Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೇಬಿ ಕಾರ್ನ್ ಫ್ರೈ ಟ್ರೈ ಮಾಡಿ ಟೇಸ್ಟ್ ನೋಡಿ

ಬೇಬಿ ಕಾರ್ನ್ ಫ್ರೈಗೆ ಏನೇನು ಬೇಕು?: 250 ಗ್ರಾಂ ಬೇಬಿ ಕಾರ್ನ್, 1/2 ಕಪ್ ಜೋಳದ ಹಿಟ್ಟು, 3 ಈರುಳ್ಳಿ, ಮೆಣಸಿನಕಾಯಿ, 1 ಕ್ಯಾಪ್ಸಿಕಂ, 1 ಚಮಚ ನಿಂಬೆರಸ, 1 ಚಮಚ ಸೋಯಾ ಸಾಸ್, 1 ಚಮಚ ಚಿಲ್ಲಿ ಸಾಸ್, ಟೊಮೆಟೊ ಕೆಚಪ್, ಕೆಂಪುಮೆಣಸಿನಕಾಯಿ ಪುಡಿ, ಉಪ್ಪು, ಕಪ್ಪು ಮೆಣಸಿನ ಪುಡಿ, ಎಣ್ಣೆ, ವೃತ್ತಾಕಾರವಾಗಿ ಕತ್ತರಿಸಿದ ಈರುಳ್ಳಿ ತುಂಡು
ಬೇಬಿ ಕಾರ್ನ್ ಫ್ರೈ ಮಾಡುವ ವಿಧಾನ:
* ಬೇಬಿ ಕಾರ್ನ್ ಗಳನ್ನು ಎರಡು ಹೋಳುಗಳಾಗಿ ಕತ್ತರಿಸಿ ಅದನ್ನು ಬಿಸಿ ನೀರಿನಲ್ಲಿ ಉಪ್ಪಿನೊಂದಿಗೆ ಕುದಿಸಬೇಕು. ಅದು ಮೃದುಗೊಳ್ಳುವವರೆಗೂ ಬೇಯಿಸಿ ಬಸಿದು ಒಂದೆಡೆ ಇಡಬೇಕು.
* ಒಂದು ಬಟ್ಟಲಿನಲ್ಲಿ ಜೋಳದ ಹಿಟ್ಟು, ಮೆಣಸಿನಕಾಯಿ ಪುಡಿ ಮತ್ತು ಉಪ್ಪನ್ನು ಬೆರೆಸಿ ಅದಕ್ಕೆ ಬೇಯಿಸಿದ ಬೇಬಿ ಕಾರ್ನ್ ಗಳನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಹಿಟ್ಟು ಎಲ್ಲ ಕಡೆಯೂ ಮೆತ್ತಿಕೊಳ್ಳುವಂತೆ ಮಾಡಬೇಕು. ಕೆಲವು ಹನಿ ನಿಂಬೆರಸವನ್ನು ಬೆರೆಸಬೇಕು.
* ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ ಅದರಲ್ಲಿ ಬೇಬಿ ಕಾರ್ನ್ ಹುರಿಯಬೇಕು. ಅದು ಕೆಂಪಗಾಗುವ ತನಕವೂ ಹುರಿದು ಒಂದೆಡೆ ಇಡಬೇಕು.
* ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿಯನ್ನು ಕೆಂಪಗಾಗುವವರೆಗೂ ಹುರಿಯಬೇಕು. ಈಗ ಕ್ಯಾಪ್ಸಿಕಂ ಬೆರೆಸಿ 3-4 ನಿಮಿಷ ತಿರುಗಿಸೇಕು. ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನಕಾಯಿ ಪುಡಿ, ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೊ ಕೆಚಪ್, ಮೆಣಸಿನ ಪುಡಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು.
* ಇದಕ್ಕೆ ಬೇಬಿ ಕಾರ್ನ್ ಹಾಕಿ ಮಿಶ್ರಣ ಚೆನ್ನಾಗಿ ಹೊಂದಿಕೊಳ್ಳುವಂತೆ ತಿರುಗಿಸಬೇಕು. ಎಲ್ಲಾ ಮುಗಿದ ಮೇಲೆ ವೃತ್ತಾಕಾರವಾಗಿ ಕತ್ತರಿಸಿದ ಈರುಳ್ಳಿಯನ್ನು ಅಲಂಕಾರಕ್ಕೆ ಹಾಕಿ ಶೃಂಗರಿಸಬೇಕು. ಈಗ ಬೇಬಿ ಕಾರ್ನ್ ಫ್ರೈ ತಿನ್ನಲು ರೆಡಿಯಾಗಿದೆ.



Click it and Unblock the Notifications
