Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಒಬ್ಬಟ್ಟು ಸಾರು ರೆಸಿಪಿ Happy VML

ಬೇಕಾಗುವ ಸಾಮಾಗ್ರಿಗಳು:
* ಒಂದು ಇಂಚಿನ ಚಕ್ಕೆ
* ಸ್ವಲ್ಪ ಕರಿಬೇವಿನ ಎಲೆ
* ಹಸಿಮೆಣಸಿನ ಕಾಯಿ 4
* ಬೆಲ್ಲ ಅರ್ಧ ಚಮಚ
* ಗಟ್ಟಿಯಾದ ಹುಣಸೆ ರಸ ಒಂದು ಚಮಚದಷ್ಟು
* ತುರಿದ ತೆಂಗಿನ ಕಾಯಿ 1 ಚಮಚ (ಒಣ ಕೊಬ್ಬರಿ ಬೇಕಾದರೂ ಬಳಸಬಹುದು)
* ಕೊತ್ತಂಬರಿ ಪುಡಿ 1/2 ಚಮಚ
* ರುಚಿಗೆ ತಕ್ಕ ಉಪ್ಪು
* ಎಣ್ಣೆ 2 ಚಮಚ
* ಕೊತ್ತಂಬರಿ ಸೊಪ್ಪು ಸ್ವಲ್ಪ
* ಹೂರಣ 3 ಚಮಚ
( ಒಂದು ಕಪ್ ಕಡಲೆ ಬೇಳೆ ಬೇಯಿಸಿ, ಮತ್ತೊಂದು ಪಾತ್ರೆಯಲ್ಲಿ ಒಂದು ಕಪ್ ಬೆಲ್ಲವನ್ನು ನೀರು ಹಾಕದೆ ಕರಗಿಸಿ. ಕರಗಿದ ಬೆಲ್ಲದ ಪಾಕಕ್ಕೆ ಬೇಯಿಸಿದ ಕಡಲೆಬೇಳೆಯನ್ನು ಹಾಕಿ ಮಿಶ್ರಮಾಡಿ. ಮಿಶ್ರಣ ತುಂಬಾ ಗಟ್ಟಿಯಾಗಿರಲಿ, ನೀರಾದರೆ ಈ ಮಿಶ್ರಣವನ್ನು ಸ್ವಲ್ಪ ಕುದಿಸಿ, ಕುದಿಸಿದ ಮಿಶ್ರಣವನ್ನು ಆರಲು ಬಿಡಿ, ಆರಿದ ಮಿಶ್ರಣವನ್ನು ನುಣ್ಣಗೆ ರುಬ್ಬಿ. ಈ ರೀತಿ ಮಾಡಿದರೆ ಹೂರಣ ರೆಡಿ. 3 ಚಮಚ ಹೂರಣವನ್ನು ಸಾರಿಗೆ ತೆಗೆದಿಟ್ಟು ಉಳಿದ ಮಿಶ್ರಣದಿಂದ ಒಬ್ಬಟ್ಟು ತಯಾರಿಸಿಕೊಳ್ಳಿ).
ತಯಾರಿಸುವ ವಿಧಾನ:
1. ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಚಕ್ಕೆ, ಕರಿಬೇವು, ಹಸಿಮೆಣಸಿನ ಕಾಯಿ ಹುರಿಯಬೇಕು.
2. ನಂತರ ಕತ್ತರಿಸಿದ ತುರಿದ ತೆಂಗಿನಕಾಯಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
3. ನಂತರ ಈ ಮಿಶ್ರಣವನ್ನು ಅರಿಯಬೇಕು.
4. ನಂತರ ಇದನ್ನು ಒಂದು ಪಾತ್ರೆಯಲ್ಲಿ ಹಾಕಿ ಸ್ವಲ್ಪ ನೀರು ಸೇರಿಸಿ ಕುದಿಸಬೇಕು. ನಂತರ ಬೆಲ್ಲ, ಹುಣಸೆ ಹಣ್ಣಿನ ರಸ, ರುಚಿಗೆ ತಕ್ಕ ಉಪ್ಪು ಕೊತ್ತಂಬರಿ ಪುಡಿ ಮತ್ತು ಹೂರಣ ಹಾಕಿ ಚೆನ್ನಾಗಿ ಕುದಿಸಬೇಕು.
5. ನಂತರ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿದರೆ ವರಮಹಾಲಕ್ಷ್ಮಿ ಹಬ್ಬಕ್ಕೆ ಒಬ್ಬಟ್ಟು ಸಾರು ರೆಡಿ.
ವಿಸೂ : ಈರುಳ್ಳಿ ಬೆಳ್ಳುಳ್ಳಿ ಹಾಕಿಯೂ ಮಾಡಬಹುದು. ಆದರೆ ಅದು ನಿಮ್ಮಿಷ್ಟ.



Click it and Unblock the Notifications
