Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ರೆಸಿಪಿ: ಸಾಂಬಾರ್ ಹೀಗೆ ಮಾಡಿ ನೋಡಿ, ಸೂಪರ್ ಆಗಿರುತ್ತೆ
ಸಾಂಬಾರ್ ಹಲವಾರು ರುಚಿಯಲ್ಲಿ ತಯಾರಿಸುತ್ತಾರೆ. ಇಡ್ಲಿಗೆ ಒಂದು ರುಚಿಯ ಸಾಂಬಾರ್, ಇನ್ನು ಉಡುಪಿ ಸಾಂಬಾರ್ ರುಚಿಯೇ ಬೇರೆ, ತಮಿಳುನಾಡಿನ ಸಾಂಬಾರ್ ರುಚಿಯೇ ಭಿನ್ನ ಹೀಗೆ ತರಾವರಿ ರುಚಿಯಲ್ಲಿ ಸಾಂಬಾರ್ ಮಾಡಲಾಗುವುದು.
ಇಲ್ಲಿ ನಾವು ನೀಡಿರುವ ಸಾಂಬಾರ್ ರೆಸಿಪಿ ನೀವು ಟ್ರೈ ಮಾಡಿದ್ದೇ ಆದರೆ ಸೂಪರ್ ರುಚಿಯ ಸಾಂಬಾರ್ ರೆಡಿಯಾಗಿರುತ್ತೆ ಎನ್ನುವುದರಲ್ಲಿ ನೋ ಡೌಟ್.

ಅಲ್ಲದೆ ಈ ಸಾಂಬಾರ್ ಇಡ್ಲಿಗೆ ಸೈ, ಅನ್ನಕ್ಕೂ ಓಕೆ. ಅಲ್ಲದೆ ನಾವಿಲ್ಲಿ ಸಾಂಬಾರ್ ಪೌಡರ್ ರೆಸಿಪಿ ಟ್ರೈ ಮಾಡಿದ್ದೇವೆ, ರೆಡಿಮೇಡ್ ಸಾಂಬಾರ್ ಟೇಸ್ಟ್ ಬೇಡ ಎನ್ನುವುದಾದರೆ ಇದನ್ನು ಟ್ರೈ ಮಾಡಬಹುದು.
Recipe By: Reena TK
Recipe Type: Curry
Serves: 5-6
-
ಬೇಕಾಗುವ ಸಾಮಗ್ರಿ
ತೊಗರಿ ಬೇಳೆ ಅರ್ಧ ಕಪ್
1/2 ಚಮಚ ಖಾರದ ಪುಡಿ
2 ಚಮಚ ಸಾಂಬಾರ್ ಪುಡಿ
1/2 ಚಮಚ ಅರಿಶಿಣ ಪುಡಿ
*1 ಈರುಳ್ಳಿ
* 1-2 ನುಗ್ಗೆಕಾಯಿ
* 1 ಕ್ಯಾರೆಟ್* 2-3 ಬೆಂಡೆಕಾಯಿ
* 2 ಟೊಮೆಟೊ
* ಸ್ವಲ್ಪ ಸಿಹಿ ಕುಂಬಳಕಾಯಿ (Optional)
* ಬದನೆಕಾಯಿ (Optional)
-
ಮಾಡುವ ವಿಧಾನ
* ಮೊದಲಿಗೆ ಬೇಳೆ ತೊಳೆದು, ಅದು ಬೇಯಲು ತಕ್ಕ ನಿರು ಹಾಗೂ ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಿ. ಬೇಳೆ ಚೆನ್ನಾಗಿ ಬೇಯಲಿ. ಪೇಸ್ಟ್ ರೀತಿಯಾದರೆ ಸಾಂಬಾರ್ ರುಚಿ ಹೆಚ್ಚುವುದು.
* ಅದೇ ಸಮಯಕ್ಕೆ ಸಾರು ಪಾತ್ರೆಗ ಒಂದು ಚಮಚ ಎಣ್ಣೆ ಹಾಕಿ, ಅದರಲ್ಲಿ ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡಿ, ನಂತರ ಬೆಂಡೆಕಾಯಿ ಹಾಕಿ ಫ್ರೈ ಮಾಡಿ, ಇತರ ತರಕಾರಿ ಹಾಕಿ 2-3 ನಿಮಿಷ ಫ್ರೈ ಮಾಡಿ. ಈಗ ಅರ್ಧ ಚಮಚ ಖಾರದ ಪುಡಿ ಹಾಕಿ ಬೇಯಲು ತಕ್ಕ ನೀರು, ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಿ. ನುಗ್ಗೆಕಾಯಿ ಉಳಿದ ತರಕಾರಿ ಮುಕ್ಕಾಲು ಭಾಗ ಬೆಂದ ಮೇಲೆ ಹಾಕಿ.
* ತರಕಾರಿ ಕುದಿ ಬರುವಾದ ಅದರ ನಿರು ಸ್ವಲ್ಪ ಒಂದು ಚಿಕ್ಕ ಬೌಲ್‌ಗೆ ಹಾಕಿ ಅದರಲ್ಲಿ ಸ್ವಲ್ಪ ಹುಣಸೆಹಣ್ಣು ನೆನೆಹಾಕಿ.
* ತರಕಾರಿ ಬೆಂದ ಮೇಲೆ 1/4 ಚಮಚ ಅರಿಶಿಣ ಪುಡಿ, ಒಂದೂವರೆ ಅಥವಾ ಎರಡು ಚಮಚ ಸಾಂಬಾರ್ ಪುಡಿ ಹಾಕಿ ಮಿಶ್ರ ಮಾಡಿ ಕುದಿಸಿ, ಉಪ್ಪು ಸರಿಯಾಗಿದೆಯೇ ನೋಡಿ, ಬೇಕಿದ್ದರೆ ಸ್ವಲ್ಪ ಉಪ್ಪು ಸೇರಿಸಿ. ಈಗ ಹುಣಸೆ ಹಣ್ಣಿನ ರಸ ಹಿಂಡಿ, ಅದನ್ನು ಬೆಂದ ತರಕಾರಿಗೆ ಸೇರಿಸಿ ಕುದಿಸಿ.
* ಮಿಶ್ರಣ ಕುದಿ ಬರುವಾಗ ಬೇಯಿಸಿದ ತೊಗರಿಬೇಳೆ ಮ್ಯಾಶ್ ಮಾಡಿ ಸೇರಿಸಿ ಕುದಿಸಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಉರಿಯಿಂದ ಇಳಿಸಿ. ನಂತರ ಒಗ್ಗರಣೆ ಕೊಟ್ಟರೆ ಸಾಂಬಾರ್ ರೆಡಿ.
ಒಗ್ಗರಣೆಗೆ: 1 ಚಮಚ ತುಪ್ಪವನ್ನು ಒಗ್ಗರಣೆ ಪಾತ್ರೆಗೆ ಹಾಕಿ, ನಂತ ಸ್ವಲ್ಪ ಸಾಸಿವೆ ಹಾಕಿ, ಸಾಸಿವೆ ಟ್ಪಟ್ ಶಬ್ದ ಬರುವಾಗ 1/4 ಚಮಚ ಜೀರಿಗೆ ಹಾಕಿ, ನಂತರ ಸ್ವಲ್ಪ ಇಂಗು ಹಾಗೂ ಕರಿಬೇವು ಹಾಕಿ ಅದನ್ನು ಸಾಂಬಾರ್‌ಗೆ ಸುರಿದು ಮಿಶ್ರ ಮಾಡಿ.
- ಸಾಂಬಾರ್ ಪೌಡರ್ ಮಾಡುವುದು ಹೇಗೆ? ಬೇಳೆ ಬೇಯುತ್ತಿರುವ ಸಮಯದಲ್ಲಿ ಸಾಂಬಾರ್ ಪುಡಿ ತಯಾರು ಮಾಡಬಹುದು. ರೆಡಿಮೇಡ್ ಪುಡಿ ಇದ್ದರೆ ಅದನ್ನು ಬಳಸಬಹುದು. ಸಾಂಬಾರ್ ಪುಡಿ ಮಾಡಲು 4-5 ಒಣ ಮೆಣಸನ್ನು ರೋಸ್ಟ್ ಮಾಡಿ. ಅದಕ್ಕೆ ಚಮಚ ಕಡಲೆ ಬೇಳೆ, 1 ಚಮಚ ಉದ್ದಿನ ಬೇಳೆ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ 1 ಚಮಚ ಕೊತ್ತಂಬರಿ ಬೀಜ ಹಾಕಿ ಅದರಿಂದ ಸುವಾಸನೆ ಬರುವಾಗ ಈ ಮಿಶ್ರಣ ಪ್ಲೇಟ್‌ಗೆ ಸುರಿಯಿರಿ. ಈಗ 1/4 ಚಮಚ ಮೆಂತೆ, 1/2 ಚಮಚ ಜೀರಿಗೆ ಸ್ವ್ಪ ಉರಿದು ಮೆಣಸು ಹಾಕಿಟ್ಟ ಪ್ಲೇಟ್‌ಗೆ ಹಾಕಿ, ಸ್ವಲ್ಪ ಆರಿದ ಮೇಲೆ ಮಿಕ್ಸಿಯಲ್ಲಿ ರುಬ್ಬಿದರೆ ಸಾಂಬಾರ್ ಪುಡಿ ರೆಡಿ.
- ಸರ್ವ್ -
- ಕೊಬ್ಬು - 5.4ಗ್ರಾಂ
- ಪ್ರೊಟೀನ್ - 5.2ಗ್ರಾಂ
- ಕಾರ್ಬ್ಸ್ - 18.4ಗ್ರಾಂ
- ನಾರಿನಂಶ - 2.8ಗ್ರಾಂ



Click it and Unblock the Notifications