Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪಾಕಶಾಲೆ : ರುಚಿಕರ ಚೈನೀಸ್ ಫ್ರೈಡ್ ರೈಸ್
ಸಾಮಾನ್ಯವಾಗಿ ಮನೆಯಲ್ಲಿ ಅನ್ನ ಮಿಕ್ಕಿದ್ದರೆ ಅರ್ಜೆಂಟಾಗಿ ಪುಳಿಯೋಗರೆ ಮಾಡುತ್ತೇವೆ. ಅದಕ್ಕಿಂತಲೂ ಸುಲಭವಾಗಿ ಚೈನೀಸ್ ಫ್ರೈಡ್ ರೈಸನ್ನು ಮಾಡಿಕೊಳ್ಳಬಹುದು. ಇಲ್ಲಿ ಹೆಸರಷ್ಟೇ ವಿದೇಶಿ, ಇಲ್ಲಿ ಬಳಸಿರುವ ತರಕಾರಿ ಹಾಗೂ ಪದಾರ್ಥಗಳೆಲ್ಲಾ ಸ್ವದೇಶಿ. ಆದಕಾರಣ, ಹೆಸರು ಚೈನೀಸ್ ಆದರೇನು ಇಂಡಿಯನ್ ಆದರೇನು ಒಟ್ಟಿನಲ್ಲಿ ಸ್ವಾಧಿಷ್ಟವಾಗಿದ್ದರೆ ಅಷ್ಟೇ ಸಾಕು.
*ಶ್ರೀರಕ್ಷಾ, ಬೆಂಗಳೂರು
ಬೇಕಾದ ಪದಾರ್ಥಗಳು
ಬಾಸ್ಮತಿ ಅಕ್ಕಿ: 1 ಲೋಟ
ಹುಳ್ಳಿ ಹೂವ: 1 ಕಟ್ಟು
ಕ್ಯಾರೆಟ್: 1 ರಿಂದ 2
ಹುರಳಿಕಾಯಿ: 10 ರಿಂದ 12
ಹೂಕೋಸು: ' (ಸಣ್ಣಗಾತ್ರ)
ಕೋಸು: 150 ಗ್ರಾಂ
ದಪ್ಪ ಮೆಣಸಿನಕಾಯಿ: 1
ಬಟಾಣಿ: ' ಲೋಟ
ಅಜಿನಮೋಟೊ: ' ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಕರಾಮಲ್ ಸೇರಿಸಿದ ಸಕ್ಕರೆ ಪಾಕ: 1 ಚಮಚ
ಸೋಯ ಸಾಸ್: 2 ಅಥವಾ 3 ಚಮಚ
ಎಣ್ಣೆ: 3ರಿಂದ 4 ಚಮಚ
(ಸೂಚನೆ: ಈ ಕೆಳಗಿನ ಸಾಮಗ್ರಿಗಳನ್ನು ಬೆರಸಿ 2 ರಿಂದ 3 ಗಂಟೆಗಳ ಕಾಲ ಇಡಬೇಕು)
ವಿನೆಗರ್ ಮೆಣಸಿನಕಾಯಿ-ಉಪ್ಪ್ಪು ಇರುವ ಹಸಿರು ಮೆಣಸಿನಕಾಯಿ: 4 ದುಂಡು ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು.
ಸಾದಾ ವಿನೆಗರ್: ' ಲೋಟ
ಉಪ್ಪು: 1 ಚಮಚ
ಸೊಯಾಸಾಸ್: 1 ಚಮಚ
ಮಾಡುವ ವಿಧಾನ:
ಮೊದಲು ಅಕ್ಕಿಯನ್ನು (ಸಾಧಾರಣ ಅಕ್ಕಿಯಾದರೂ ಅಡ್ಡಿಯಿಲ್ಲ) ಉಪ್ಪು ಮತ್ತು ಒಂದು ಚಮಚ ಎಣ್ಣೆ ಸೇರಿಸಿದ 2 ಲೋಟ ನೀರಿನಲ್ಲಿ ಮುಕ್ಕಾಲು ಬೇಯಿಸಿದ ನಂತರ ಬಸಿದುಕೊಳ್ಳಿ. ಅಗಲವಾದ ತಟ್ಟೆಯಲ್ಲಿ ಅನ್ನ ಹಾಕಿ ಹುಡುಹುಡಿಯಾಗಲು ತಣ್ಣಗಾಗುವವರೆಗೂ ಬಿಡಿ.
ನಂತರ ತರಕಾರಿಯನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಒಂದಿಂಚು ತುಂಡುಗಳಾಗಿ ಹುಳ್ಳಿ ಹೂವ ಹೆಚ್ಚಿಕೊಳ್ಳಿ. ಅಗಲವಾದ ಪಾತ್ರೆಯಲ್ಲಿ ಈರುಳ್ಳಿ, ಕ್ಯಾರೆಟ್, ದಪ್ಪ ಮೆಣಸಿನಕಾಯಿ, ಹುರುಳಿಕಾಯಿ, ಕೋಸು ಮತ್ತು ಹುಳ್ಳಿ ಹೂವನ್ನು ಒಂದರ ನಂತರ ಒಂದನ್ನು ಬಿಸಿ ಮಾಡಿದ ಎಣ್ಣೆಯಲ್ಲಿ ಹುರಿಯಿರಿ. ಬಟಾಣಿಯನ್ನು ಪ್ರತ್ಯೇಕವಾಗಿ ಬೇಯಿಸಿ ಇದಕ್ಕೆ ಸೇರಿಸಿರಿ. ತರಕಾರಿಯನ್ನು ಹುರಿಯುವಾಗ ಅರ್ಧದಷ್ಟು ಅಜಿ-ನ-ಮೊಟೊ ಸೇರಿಸಿ. ಹೆಚ್ಚಿನ ಉರಿಯಲ್ಲಿ ಕೆಲ ಸಮಯ ಹುರಿಯಿರಿ. ತರಕಾರಿಗಳು ಬೆಂದ ನಂತರ, ಬೇಯಿಸಿದ ಅನ್ನ, ಉಪ್ಪು, ಮೆಣಸು ಮತ್ತು ಕ್ಯಾರಮಲ್ ಸಕ್ಕರೆ ಬೆರಸಿ.
ಅನಂತರ ಸೋಯಾ ಸಾಸನ್ನು ಉದುರಿಸಿ. ಹೆಚ್ಚಿನ ಉರಿಯಲ್ಲಿ ಅನ್ನವನ್ನು ಚೆನ್ನಾಗಿ ಹುರಿಯಿರಿ. ಮಿನೆಗರ್ ಮೆಣಸಿನಕಾಯಿಯೊಂದಿಗೆ ಬಿಸಿಬಿಸಿಯಾಗಿ ಬಡಿಸಿರಿ.



Click it and Unblock the Notifications
