ ಹಾಗೂ ಅಕ್ಕಿಯನ್ನು ತೊಳೆಯಿರಿ. ಒಂದು ಕುಕ್ಕರಿನಲ್ಲಿ ಇವನ್ನು ಹಾಕಿ. ಹೆಚ್ಚಿಟ್ಟ್ಟುಕೊಂಡ ತರಕಾರಿಗಳನ್ನೂ ಹಾಕಿ. ನೀರು, ಸಾಂಬಾರ ಪುಡಿ ಹಾಗೂ ಎಣ್ಣೆ ಬೆರೆಸಿ ಒಲೆ ಮೇಲೆ ಬೇಯಲು ಬಿಡಿ. ಮೂರು ಸಲ ಕುಕ್ಕರ್ ಕೂಗಲಿ. ಸಣ್ಣ ಬಾಣಲೆಯಲ್ಲಿ ವಗ್ಗರಣೆ ಹಾಕಿಕೊಂಡು, ಸಾಸಿವೆ ಚಿಟಿಗುಟ್ಟಿದ ನಂತರ ಈರುಳ್ಳಿಯನ್ನು ಸೇರಿಸಿ, ಹದವಾಗಿ ಬಾಡಿಸಿ. ಕುಕ್ಕರ್ ಮುಚ್ಚಳ ತೆಗೆದು, ಬೆಂದಿರುವ ಪದಾರ್ಥಕ್ಕೆ ವಗ್ಗರಣೆ, ಹುಣಸೇ ಪೇಸ್ಟು ಸೇರಿಸಿ, ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಬಿಸಿಬೇಳೆ ಭಾತ್ ತಯಾರ್.
ಸಾಮಾನ್ಯವಾಗಿ ಬಿಸಿಬೇಳೆ ಭಾತ್ ನೀರುನೀರಾಗಿರುತ್ತದೆ. ಅಕ್ಕಿ- ಬೇಳೆ- ತರಕಾರಿಗಳನ್ನು ಒಟ್ಟಾಗಿ ಬೇಯಿಸುವುದರಿಂದ ತರಕಾರಿ ಸುಳಿವೇ ಸಿಕ್ಕದಂತೆ ಕರಗಿ ಹೋಗಬಹುದು. ಹೀಗಾಗದಂತೆ ತಡೆಯಬೇಕಾದರೆ, ತರಕಾರಿಗಳನ್ನು ಬೇರೆಯಾಗಿ ಬೇಯಿಸಿ, ಆಮೇಲೆ ಬೆಂದ ಅಕ್ಕಿ-ಬೇಳೆ ಮಿಶ್ರಣಕ್ಕೆ ಬೆರೆಸಬಹುದು. ತರಕಾರಿಗಳ ಜೊತೆಗೆ ಕಡಲೆಬೀಜವನ್ನು ಪಪ್ ಮಾಡಿಕೊಂಡು, ಸಣ್ಣಗೆ ಹುರಿದು ಅದನ್ನೂ ಬೇಯಿಸಬಹುದು. ಕೆಲವರಿಗೆ ಕಡಲೇಬೀಜ ಇರುವ ಬಿಸಿಬೇಳೆ ಭಾತ್ ರುಚಿ ಹಿಡಿಸುವುದಿಲ್ಲ.
ಬಿಸಿಬೇಳೆ ಭಾತ್ ಹೆಸರಿಗೆ ತಕ್ಕಂಥದ್ದು. ಅದನ್ನು ಬಿಸಿಯಾಗಿ ತಿಂದರೆ ಬಲು ರುಚಿ. ತುಪ್ಪ ಹಾಕಿಕೊಂಡು ಹೊಡೆದರೆ, ಇನ್ನಷ್ಟು ಬೇಕು ಎನ್ನುತ್ತೀರಿ. ಚಿಪ್ಸು, ಕಾರಾಬೂಂದಿ ಹಾಗೂ ಈರುಳ್ಳಿ- ಸೌತೇಕಾಯಿ ಸಲಾಡ್, ಹರಟೆ, ಭಾತ್‌ಗೆ ಒಗ್ಗುವ ನೆಂಚಿಗೆ ಪದಾರ್ಥಗಳು.
(ವಿ. ಸೂ : ಬಿಸಿಬೇಳೆ ಭಾತ್ ಬಿಸಿ ಆಗಿದ್ದಾಗ ಹೆಚ್ಚೂಕಡಿಮೆ ಚೆನ್ನಾಗಿರತ್ತೆ. ಆದರೆ, ಆರುತ್ತಾ ಆರುತ್ತಾ ಸಿಮೆಂಟ್ ಥರ ಆಗತ್ತೆ ಯಾಕೆ? -ಬೇಳೆ ಜತೆ ಬೇಯುವಾಗ ಅಕ್ಕಿಗೆ ಸ್ವಲ್ಪ ಸೋಮಾರಿತನ ಇರತ್ತೆ. ಆದ್ದರಿಂದ . ನಿಮಗೆ ಸ್ವಲ್ಪ ಕೆಲಸ ಜಾಸ್ತಿ ಆದರೂ ಪರವಾಗಿಲ್ಲ, ನೀವು ಏನು ಮಾಡಬೇಕು ಅಂದ್ರೆ, ಅಕ್ಕೀನ ಬೇರೆ ಕುಕ್ಕರ್‌ನಲ್ಲಿ ಅರ್ಧದಷ್ಟು ಬೇಯಿಸಿ (ಒಂದು ವಿಷಲ್) ಆಮೇಲೆ ಬೇಳೆ ಜತೆ ಬೇಯಲು ಹಾಕಿ ಬಿಡಿ. ಬೆಳಗ್ಗೆ ಮಾಡಿದ ಬಿಬೇಬಾ ರಾತ್ರೀ ತನಕ ಮೃದುವಾಗಿರತ್ತೆ.)



Click it and Unblock the Notifications
