Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಚಳಿಗಾಲದಲ್ಲಿ ತಯಾರಿಸಿ ಅವರೆಕಾಳಿನ ಹುಳಿ

* ಭೀಮಸೇನ್ ರಾವ್
ಹೇಮಂತಋತು ಕಾಲಿಡುತ್ತಿದ್ದಂತೆ ಬೆಂಗಳೂರಿನ ಬೀದಿಬೀದಿಗಳಲ್ಲಿ ಅವರೆಕಾಳು ಗುಡ್ಡೆಗಳು ಹಾಜರಾಗುತ್ತವೆ. ಸೇರಿಗೆ 40 ಅಥವಾ 50 ರು. ಸೇರಿಗೆ ಅರವತ್ತೆಂದರೂ ಜನ ಮುಗಿಬಿದ್ದು ಕೊಂಡ್ಕೊಂಡು ಹೋಗ್ತಾರೆ. ಅವರೆಕಾಳು ಮಾರುವವರಿಗೂ ಭರ್ಜರಿ ವ್ಯಾಪಾರ.
ಅವರೆಕಾಳಿನಿಂದ ತಯಾರಿಸುವ ನಾನಾಬಗೆಯ ತಿಂಡಿತಿನಿಸುಗಳನ್ನು ನೆನೆದರಂತೂ ಕುಂತಲ್ಲಿಯೇ ಬಾಯಲ್ಲಿ ನೀರೂರಲು ಪ್ರಾರಂಭಿಸುತ್ತದೆ. ಅವರೆಕಾಳು ನಿಪ್ಪಟ್ಟು, ಕೋಡುಬಳೆ, ಉಸಳಿ, ಹುಳಿ, ಬಸ್ಸಾರು, ಮಸಾಲೆವಡೆ... ಒಂದೆ ಎರಡೆ... ಇನ್ನೂ ಎಷ್ಟೆಷ್ಟಿವೆಯೋ ಆ ಭಗವಂತನೇ ಬಲ್ಲ.
ಮಾಗಿಯ ಚಳಿಗೆ ಸೊಗಡಾಗಿ ಸಿಗುವ ಅವರೆ ಕಾಳು ರುಚಿಕರವಷ್ಟೇ ಅಲ್ಲ. ಪೌಷ್ಟಿಕ ಕೂಡ. ಅವರೆ ಚಳಿಯನ್ನು ತಡೆಯುವ ಶಕ್ತಿಯನ್ನೂ ವೃದ್ಧಿಸುತ್ತದಂತೆ. ಡಿಸೆಂಬರ್ ಕೊನೆಯ ವಾರ ಮತ್ತು ಮುಂದಿನ ವರ್ಷದ ಮೊದಲ ವಾರ ರಾಜ್ಯದಲ್ಲಿ ಭಯಂಕರ ಚಳಿ ಇರುತ್ತದೆಂದು ಹವಾಮಾನ ಇಲಾಖೆ ಬೇರೆ ಮುನ್ನೆಚ್ಚರಿಕೆ ನೀಡಿದೆ. ಚಳಿಯನ್ನು ಒದ್ದೋಡಿಸಲು ಅವರೆಕಾಳು ಹುಳಿ ಅಥವಾ ಸಾಂಬಾರನ್ನೇ ಮಾಡಿದರೆ ಹೇಗೆ?
ಬೇಕಾಗುವ ಪದಾರ್ಥ : ಬಲಿತ ಅವರೆಕಾಯಿ, ಒಂದು ಚಮಚ ತುಪ್ಪ, 1 ಚಮಚ ಮೆಂತ್ಯ, ಅರ್ಧ ಗಿಟಕು ಒಣಕೊಬ್ಬರಿ, ಒಂದು ಚಮಚ ಹುರಿಗಡಲೆ, ಒಂದೊಂದು ಚಮಚದಷ್ಟು ಅರಿಶಿನ, ಜೀರಿಗೆ, ಕೊತ್ತಂಬರಿ ಬೀಜ, ಗಸಗಸೆ, ನಾಲ್ಕು ಈರುಳ್ಳಿ, 10-15 ಕೆಂಪು ಮೆಣಸಿನಕಾಯಿ ಮತ್ತು ಪಾಲಾಕ್ ಸೊಪ್ಪು, ಸ್ವಲ್ಪ ಎಣ್ಣೆ.
ಮಾಡುವ ವಿಧಾನ : ಮೊದಲು ಬಲಿತ ಅವರೆಕಾಯನ್ನು ಸುಲಿದು ಕಾಳನ್ನು ಆರಿಸಿ ಸಾರು ಮಾಡುವ ಹಿಂದಿನ ರಾತ್ರಿ ನೀರಿಗೆ ಹಾಕಿಡಿ. ಬೆಳಗ್ಗೆ ಚೆನ್ನಾಗಿ ನೆಂದ ಕಾಳಿನ ಮೇಲ್ಭಾಗದ ಸಿಪ್ಪೆ ತೆಗೆದು ಇದುಕಿ ಬೇಳೆ ಮಾಡಿಕೊಳ್ಳಿ. ದಪ್ಪ ತಳದ ಪಾತ್ರೆಗೆ ಒಂದು ಚಮಚ ತುಪ್ಪ ಹಾಕಿ ಕಾಳುಗಳನ್ನು ಬಿಳಿಹೊಗೆ ಬರುವವರೆಗೆ ಹುರಿಯಿರಿ.
2 ಪಾವಿನಷ್ಟು ಕಾಳಿಗೆ 3 ಪಾವು ನೀರು ಹಾಕಿ ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ಮಸಾಲೆಗೆ 1 ಚಮಚ ಮೆಂತ್ಯ, ತುರಿದ ಕೊಬ್ಬರಿ, ಹುರಿಗಡಲೆ, ಅರಿಶಿನ, ಜೀರಿಗೆ, ಕೊತ್ತಂಬರಿಬೀಜ, ಗಸಗಸೆ, ಈರುಳ್ಳಿ ಮತ್ತು ಕೆಂಪು ಮೆಣಸಿನಕಾಯಿಯನ್ನು ಎಣ್ಣೆಯ ಬಾಣಲೆಯಲ್ಲಿ ಕೆಂಪಾಗಿ ಹುರಿಯಿರಿ. ನಂತರ ಉಳಿದ ಸಾಮಾನುಗಳನ್ನು ಹಾಕಿ ನುಣ್ಣಗೆ ರುಬ್ಬಿ.
ಬೆಂದ ಕಾಳಿಗೆ ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ಕಲಕಿ, ಅದಕ್ಕೆ ಸಣ್ಣಗೆ ಹೆಚ್ಚಿದ ಪಾಲಾಕ್ ಸೊಪ್ಪನ್ನು ಎಣ್ಣೆಯಲ್ಲಿ ಸ್ಪಲ್ಪ ತಾಳಿಸಿ ಮಾಡಿ ಹಾಕಿ. ನಿಮ್ಮ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಲೆಯ ಮೇಲಿಡಿ. ಚೆನ್ನಾಗಿ ಕುದ್ದನಂತರ ಕೆಳಗಿಳಿಸಿದರೆ ಸೊಗಸಾದ ... ಆಹಾ... ಘಮ..ಘಮ.
ತುಪ್ಪ ಬಡಿಸಿದ ಅನ್ನ, ಚಪಾತಿ, ರೊಟ್ಟಿ, ಬಿಸಿಬಿಸಿ ರಾಗಿ ಮುದ್ದೆ, ಮಸಾಲೆ ದೋಸೆ ಯಾವುದೇ ತಿನಿಸಿನ ಜೊತೆ ಬೆರೆಯಲು ಅವರೆಕಾಳು ಹುಳಿ ಹಿಂಜರಿಯುವುದಿಲ್ಲ. ಸರಿ ಇನ್ನೇಕೆ ತಡ, ಜಮಾಯಿಸಿ. ಆದರೆ, ಮಿತಿಯಿರಲಿ!



Click it and Unblock the Notifications
