Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಹುರುಳಿಕಾಳಿನ ರಸಂ ರೆಸಿಪಿ
ಹುರುಳಿಕಾಳಿನಲ್ಲಿ ಪ್ರೊಟೀನ್ ಅಂಶಗಳಿದ್ದು ಡಯಟ್ ನಲ್ಲಿ ಇದನ್ನು ಸೇರಿಸಿದರೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದರಿಂದ ಅನೇಕ ಬಗೆಯ ಅಡುಗೆಗಳನ್ನು ತಯಾರಿಸಬಹುದಾಗಿದ್ದು ಇವತ್ತು ನಾವು ಹುರುಳಿಕಾಳಿನ ರಸಂ(ಸಾರು) ಮಾಡುವ ವಿಧಾನ ತಿಳಿಯೋಣ.
ಈ ಸಾರಿಗೆ ಹುರುಳಿಕಾಳನ್ನು ಅರೆದು ಸೇರಿಸುವುದರಿಂದ ಸವಿಯಲು ಮತ್ತಷ್ಟು ರುಚಿಕರವಾಗಿರುತ್ತದೆ. ಇದರ ರುಚಿಕರವಾದ ರಸಂ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* ಹುರುಳಿಕಾಳು ಅರ್ಧ ಕಪ್
* ಟೊಮೆಟೊ 2
* ಬೆಳ್ಳುಳ್ಳಿ 3-4 ಎಸಳು
* ನಿಂಬೆ ಹಣ್ಣಿನ ಗಾತ್ರದಷ್ಟು ದೊಡ್ಡದಿರುವ ಹುಣಸೆ ಹಣ್ಣಿನ ಉಂಡೆ
* ಚಿಟಿಕೆಯಷ್ಟು ಇಂಗು
* ಕರಿಮೆಣಸಿನ ಪುಡಿ 1 ಚಮಚ
* ಜೀರಿಗೆ 1 ಚಮಚ
* ಸಾಸಿವೆ 1 ಚಮಚ
* ಒಣ ಮೆಣಸು 2
* ಸ್ವಲ್ಪ ಕರಿಬೇವಿನ ಎಲೆ
* ಅರ್ಧ ಚಮಚ ಸಕ್ಕರೆ
* ಎಣ್ಣೆ
* ಕೊತ್ತಂಬರಿ ಸೊಪ್ಪು
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಹುರುಳಿಕಾಳನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿದು ನಂತರ ಬದಿಯಲ್ಲಿ ತೆಗೆದು ಇಡಬೇಕು.
2. ನಂತರ ಕುಕ್ಕರ್ ನಲ್ಲಿ ಹಾಕಿ ಒಂದೂವರೆ ಕಪ್ ನೀರು ಹಾಕಿ ಸ್ವಲ್ಪ ಉಪ್ಪು ಸೇರಿಸಿ 3 ವಿಶಲ್ ಕೊಡುವವರಿಗೆ ಬೇಯಿಸಬೇಕು.
3. ಹುಣಸೆಹಣ್ಣಿನಿಂದ ರಸ ಮಾಡಿ ಆ ರಸಕ್ಕೆ ಸಕ್ಕರೆ ಹಾಕಿ ಬದಿಯಲ್ಲಿಡಬೇಕು.
4. ಈಗ ಹುರುಳಿಕಾಳನ್ನು ತೆಗೆದು ಜೀರಿಗೆ, ಕರಿಮೆಣಸಿನ ಪುಡಿ ಮತ್ತು ಬೆಳ್ಳುಳ್ಳಿ ಹಾಕಿ ನುಣ್ಣನೆ ಅರೆಯಬೇಕು. (ಹುರುಳಿಕಾಳು ಬೇಯಿಸಿದ ನೀರನ್ನು ತೆಗೆದಿಡಿ)
5. ಈಗ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಒಣಮೆಣಸನ್ನು ಮುರಿದು ಹಾಕಬೇಕು ನಂತರ ಸ್ವಲ್ಪ ಇಂಗು ಮತ್ತು ಕರಿಬೇವಿನ ಎಲೆ ಹಾಕಿ ನುಣ್ಣನೆ ಅರೆದ ಹುರುಳಿಕಾಳು ಪೇಸ್ಟ್ ಅನ್ನು ಹಾಕಿ, ಹುರುಳಿಕಾಳು ಬೇಯಿಸಿದ ನೀರನ್ನು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಬೇಕು. ಸಾರು ಕುದಿ ಬರುವಾಗ ಹುಣಸೆಹಣ್ಣಿನ ರಸ ಹಾಕಿ 5 ನಿಮಿಷ ಕುದಿಸಿ ಉರಿಯಿಂದ ಇಳಿಸಿದರೆ ಉರುಳಿಕಾಳಿನ ಸಾರು(ರಸಂ) ರೆಡಿ.



Click it and Unblock the Notifications
