Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ದಹಿಸುವ ಸೆಕೆಗೆ ತಂಪು ನೀಡುತ್ತೆ ದಹಿವಡೆ

ಬೇಕಾಗುವ ಸಾಮಾಗ್ರಿಗಳು:
1. ಮೊಸರು 1 ಲೋಟ
2. ಉದ್ದಿನ ಬೇಳೆ 1 ಕಪ್
3. ಹೆಸರು ಬೇಳೆ 1 ಕಪ್
4. ಹಸಿ ಮೆಣಸಿನ ಕಾಯಿ 3-4
5. ಇಂಗು 1 ಚಿಟಿಕೆಯಷ್ಟು
6. ಕರಿಮೆಣಸಿನ ಪುಡಿ, ಚಕ್ಕೆ, ಏಲಕ್ಕಿ, ಬೆಳ್ಳುಳ್ಳಿ ಎಸಳು ಇವುಗಳಿಂದ ತಯಾರಿಸಿದ ಗರಂ ಮಸಾಲ
7. ಕೆಂಪು ಮೆಣಸಿನ ಪುಡಿ 1 ಚಮಚ
8. ಹುಣಸೆ ಹಣ್ಣಿನ ರಸ 4 ಚಮಚ
9. ಜೀರಿಗೆ 1 ಚಮಚ
10. ತುಪ್ಪ 1 ಚಮಚ
11. ಎಣ್ಣೆ
12.ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಉದ್ದಿನ ಬೇಳೆ ಮತ್ತು ಹೆಸರು ಬೇಳೆಯನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಬೇಕು. ಇದರ ಜೊತೆ ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಹುಣಸೆ ಹುಳಿ ನೆನೆ ಹಾಕುವುದು ಒಳ್ಳೆಯದು.
2. ವಡೆ ಮಾಡುವಾಗ ಹಸಿಮೆಣಸಿನ ಕಾಯಿ, ಉಪ್ಪು ಮತ್ತು ಇಂಗು ಹಾಕಿ ಗಟ್ಟಿಯಾಗಿ ಅರೆಯಬೇಕು. ನಂತರ ರುಚಿಗೆ ತಕ್ಕ ುಪ್ಪು ಹಾಕಬೇಕು. ಈ ಮಿಶ್ರಣದಿಂದ ವಡೆಗೆ ಬೇಕಾಗುವ ಆಕಾರದಲ್ಲಿ ತಟ್ಟಿಡಬೆಕು.
3. ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಕುದಿಸಬೇಕು. ಕುದಿಯುವ ಎಣ್ಣಿಗೆ ವಡೆ ಹಿಟ್ಟನ್ನು ಹಾಕಿ ಕಂದು ಬಣ್ಣ ಬರುವಾಗ ತೆಗೆಯಬೇಕು.
4. ಬಿಸಿಯಾದ ವಡೆಯನ್ನು ಮಾಡಿದ ತಣ್ಣೀರಿನಲ್ಲಿ ಮುಳುಗಿಸಬೇಕು.
5. ಮೊಸರನ್ನು ಚೆನ್ನಾಗಿ ಕದಡಿ ಗರಂ ಮಸಾಲ, ಉಪ್ಪು ಮತ್ತು ಕೆಂಪು ಮೆಣಸಿನ ಪುಡಿ ಹಾಕಬೇಕು. ಇದನ್ನು ವಡೆ ಮೇಲೆ ಸುರಿದು ಹುಣಸೆ ಹಣ್ಣಿನ ರಸವನ್ನು ಅದರ ಮೇಲೆ ಚಿಮುಕಿಸಬೇಕು.
6. ಬಾಣಲೆಯಲ್ಲಿ ಒಂದು ಚಮಚ ತುಪ್ಪ ಹಾಕಿ ಅದರಲ್ಲಿ ಜೀರಿಗೆ ಹಾಕಿ ಹುರಿದು ಅದನ್ನು ವಡೆ ಮೇಲೆ ಹಾಕಿದರೆ ರುಚಿಯಾದ ದಹಿ ವಡೆ ರೆಡಿ.



Click it and Unblock the Notifications
