Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರುಚಿರುಚಿಯಾದ ಗರಿಗರಿಯಾದ ಮೈದಾ ಬಿಸ್ಕತ್

* ರಶ್ಮಿ ಸುಧೀಂದ್ರ, ಹ್ಯೂಸ್ಟನ್
ಅಗತ್ಯವಾದ ಪದಾರ್ಥಗಳು :
ಮೈದಾ : 1 ಬಟ್ಟಲು
ರವೆ : 1/2 ಬಟ್ಟಲು
ಕೆನೆಭರಿತ ಹಾಲು/ಮೊಸರು : 1/2 ಲೋಟ
ತುಪ್ಪ/ಬೆಣ್ಣೆ : 4 ಚಮಚ
ಸಕ್ಕರೆ : 5 ಚಮಚ
ವೆನಿಲ್ಲಾ ಎಸೆನ್ಸ್ : ಒಂದೂವರೆ ಚಮಚ
ಬಾದಾಮಿ ಪುಡಿ(ಅರೆದು ಪುಡಿ ಮಾಡಿರುವ ಬಾದಾಮಿ) : 2 ಚಮಚ
ಅನಾನಸ್ ಜಾಮ್
ಮೊಟ್ಟೆ : 1
(ಮೊಟ್ಟೆ ಬದಲಿಗೆ ಎರಡು ಚಮಚ ಜಾಸ್ತಿ ಬೆಣ್ಣೆ ಹಾಕಬಹುದು)
ಮಾಡುವ ವಿಧಾನ :
* ಮೊದಲು ಮೈದಾ ಹಿಟ್ಟಿಗೆ ಬೆಣ್ಣೆ, ಬಾದಾಮಿ ಪುಡಿ, ಸಕ್ಕರೆ, ಎಸೆನ್ಸ್, ರವೆಯನ್ನು ಹಾಕಿ. ಹಾಲು/ಮೊಸರಿನಲ್ಲಿ ಗಟ್ಟಿಯಾಗಿ ಮಿಶ್ರಣವನ್ನು ಕಲಸಿ. ಮಿಶ್ರಣ ನೀರಿನಂತಿರಬಾರದು.
* ಕೇಕ್ ಬಾಣಲೆಯ ತಳಕ್ಕೆ ಎಣ್ಣೆ/ತುಪ್ಪ ಹಚ್ಚಿರಿ. ಮೊದಲೇ ಕಲಸಿ ಸಿದ್ಧಪಡಿಸಿರುವ ಹಿಟ್ಟನ್ನು ಕೇಕ್ ಬಾಣಲೆಗೆ ಹಾಕಿ, 350 ಡಿಗ್ರಿ ಶಾಖದಲ್ಲಿ ಬೇಯಿಸಿ.
* ಅನಾನಸ್ ಅಥವಾ ಬೇರೆ ಯಾವುದೇ ಜಾಮ್ ತೆಗೆದುಕೊಂಡು, ಬಾಣಲೆಯಲ್ಲಿನ ಬಿಸ್ಕತ್ಗಳ ಮೇಲೆ ಸವರಬೇಕು. ಬೇಕಾದ ರೀತಿಯಲ್ಲಿ ಕತ್ತರಿಸಿಕೊಂಡು ನಂತರ ಹದಿನೈದು ನಿಮಿಷ ಓವನ್ನಲ್ಲಿ ಬೇಯಿಸಿ. ಅದು ತಣ್ಣಗಾದ ಹತ್ತು ನಿಮಿಷದ ನಂತರ ಹೊರತೆಗೆಯಿರಿ. ಆಗ ರುಚಿರುಚಿಯಾದ ಬಿಸ್ಕತ್ ಗಳು ನಿಮ್ಮನ್ನು ಸ್ವಾಗತಿಸುತ್ತವೆ.
ನಮ್ಮ ಕಿವಿಮಾತು : ಮಕ್ಕಳಿಗೆ ದಿನಕ್ಕೊಂದು ಬಾದಾಮಿಯನ್ನು ತಿನ್ನಲು ಕೊಟ್ಟರೆ, ಅವರ ಬುದ್ಧಿಶಕ್ತಿ ಚಿಗುರುತ್ತದೆ.



Click it and Unblock the Notifications
