Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅರಿಶಿನದ ಎಲೆ ತಂಬುಳಿ ರೆಸಿಪಿ
ಆಯುರ್ವೇದದಲ್ಲಿ ಅರಿಶಿಣಕ್ಕೆ ಬಹಳ ಮಹತ್ವವಿದೆ. ಅರಿಶಿಣವು ಸರ್ವರೋಗಗಳನ್ನು ನಿವಾರಿಸಿ ತಡೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಸೌಂದರ್ಯವರ್ಧಕವೂ ಹೌದು, ಆರೋಗ್ಯವರ್ಧಕವೂ ಹೌದು. ಹಾಗಾಗಿ ಗಾಯ ನಿವಾರಕವೂ ಹೌದು, ಅಲರ್ಜಿ ನಿವಾರಕವೂ ಹೌದು. ಇದರ ಪ್ರಯೋಜನಗಳ ಪಟ್ಟಿ ಬಹಳ ಉದ್ದವಿದೆ.

ಅಡುಗೆಯಲ್ಲೂ ಕೂಡ ಅರಿಶಿಣಕ್ಕೆ ಬಹಳ ಮಹತ್ವವಿದೆ. ಅಡುಗೆ ಮನೆಯ ಸಾಂಬಾರ ಪದಾರ್ಥಗಳಲ್ಲಿ ಅರಿಶಿಣಕ್ಕೆ ಪ್ರಮುಖ ಸ್ಥಾನ. ಅರಿಶಿಣದ ಗಡ್ಡೆಗಳಿಂದ ತಯಾರಿಸುವ ಪುಡಿ ಮಾತ್ರವಲ್ಲ ಬದಲಾಗಿ ಅರಿಶಿಣದ ಎಲೆಗಳಲ್ಲೂ ಕೂಡ ಬಹಳ ಶಕ್ತಿ ಇದೆ. ಅದರ ಘಮವೇ ಬಹಳ ಉತ್ತಮವಾಗಿರುತ್ತದೆ. ಅರಿಶಿಣದ ಎಲೆಯನ್ನು ಬಳಸಿ ಮಾಡುವ ಕಡುಬು ನೀವು ಕೇಳಿರಬಹುದು.

ಪಾಯಸ ಮಾಡುವಾಗ ಅರಿಶಿಣದ ಎಲೆಯನ್ನು ಪಾಯಸಕ್ಕೆ ಘಮ ಹೆಚ್ಚಿಸುವುದಕ್ಕೆ ಬಳಸಲಾಗುತ್ತದೆ. ಅದೇ ರೀತಿ ಅರಿಶಿಣದ ಎಲೆಯಿಂದ ತಂಬಳಿಯನ್ನೂ ಮಾಡಬಹುದು. ಅರೆ ಅರಿಶಿಣದ ಎಲೆಯ ತಂಬಳಿಯೇ ಎಂದು ಹುಬ್ಬೇರಿಸಬೇಡಿ. ಹೌದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ತಂಬಳಿಯನ್ನು ಮಾಡುವುದು ಹೇಗ ಎಂಬುದನ್ನು ತಿಳಿಯೋಣ ಬನ್ನಿ.
Recipe By: Sushma
Recipe Type: Tambuli
Serves: 3
-
ಬೇಕಾಗುವ ಸಾಮಗ್ರಿಗಳು
ಅರಿಶಿಣದ ಎಲೆಯ ಎಳೆಯ ಕುಡಿಗಳು- ಐದರಿಂದ ಆರು
ಕಾಳುಮೆಣಸು- ಐದಾರು
ಜೀರಿಗೆ- ಒಂದು ಸ್ಪೂನ್
ತೆಂಗಿನ ಕಾಯಿತುರಿ- ಒಂದು ಮುಷ್ಠಿ
ಕಡೆದ ಮಜ್ಜಿಗೆ- ಕಾಲು ಲೀಟರ್
ಬೆಲ್ಲ- ನಾಲ್ಕು ಟೀ ಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಬೆಣ್ಣೆ - ನಾಲ್ಕು ಸ್ಪೂನ್
-
ಮಾಡುವ ವಿಧಾನ
ಅರಿಶಿನಣದ ಎಲೆಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ನಂತರ ಅದನ್ನು ಚಿಟಿಕೆ ಬೆಣ್ಣೆ ಹಾಕಿ ಹುರಿಯಿರಿ.
ಅದಕ್ಕೆ ಕಾಳುಮೆಣಸು, ಕಾಯಿತುರಿ,ಜೀರಿಗೆ ಹಾಕಿ ಹುರಿಯಿರಿ.
ಈ ಮಿಶ್ರಣವನ್ನು ರುಬ್ಬಿಕೊಳ್ಳಿ. ನಂತರ ಈ ರುಬ್ಬಿದ ಮಿಶ್ರಣದ ಜೊಗಟಿಯನ್ನು ಸೋಸಿಕೊಳ್ಳಿ.
ಸೋಸದೆಯೂ ಬಳಸಬಹುದು. ನಂತರ ಈ ರಸಕ್ಕೆ ಉಪ್ಪು,ಬೆಲ್ಲ ಮತ್ತು ಕಡೆದ ಮಜ್ಜಿಗೆ ಸೇರಿಸಿ ಚೆನ್ನಾಗಿ ಕೈಯಾಡಿ.
ನಂತರ ಬೆಣ್ಣೆಗೆ ಸ್ವಲ್ಪ ಜೀರಿಗೆ ಹಾಕಿ ಒಗ್ಗರಣೆ ಮಾಡಿದರೆ ಅರಿಶಿಣದ ಎಲೆ ತಂಬಳಿ ಸವಿಯಲು ಸಿದ್ಧ.
- ಅರಿಶಿಣದ ಎಲೆಯ ತಂಬಳಿ ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ಗಾಯವನ್ನು ಗುಣಗೊಳಿಸುವ ಶಕ್ತಿ ಇದಕ್ಕಿದೆ. ಊರಿಯೂತ ತಡೆಯುವ ಶಕ್ತಿ ಇದೆ. ಚರ್ಮದ ಕಾಂತಿ ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ.
- ಕ್ಯಾಲೋರಿ - - 29
- ಪ್ರೊಟೀನ್ - - 0.91ಗ್ರಾಮ್



Click it and Unblock the Notifications
