Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮೇಲೋಗರ: ಸಬ್ಬಕ್ಕಿ ಆಲೂ ಹಪ್ಪಳ
ಊಟಕ್ಕೆ ಉಪ್ಪಿನಕಾಯಿ ಎಷ್ಟು ಮುಖ್ಯವೋ ಹಪ್ಪಳವೂ ಅಷ್ಟೇ ಮುಖ್ಯ. ಕುರುಕುರು ಸಪ್ಪಳ ಮಾಡುತ್ತಾ ಹಪ್ಪಳದೊಂದಿಗೆ ಒಂದಷ್ಟು ಹೆಚ್ಚಿಗೇ ಊಟವನ್ನು ಹೊಟ್ಟೆಗೆ ಇಳಿಸಬಹುದು. ಎಷ್ಟು ವೈವಿಧ್ಯವಾದ ಉಪ್ಪಿನಕಾಯಿಗಳಿವೆಯೋ ತರಹೇವಾರಿ ಹಪ್ಪಳಗಳಿಗೂ ಬರವಿಲ್ಲ. ನಾನಾ ತರದ ತಿಂಡಿಗಳಿಗೆ ಸಬ್ಬಕ್ಕಿ ಬಳಕೆಯಾಗುತ್ತಿದೆ. ಇಲ್ಲಿ ಸಬ್ಬಕ್ಕಿ ಮತ್ತು ಆಲೂಗಡ್ಡೆಯನ್ನು ಉಪಯೋಗಿಸಿ ಹಪ್ಪಳ ಮಾಡುವುದು ಹೇಗೆ ಎನ್ನುವುದನ್ನು ಸರಳವಾಗಿ ತಿಳಿಸಿದ್ದಾರೆ ಬೆಂಗಳೂರಿನ ಮಾಲಾ.
ಬೇಕಾಗುವ ಪಡಿ ಪದಾರ್ಥಗಳು
ಬೇಯಿಸಿದ ಆಲೂಗಡ್ಡೆ: 2
ಸಬ್ಬಕ್ಕಿ ಹಿಟ್ಟು: 1 ಕಪ್
ರುಚಿಗೆ ತಕ್ಕಷ್ಟು ಉಪ್ಪು, ಖಾರ ಒಂಚೂರು ಇಂಗು.
ಮಾಡುವ ವಿಧಾನ
ಎಲ್ಲ ಪದಾರ್ಥಗಳನ್ನೂ ಅಗಲವಾದ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ನಾದಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು. ಸಣ್ಣಸಣ್ಣ ಉಂಡೆಗಳಾಗಿ ಮಾಡಿಕೊಂಡು ಚಪಾತಿ ಮಣೆಯ ಮೇಲೆ ಸಣ್ಣ ಚಪಾತಿಗಳನ್ನು ಲಟ್ಟಣಿಸಿಕೊಳ್ಳಿ. ಇವನ್ನು ಬಿಸಿಲಿನಲ್ಲಿ ಒಣಗಿಸಬೇಕು. ಎಣ್ಣೆಯಲ್ಲಿ ಕರಿದರೆ ಗರಿಗರಿಯಾದ ಸಬ್ಬಕ್ಕಿ ಆಲೂ ಹಪ್ಪಳವನ್ನು ಸಪ್ಪಳ ಮಾಡುತ್ತಾ ತಿನ್ನಬಹುದು.
ಸಬ್ಬಕ್ಕಿಯಿಂದ ತಯಾರಿಸಿದ ಇನ್ನೆರಡು ತಿಂಡಿಗಳು



Click it and Unblock the Notifications
