Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎನ್‌ಡೇನ್‌ಜರ್ಡ್ ಕರ್ನಾಟಕ ಸ್ವೀಟ್ ಸ್ಪೀಸೀಸ್ (ತಂಬಿಟ್ಟು)
ಅಪ್ಪಟ ಕರ್ನಾಟಕ ಶೈಲಿಯ ತಿಂಡಿ ತಿನಿಸುಗಳು ಅಳಿಯುತ್ತಿರುವ ಪ್ರಬೇಧ ಪಟ್ಟಿಯಲ್ಲಿವೆ. ಉಳಿಸಿ-ಬೆಳೆಸಿ : ಓಂ ನಮಃ ಶಿವಾಯ.
ಬೇಕಾದ ಪದಾರ್ಥ :
ಕುಚ್ಚಲು ಅಕ್ಕಿ - 1 ಕೇಜಿ
ಬೆಲ್ಲ - 1 ಕೇಜಿ
ಕೊಬ್ಬರಿ ತುರಿ- 1 ದಪ್ಪನೆ ಗಿಟುಕಿನದು
ಕಡಲೆ ಬೀಜ- 1ಪಾವು
ಹೆಚ್ಚಿನ ರುಚಿಗೆ ಹುರಿಗಡಲೆ, ಬಿಳಿ ಎಳ್ಳು ಸೇರಿಸಬಹುದು.
ಮಾಡುವ ವಿಧಾನ :
ತೊಳೆದು ನೆರಳಿನಲ್ಲಿ ಒಣಗಿಸಿದ ಅಕ್ಕಿಯನ್ನು ಹುರಿದು, ಹಿಟ್ಟು ಮಾಡಿಕೊಳ್ಳಿ. ಅಕ್ಕಿ ಹಿಟ್ಟು ಜೊತೆ ಕೊಬ್ಬರಿ ತುರಿ, ಹುರಿದು ಸಿಪ್ಪೆ ತೆರೆದ ಕಡಲೆಬೀಜ, ಹುರಿಗಡಲೆ, ಬಿಸಿ ಮಾಡಿದ ಎಳ್ಳು ಬೆರೆಸಿ. ಮಿಶ್ರಣವನ್ನು ಒಂದು ಅಗಲವಾದ ತಟ್ಟೆಯಲ್ಲಿ ಇಟ್ಟುಕೊಳ್ಳಿ. ಬೆಲ್ಲವನ್ನು ದಬರಿಗೆ ಸುರಿದು, ಅರ್ಧ ಕಪ್ ನೀರು ಸೇರಿಸಿ ಸ್ಟವ್ ಮೇಲಿಡಿ. ಹದಕ್ಕೆ ಬಂದ ಪಾಕವನ್ನು ಮಿಶ್ರಣಕ್ಕೆ ಸೇರಿಸಿ, ಉಂಡೆ ಕಟ್ಟಲು ಶುರು ಹಚ್ಚಿಕೊಳ್ಳಿ. ಪಾಕವನ್ನು ಹಿಟ್ಟಿನಲ್ಲಿ ಸ್ವಲ್ಪ ಸ್ವಲ್ಪ ಹಾಕಿಕೊಂಡು ಉಂಡೆ ಕಟ್ಟಬೇಕು. ಪಾಕವನ್ನು ಮತ್ತೆ ಬಿಸಿ ಮಾಡುವುದು, ಮತ್ತೆ ಬಗ್ಗಿಸಿಕೊಂಡು ಉಂಡೆ ಕಟ್ಟುವುದು- ಇದು ತಂಬಿಟ್ಟು ಕಟ್ಟುವ ಕ್ರಮ. ಉಂಡೆಯ ಗಾತ್ರ ನಿಮ್ಮಿಷ್ಟಕ್ಕೆ ಬಿಟ್ಟಿದ್ದು.
ಉಂಡೆ ಸ್ವಲ್ಪ ಆರಿದ ನಂತರ ಡಬ್ಬಿಯಲ್ಲಿ ಎತ್ತಿಟ್ಟುಕೊಳ್ಳಬಹುದು. ಪೌಷ್ಠಿಕಾಂಶಗಳನ್ನುಳ್ಳ ಈ ತಂಬಿಟ್ಟು ರುಚಿಗಟ್ಟೂ ಹೌದು. ಕೊಬ್ಬರಿ ತುರಿ ಚೆನ್ನಾಗಿ ಒಣಗಿದ್ದರೆ ತಂಬಿಟ್ಟು ತಿಂಗಳುಗಟ್ಟಲೆ ಹಾಳಾಗುವುದಿಲ್ಲ . ಶಿವರಾತ್ರಿ ಜಾಗರಣೆಗೆ ಮಾಡುವುದು ಇದೇ ತಂಬಿಟ್ಟನ್ನು!



Click it and Unblock the Notifications
