Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಚುಮುಚುಮು ಚಳಿಯಲ್ಲಿ ಬಿಸಿ ಬಿಸಿ ಮಸಾಲ್ ಪುರಿ

ಮಸಾಲ ಪುರಿಗೆ ಏನೇನು ಬೇಕು?
* ಒಂದು ಪ್ಯಾಕ್ ಪೂರಿ (ಮಸಾಲ ಪುರಿಗೆ ಬಳಸುವುದು)
* 2 ಕಪ್ ಬೇಯಿಸಿದ ಬಟಾಣಿ
* 1 ದೊಡ್ಡ ಈರುಳ್ಳಿ (ಕತ್ತರಿಸಿದ್ದು)
* 1 ಆಲೂಗಡ್ಡೆ (ಬೇಯಿಸಿ ಸಿಪ್ಪೆ ತೆಗೆದು ಕಲೆಸಿದ್ದು)
* 1 ಚಮಚ ಗರಂ ಮಸಾಲ, 1 ಚಮಚ ಚಾಟ್ ಮಸಾಲ
* 1 ಚಮಚ ಕೆಂಪು ಮೆಣಸಿನ ಪುಡಿ, 1 ಚಮಚ ಅರಿಶಿಣ ಪುಡಿ
* 1 ಚಮಚ ಬೆಲ್ಲ, 1 ಚಮಚ ಹುಣಸೆ ರಸ
* 1 ಕಪ್ ಕತ್ತರಿಸಿದ ಕೊತ್ತಂಬರಿ
* 1 ಕಪ್ ಕತ್ತರಿಸಿದ ಕ್ಯಾರೆಟ್
* 1 ಪ್ಯಾಕ್ ಸೇವ್
* ಉಪ್ಪು
ಚಟ್ನಿಗೆ ಏನೇನು ಬೇಕು?
1 ರಿಂದ 2 ಚಮಚ ಜೀರಿಗೆ, ಸ್ವಲ್ಪ ಶುಂಠಿ, ಕೊತ್ತಂಬರಿ, 2-3 ಹಸಿರು ಮೆಣಸಿನಕಾಯಿ, 3-4 ಪುದೀನಾ ಎಲೆ
ಮಸಾಲಾ ಪುರಿ ಮಾಡುವ ಬಗೆ:
* ಚಟ್ನಿಗೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನು ರುಬ್ಬಬೇಕು.
* ಒಂದು ಪಾತ್ರೆಯಲ್ಲಿ ಬೇಯಿಸಿದ ಬಟಾಣಿಗೆ ಒಂದು ಲೋಟ ನೀರು ಬೆರೆಸಿ ರುಬ್ಬಿಕೊಂಡ ಚಟ್ನಿಯನ್ನು ಹಾಕಿ ಸಣ್ಣ ಉರಿಯಲ್ಲಿ ಕಾಯಿಸುತ್ತಿರಬೇಕು.
* ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ನೀರಿಗೆ ಗರಂ ಮಸಾಲ, ಕೆಂಪುಮೆಣಸಿನ ಪುಡಿ, ಅರಿಶಿಣ ಪುಡಿ, ಹುಣಸೇ ರಸ, ಬೆಲ್ಲ, ಉಪ್ಪನ್ನು ಸೇರಿಸಿ ಈ ಮಸಾಲೆಯನ್ನು ಸಣ್ಣ ಉರಿಯಲ್ಲಿ ಕೆಲವು ನಿಮಿಷ ಬೇಯಲು ಬಿಡಬೇಕು.
* ಈಗ ಕತ್ತರಿಸಿದ್ದ ಕ್ಯಾರೆಟ್, ಈರುಳ್ಳಿ, ಕೊತ್ತಂಬರಿಯನ್ನು ಬೆರೆಸಿ ಒಂದೆಡೆ ಇಟ್ಟುಕೊಳ್ಳಬೇಕು.
ಮಸಾಲ ಪುರಿ ಬೆರೆಸುವ ವಿಧಾನ:
* ಪೂರಿಗಳನ್ನು ಸ್ವಲ್ಪ ಪುಡಿ ಮಾಡಿ ತಟ್ಟೆಗಳ ಮೇಲೆ ಹಾಕಬೇಕು. ಅದರ ಮೇಲೆ ಕಲಸಿದ ಆಲೂಗಡ್ಡೆಯನ್ನು ಹಾಕಬೇಕು.
* ನಂತರ ಬಟಾಣಿ ಮಿಶ್ರಣ, ಮಸಾಲೆ ಮಿಶ್ರಣವನ್ನು ಇದರ ಮೇಲೆ ಹಾಕಬೇಕು.
* ಬೆರೆಸಿದ್ದ ತರಕಾರಿಗಳನ್ನೂ ಇದರ ಮೇಲೆ ಹಾಕಬೇಕು.
* ಕೊನೆಯಲ್ಲಿ ಒಂದು ಹಿಡಿ ಸೇವ್ ಹಾಕಿ ತಿನ್ನಲು ಕೊಟ್ಟರೆ ಮಸಾಲ ಪುರಿ ತುಂಬಾ ರುಚಿಕರವಾಗಿರುತ್ತೆ.
ಈ ಮಸಾಲ ಪುರಿಯನ್ನು ಬಿಸಿ ಬಿಸಿ ಇದ್ದಾಗಲೆ ತಿಂದರೆ ರುಚಿಯ ಘಮ್ಮತ್ತಿರುತ್ತದೆ.



Click it and Unblock the Notifications
