Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರುಚಿಗೆ ಮೋಸ ಇಲ್ಲದ ಬೇಬಿ ಸಮೋಸ ತಿನ್ನಿ

ಸಮೋಸ ಮಾಡಲು ಬೇಕಾಗುವ ಪದಾರ್ಥಗಳು:
ಹಿಟ್ಟು ಕಲೆಸಿಕೊಳ್ಳಲು ಏನೇನು ಬೇಕು: 1 ಕಪ್ ಮೈದಾ ಹಿಟ್ಟು, ಅವಶ್ಯಕ ನೀರು, 2 ಚಮಚ ಎಣ್ಣೆ, ಸ್ವಲ್ಪ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು, 1/4 ಚಮಚ ಓಂ ಕಾಳು
ಪಲ್ಯಕ್ಕೆ ಏನೇನು ಬೇಕು:
* 4-5 ಮೀಡಿಯಂ ಆಲೂಗಡ್ಡೆ (ಬೇಯಿಸಿ ಸಿಪ್ಪೆ ತೆಗೆದಿರಬೇಕು)
* 1/2 ಕಪ್ ಬೇಯಿಸಿದ ಬಟಾಣಿ
* 2-3 ಚಿಕ್ಕದಾಗಿ ಕತ್ತರಿಸಿದ ಹಸಿರು ಮೆಣಸಿನಕಾಯಿ
* ಕತ್ತರಿಸಿದ ಕೊತ್ತಂಬರಿ ಮತ್ತು ಪುದೀನಾ
* 2 ಚಮಚ ಎಣ್ಣೆ
* 1 ಚಮಚ ಜೀರಿಗೆ
* ಸ್ವಲ್ಪ ಶುಂಠಿ ಪೇಸ್ಟ್
* 1 ಚಮಚ ಮಾವಿನ ಪುಡಿ (ಬೇಕಿದ್ದರೆ)
* 1 ಚಮಚ ಗರಂ ಮಸಾಲ
* ರುಚಿಗೆ ತಕ್ಕಷ್ಟು ಉಪ್ಪು
ಸಮೋಸ ತಯಾರಿಸುವ ವಿಧಾನ:
* ಮೊದಲು ಹಿಟ್ಟಿಗೆಂದು ತಿಳಿಸಿದ ಸಾಮಗ್ರಿಗಳನ್ನು ಚೆನ್ನಾಗಿ ಮಿದ್ದು ಕಲೆಸಿಕೊಂಡು ಒಂದೆಡೆ ಇಟ್ಟುಕೊಳ್ಳಬೇಕು.
* 15 ನಿಮಿಷದ ನಂತರ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಬೇಕು. ಒಂದೆಡೆ ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಬೇಕು.
* ಇನ್ನೊಂದು ಪಾತ್ರೆಯಲ್ಲಿ ಪಲ್ಯಕ್ಕೆಂದು ತಿಳಿಸಿದ ಎಲ್ಲಾ ಸಾಮಾನುಗಳನ್ನು ಚೆನ್ನಾಗಿ ಬೆರೆಸಿಟ್ಟುಕೊಳ್ಳಬೇಕು.
* ಉಂಡೆಯನ್ನು ವೃತ್ತಾಕಾರವಾಗಿ ಒತ್ತಿಕೊಂಡು ಚಾಕುವಿನ ಸಹಾಯದಿಂದ ಅರ್ಧ ಕತ್ತರಿಸಬೇಕು.
* ಅರ್ಧ ಭಾಗಕ್ಕೆ ಪಲ್ಯ ತುಂಬಿ ಇನ್ನರ್ಧ ಭಾಗವನ್ನು ಸುರುಳಿ ಸುತ್ತಿ ತ್ರಿಕೋನಾಕಾರವಾಗಿ ಮಾಡಿ ಎಣ್ಣೆಗೆ ಬಿಡಬೇಕು.
* ಎಣ್ಣೆಯಲ್ಲಿ ಸಮೋಸ ಕೆಂಪಗಾಗುವವರೆಗೂ ಕರಿದು ಆಮೇಲೆ ಪೇಪರ್ ಮೇಲೆ ಎಣ್ಣೆ ಹೀರಿಕೊಳ್ಳಲು ಬಿಡಬೇಕು.
ಇದೀಗ ಬೇಬಿ ಸಮೋಸ ತಿನ್ನಲು ಸಿದ್ಧಗೊಂಡಿರುತ್ತೆ. ಇದನ್ನು ಸಾಸ್ ಜೊತೆ ಅಥವಾ ಸಿಹಿ ಹುಣಸೆ ಚಟ್ನಿ ಮಾಡಿ ಸೇವಿಸಿದರೆ ರುಚಿ ಬಲು ಜೋರು.



Click it and Unblock the Notifications
