Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ತಿಂದಷ್ಟೂ ತಿನ್ನಬೇಕೆನಿಸುವ ಸಬ್ಬಸಿಗೆ ಈರುಳ್ಳಿ ಭಜಿ

ಬೇಕಾಗುವ ಪದಾರ್ಥಗಳು
ಸಬ್ಬಸಿಗೆ ಸೊಪ್ಪು - ಸಣ್ಣಗೆ ಹೆಚ್ಚಿದ್ದು 1 ಕಪ್
ಈರುಳ್ಳಿ - ಸಣ್ಣಗೆ ಹೆಚ್ಚಿದ್ದು 1 ಕಪ್
ಹಸಿ ಕೊಬ್ಬರಿ - ತುರಿದದ್ದು ಮುಕ್ಕಾಲು ಕಪ್
ಹಸಿ ಮೆಣಸಿನಕಾಯಿ - 3ರಿಂದ 4
ಕಡಲೆಹಿಟ್ಟು 3 ಚಮಚ
ಜೀರಿಗೆ, ಉಪ್ಪು, ಕರಿಬೇವು
ಕರಿಯಲು ಎಣ್ಣೆ
ತಯಾರಿಸುವ ವಿಧಾನ
* ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿಕೊಂಡ ಸಬ್ಬಸಿಗೆ ಸೊಪ್ಪು, ಹೆಚ್ಚಿಟ್ಟುಕೊಂಡ ಈರುಳ್ಳಿ ಮತ್ತು ತುರಿದುಕೊಂಡ ಕೊಬ್ಬರಿಯನ್ನು ಒಂದು ಪಾತ್ರೆಯಲ್ಲಿ ಹಾಕಿ ಮಿಶ್ರಣ ಮಾಡಿ.
* ಈ ಮಿಶ್ರಣಕ್ಕೆ ನೀರು ಹಾಕುವ ಅಗತ್ಯವೇ ಇಲ್ಲ. ಹಸಿ ಕೊಬ್ಬರಿಯಲ್ಲಿ ನೀರನಂಶ ಇರುವುದರಿಂದ ಹಾಗೆಯೇ ಬೆರೆಸಿಕೊಳ್ಳಿ.
* ಸಬ್ಬಸಿಗೆ, ಈರುಳ್ಳಿ ಮತ್ತು ಕೊಬ್ಬರಿ ಚೆನ್ನಾಗಿ ಬೆರೆತುಕೊಳ್ಳಲು ಎರಡು ಚಮಚ ಕಡಲೆಹಿಟ್ಟು ಹಾಕಿ ಕೈಯಾಡಿಸಿ. ಈಗ ಕರಿಯಲು ಯೋಗ್ಯವಾದ ಮಿಶ್ರಣ ತಯಾರಾಗಿರುತ್ತದೆ.
* ಇದಕ್ಕೆ ಸಣ್ಣಗೆ ಹೆಚ್ಚಿಕೊಂಡ ಹಸಿ ಮೆಣಸಿನಕಾಯಿ (ಮಕ್ಕಳು ತಿನ್ನುವುದರಿಂದ ಕಡಿಮೆಯಿರಲಿ), ಜೀರಿಗೆ ಮತ್ತು ಉಪ್ಪು ಹಾಕಿ ಚೆನ್ನಾಗಿ ಕೈಯಾಡಿಸಿ.
* ಇಷ್ಟಾದ ನಂತರ ಒಲೆ ಹೊತ್ತಿಸಿ ಬೋಗುಣಿಯಲ್ಲಿ ಎಣ್ಣೆ ಹಾಕಿ ಕಾದ ನಂತರ, ಹಸಿ ಕೈಯಿಂದ ಮಿಶ್ರಣವನ್ನು ಮುಷ್ಠಿಯಲ್ಲಿ ಉಂಡೆ ಮಾಡಿ, ಸ್ವಲ್ಪ ತಟ್ಟಿ ಎಣ್ಣೆಯಲ್ಲಿ ತೇಲಿಬಿಡಿ.
* ಕರಿದ ಭಜಿಗಳನ್ನು ಪೇಪರ್ ಮೇಲೆ ಹರವಿಟ್ಟರೆ ಎಣ್ಣೆ ಹೀರಿಕೊಂಡು ತಿನ್ನಲು ಯೋಗ್ಯವಾಗಿರುತ್ತದೆ. ಹೊರಗಡೆ ಮಳೆ ಸುರಿಯುತ್ತಿರುವಾಗ ಕಾಫಿ, ಚಹಾದ ಜೊತೆಗೆ ಬಿಸಿಬಿಸಿಯಾಗಿರುವಾಗಲೇ ಸೇವಿಸಿ.



Click it and Unblock the Notifications
