Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಸಂಜೆ ಟೀ ಜೊತೆಗಿರಲಿ ಈ ಹಕ್ಕಾ ನೂಡಲ್ಸ್

ಹಕ್ಕಾ ನೂಡಲ್ಸ್ ಗೆ ಏನೇನು ಬೇಕು?
* ನೂಡಲ್ಸ್ 1 ಪ್ಯಾಕೆಟ್ (ಗಟ್ಟಿಯಾಗಿರಬೇಕು), 1 ಈರುಳ್ಳಿ, 5-6 ಎಸಳು ಬೆಳ್ಳುಳ್ಳಿ, ಸ್ವಲ್ಪ ಶುಂಠಿ ಪೇಸ್ಟ್, 2 ಚಮಚ ಟೊಮೆಟೊ ಕೆಚಪ್, 2 ಕ್ಯಾರೆಟ್, * 8-10 ಬೀನ್ಸ್, 1 ಕ್ಯಾಪ್ಸಿಕಂ, 3 ಹಸಿರು ಮೆಣಸಿನಕಾಯಿ, ವಿನೆಗರ್, ಮೆಣಸು, 1 ಚಮಚ ಸೋಯಾ ಸಾಸ್, ಎಣ್ಣೆ, ಉಪ್ಪು.
ಹಕ್ಕಾ ನೂಡಲ್ಸ್ ಮಾಡುವ ವಿಧಾನ:
* ನೂಡಲ್ಸನ್ನು ಸ್ವಲ್ಪ ಎಣ್ಣೆ ಬರೆಸಿ 5 ನಿಮಿಷ ಬೇಯಿಸಬೇಕು. ಇದರಿಂದ ನೂಡಲ್ಸ್ ಗರಿಗರಿಯಾಗಿರುತ್ತದೆ. ನೂಡಲ್ಸ್ ನಿಂದ ನೀರನ್ನು ಬಸಿದು ಒಂದೆಡೆ ಇಡಬೇಕು.
* ಇದೇ ಸಮಯದಲ್ಲಿ ಮೇಲೆ ತಿಳಿಸಿದ ತರಕಾರಿಗಳನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಬೇಕು. ನಂತರ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಈರುಳ್ಳಿಯನ್ನು ಕೆಂಪಗಾಗುವ ತನಕ ಹುರಿಯಬೇಕು.
* ಈಗ ಚಿಕ್ಕದಾಗಿ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟನ್ನು ಹಾಕಿ ಕೆಲ ನಿಮಿಷ ಬಿಡಬೇಕು. ಇದಕ್ಕೆ ಹಸಿರು ಮೆಣಸಿನಕಾಯಿ ಮತ್ತು ಇನ್ನಿತರ ತರಕಾರಿಗಳನ್ನು ಹಾಕಿ ವಿನೆಗರ್ ಬೆರೆಸಬೇಕು. ಕೊನೆಯಲ್ಲಿ ಕ್ಯಾಪ್ಸಿಕಂ ಹಾಕಬೇಕು.
* ರುಚಿಗೆ ತಕ್ಕಂತೆ ಉಪ್ಪು ಮತ್ತು ಮೆಣಸಿನ ಪುಡಿ ಹಾಕಿ ಮಸಾಲೆ ವಾಸನೆ ಬರುವ ತನಕ ಮಿಶ್ರಣವನ್ನು ಬೇಯಿಸಬೇಕು.
* ಬಾಣಲೆಯಲ್ಲಿರುವ ತರಕಾರಿಗಳನ್ನು ಅಲ್ಲೇ ಒಂದು ಪಕ್ಕಕ್ಕೆ ಸರಿಸಿ ಟೊಮೆಟೊ ಕೆಚಪ್ ಮತ್ತು ಸೋಯಾ ಸಾಸನ್ನು ಒಂದು ನಿಮಿಷ ಬಿಸಿ ಮಾಡಿ ನಂತರ ಎಲ್ಲವನ್ನು ಬೆರೆಸಿ ತಿರುಗಿಸಬೇಕು.
* ಈ ಮಿಶ್ರಣವನ್ನು 2-3 ನಿಮಿಷ ಹಾಗೇ ಹುರಿದು ನಂತರ ಕೊನೆಯಲ್ಲಿ ನೂಡಲ್ಸ್ ಬೆರೆಸಿ ಕದಡಬೇಕು.
* 1 ನಿಮಿಷ ಬಾಣಲೆಯನ್ನು ಮುಚ್ಚಿ ನಂತರ ಉರಿಯನ್ನು ಆರಿಸಿ ತೆಗೆದರೆ ಹಕ್ಕಾ ನೂಡಲ್ಸ್ ತಿನ್ನಲು ತಯಾರಾಗಿರುತ್ತೆ. ಇದರೊಂದಿಗೆ ಮಂಚೂರಿಯನ್ ಗ್ರೇವಿ ಇದ್ದರೆ ತಿನ್ನಲು ಇನ್ನೂ ರುಚಿಕರ.



Click it and Unblock the Notifications
