Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ವಾಂಗಿಭಾತ್ ಅಲ್ಲ ಬದ್ನೇಕಾಯಿ ಅನ್ನ

ವಾಂಗಿ ಎಂಬ ಪದವನ್ನು ಕನ್ನಡಕ್ಕೆ ಬದನೆ ಎಂದು ತರ್ಜುಮೆ ಮಾಡಿಕೊಂಡು ಆನಂತರ ಅಡುಗೆಯನ್ನು ಯಾವ ಕನ್ನಡಿಗ ಕನ್ನಡತಿಯೂ ಇದುವರೆಗೆ ಮಾಡಿದ ಉದಾಹರಣೆ ನಮ್ಮ ವೆಬ್ ಸೈಟಿಗೆ ಗೊತ್ತಿಲ್ಲ. ಹೋಟೆಲುಗಳು ಅಷ್ಟೆ, ಮನೆಗಳೂ ಅಷ್ಟೆ, ಛತ್ರಗಳು ಅಷ್ಟೆ, ಮಠಗಳೂ ಅಷ್ಟೆ. ತಿನ್ನುವಾಗಲೂ ಕೂಡ ವಾಂಗೀಭಾತ್ ಎನ್ನುತ್ತಾರೆಯೇ ವಿನಾ ಅಪ್ಪಿತಪ್ಪಿ ಕನ್ನಡ ಸ್ಮರಣೆಯ ಬದನೇಕಾಯಿ ಅನ್ನ ಎನ್ನುವುದಿಲ್ಲ.
ನಮ್ಮ ಮನೇಲಿ ಇವತ್ತು ಬದನೇ ಕಾಯಿ ಅನ್ನ ಮಾಡಿದ್ದರು ಎಂದು ಯಾವ ಕುಮಾರವ್ಯಾಸ, ಕುವೆಂಪು, ಕಾರ್ನಾಡ್ , ಚಿಮೂ, ಕರವೇ ನಾರಾಯಣಗೌಡರಾಗಲೀ, ಮುತ್ತಪ್ಪ ರೈ ಆಗಲೀ ಅಥವಾ ದೇಜಗೌ, ಕಲ್ಬುರ್ಗಿ, ಪಂಪ, ಚಂಪಾ, ನಲ್ಲೂರು ಪ್ರಸಾದ್, ಪಂಡಿತಾರಾಧ್ಯ, ಶಿಕಾರಿಪುರ ಹರಿಹರೇಶ್ವರರು ಹೇಳಿದ್ದಿಲ್ಲ. ವಾಂಗೀಭಾತ್ ಪದದ ಗೌಡಿಕೆ ಹಾಗಿದೆ.
ಈ ಹಿನ್ನೆಲೆಯಲ್ಲಿ ಇವತ್ತು ದಟ್ಸ್ ಕನ್ನಡದ ಸಂಪಾದಕೀಯ ಸಭೆಯಲ್ಲಿ ಬದನೆಕಾಯಿ ಅನ್ನವನ್ನೇ ಮಾಡಬೇಕೆಂದು ಠರಾವು ಸ್ವೀಕರಿಸಲಾಯಿತು. ಇದನ್ನು ಮಾಡುವುದಕ್ಕೆ ಮುಖ್ಯವಾಗಿ ಬದನೇಕಾಯಿ ಅನ್ನದ ಪುಡಿ ಬೇಕು. ಈ ಪುಡಿ ಮಾಡುವ ವಿಧಾನವನ್ನು ಪಬ್ಲಿಷ್ ಮಾಡುವುದೆಂದು ತೀರ್ಮಾನಿಸಲಾಯಿತು. ಹಾಗಾಗಿ ಅದನ್ನು ಇದೇ ಪುಟದಲ್ಲಿ ವಿವರಿಸಲಾಗಿದೆ.
ಈ ಪುಡಿ ಮಾಡಿಟ್ಟುಕೊಂಡು ಮಹಾಜನತೆ ಬದನೆಕಾಯಿ ಅನ್ನವನ್ನು ಮಾಡಬಹುದೆಂದು ಸೂಚಿಸಲಾಗಿದೆ. ಒಂದು ಸೇರು ಅಕ್ಕಿ ಬದನೆಕಾಯಿ ಅನ್ನ ಮಾಡುವುದಕ್ಕೆ ಬೇಕಾಗುವಷ್ಟು ಪುಡಿ ಮಾಡಲು ಸಾಮಗ್ರಿಗಳನ್ನು ಹೊಂದಿಸಿಕೊಳ್ಳಬೇಕು.
ಸಾಮಗ್ರಿ ಮತ್ತು ವಿಧಾನ ಹೀಗಿದೆ :
100 ಗ್ರಾಂ ಒಣಮೆಣಸಿನಕಾಯಿ, ತಲಾ ಹತ್ತತ್ತು ಗ್ರಾಂ ಕೊತ್ತಂಬರಿ ಬೀಜ, ಕಡಲೆಬೇಳೆ, ಉದ್ದಿನಬೇಳೆ ಮತ್ತು ಜೀರಿಗೆ. 5ಅಥವಾ 6 ಲವಂಗ, ಎರಡು ತುಂಡು ದಾಲ್ಚಿನ್ನಿ ಚಕ್ಕೆ. ನಾಕು ಹನಿ ಎಣ್ಣೆ ಬಿಸಿ ಮಾಡಿಕೊಂಡು ಪ್ರತ್ಯೇಕವಾಗಿ ಮೆಣಸಿನಕಾಯಿಯನ್ನು ಘಾಟು ಬರುವವರೆಗೆ ಹುರಿಯಬೇಕು. ಮತ್ತೆ ಪ್ರತ್ಯೇಕವಾಗಿ ಉಳಿದ ಪದಾರ್ಥಗಳನ್ನು ನಾಕಾರು ಹನಿ ಎಣ್ಣೆಯಲ್ಲಿ ಹುರಿದುಕೊಂಡು ಆನಂತರದಲ್ಲಿ ಎರಡನ್ನೂ ಬೆರೆಸಿ, ಸ್ವಲ್ಪ ಉಪ್ಪು ಹಾಕ್ಕೊಂಡು ಮಿಕ್ಸಿಗೆ ಹಾಕಿ ಪುಡಿ ಮಾಡಬೇಕು.
ಮೈಸೂರು ಬದನೆಕಾಯಿಯನ್ನು ಸೀಳುಸೀಳಾಗಿ ಹೆಚ್ಚಿಕೊಂಡು ಎಣ್ಣೆ ಸಾಸಿವೆ ಕರಿಬೇವು ಒಗ್ಗರಣೆಯಲ್ಲಿ ಹಾಕಿ ಬಾಡಿಸಬೇಕು. ಬದನೆ ಬೇಯುವಾಗ ಸ್ವಲ್ಪ ನೀರು ಚಿಮುಕಿಸಿ ಮುಚ್ಚಳ ಮುಚ್ಚಬೇಕು. ಬೆಂದನಂತರ ಅದಕ್ಕೆ ಪುಡಿ ಹಾಕಿ ಸ್ವಲ್ಪ ಹೊತ್ತು ಪಲ್ಯ ಸಂಸ್ಕಾರ ಆಗಬೇಕು. ಉದುರುದುರಾಗಿ ಮಾಡಿದ ಹಳೆ ಅಕ್ಕಿ ಅನ್ನವನ್ನು ಹರಿವಾಣಕ್ಕೆ ಹಾಕಿ ಆರಿದ ನಂತರ ಅದಕ್ಕೆ ಅಳತೆ ನೋಡಿಕೊಂಡು ಪುಡಿ ಪಲ್ಯ ಉದುರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು, ಒಂದೆರಡು ನಿಂಬೆಹಣ್ಣಿನ ರಸ ಮತ್ತು ಒಣಕೊಬ್ಬರಿ ತುರಿ ಹಾಕಿ ಎರಡು ಸೌಟುಗಳ ನೆರವಿನಿಂದ ಕಲಸಬೇಕು. ಪುಡಿ ಉಳಿದರೆ ಚಿಂತೆ ಇಲ್ಲ. ಅದರ ಆಯಸ್ಸು ಒಂದು ತಿಂಗಳು.



Click it and Unblock the Notifications