Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಖರ್ಚಿಲ್ಲದೆ ಮಾಡಬಹುದು ಬಟಾಣಿ ಕಚೋರಿ
ಬಟಾಣಿ ಕಚೋರಿಗೆ ಬೇಕಾಗುವ ಪದಾರ್ಥ:
* 250 ಗ್ರಾಂ ಬಟಾಣಿ
* 1 ಚಮಚ ಶುಂಠಿ ಪೇಸ್ಟ್
* 3-4 ಚಿಟಿಕೆ ಇಂಗು
* 1 ಚಮಚ ಜೀರಿಗೆ ಪುಡಿ
* 1 ಚಮಚ ಕೆಂಪು ಮೆಣಸಿನಕಾಯಿ ಪುಡಿ
* 1 ಚಮಚ ಸಕ್ಕರೆ
* 3 ಕಪ್ ಅಕ್ಕಿ ಹಿಟ್ಟು
* ಎಣ್ಣೆ, 1 ಚಮಚ ತುಪ್ಪ
* ರುಚಿಗೆ ತಕ್ಕಷ್ಟು ಉಪ್ಪು
ಬಟಾಣಿ ಕಚೋರಿ ತಯಾರಿಸುವುದು ಹೇಗೆ?
ಸ್ಟೆಪ್ 1: ಬಟಾಣಿಯನ್ನು ಬೇಯಿಸಿ ನೀರಿನಿಂದ ಪ್ರತ್ಯೇಕಗೊಳಿಸಲು ಬಸಿಯಬೇಕು. 10 ನಿಮಿಷ ತಣ್ಣಗಾಗಲು ಬಿಡಬೇಕು. ತುಪ್ಪ ಮತ್ತು ನೀರಿನ ಸಹಾಯದಿಂದ ಹಿಟ್ಟನ್ನು ಸ್ವಲ್ಪ ಗಟ್ಟಿಯಾಗಿ ಕಲೆಸಿಕೊಳ್ಳಬೇಕು. ತುಪ್ಪವನ್ನು ಹಾಕುವುದರಿಂದ ಕಚೋರಿ ತಿನ್ನಲು ಗರಿ ಗರಿಯಾಗುತ್ತದೆ.
ಸ್ಟೆಪ್ 2: ಬಟಾಣಿಯನ್ನು ತರಿತರಿಯಾದ ಪೇಸ್ಟ್ ನಂತೆ ರುಬ್ಬಿಕೊಳ್ಳಬೇಕು. ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಕಾದ ನಂತರ ಶುಂಠಿ ಪೇಸ್ಟ್ ಮತ್ತು ಇಂಗು ಹಾಕಿ ಹುರಿಯಬೇಕು. ಬಟಾಣಿ ಪೇಸ್ಟ್ ಬೆರೆಸಿ ನಿರಂತರವಾಗಿ ತಿರುಗಿಸಬೇಕು.
ಸ್ಟೆಪ್ 3: ಸ್ವಲ್ಪ ಸಕ್ಕರೆ ಮತ್ತು ಉಪ್ಪಿನೊಂದಿಗೆ ಜೀರಿಗೆ, ಕೆಂಪು ಮೆಣಸಿನ ಪುಡಿಯನ್ನು ಹಾಕಿ 6-8 ನಿಮಿಷ ತಿರುಗಿಸುತ್ತಲೇ ಇರಬೇಕು. ಇದು ಹಸಿರು ಬಣ್ಣಕ್ಕೆ ತಿರುಗಿ ಒಣಗಿದಂತಾಗುತ್ತದೆ.
ಸ್ಟೆಪ್ 4: ಹುರಿದ ಈ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಟ್ಟು ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಸಣ್ಣನೆ ಉರಿಯಲ್ಲಿಡಬೇಕು. ಕಚೋರಿ ಮಾಡಲು ಎಣ್ಣೆ ಹೆಚ್ಚು ಕಾದಿರಬೇಕು.
ಸ್ಟೆಪ್ 5: ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಅದರಲ್ಲಿ ತೂತು ಮಾಡಿ ಮಿಶ್ರಣವನ್ನು ತುಂಬಬೇಕು. ಬೆರಳುಗಳ ಸಹಾಯದಿಂದ ಅದು ಒಡೆಯದಂತೆ ಸರಿಯಾಗಿ ಮುಚ್ಚಬೇಕು.
ಸ್ಟೆಪ್ 6: ಕಾದ ಎಣ್ಣೆಗೆ ಹಿಟ್ಟನ್ನು ಹಾಕಿ ಬೇಯಿಸಿದರೆ ಸ್ವಾದಿಷ್ಟ ಬಟಾಣಿ ಕಚೋರಿ ತಿನ್ನಲು ರೆಡಿಯಾಗಿರುತ್ತೆ.



Click it and Unblock the Notifications

