Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಬಾಯಿ ನೀರೂರಿಸುವ ನೆಲ್ಲಿಕಾಯಿ ಸಾರು
ಬೆಳಿಗ್ಗೆ ಮಧ್ಯಾನ್ಹ ಮತ್ತು ಸಾಯಂಕಾಲ ಹಾಗೂ ರಾತ್ರಿ ! ಕರ್ನಾಟಕದ ಅನೇಕ ಭಾಗಗಳಲ್ಲಿ ಈಗ ನಾಲ್ಕೂ ಹೊತ್ತು ಮಳೆಯದ್ದೇ ದರ್ಬಾರು. ಇದರೊಂದಿಗೆ ಅದೂಇದೂ ಕಾಯಿಲೆ ಕಸಾಲೆಗಳು. ಆರೋಗ್ಯ ವರ್ಧನೆಗೆ ಮತ್ತು ಬಾಯಿ ರುಚಿಗೆ ಇಗೊಳ್ಳಿ ಇಲ್ಲಿದೆ ನೆಲ್ಲಿಕಾಯಿ ಸಾರು. ನೆಲ್ಲಿಕಾಯಿಯಲ್ಲಿನ ವೈಟಮಿನ್ ಸಿ ಅಂಶ ಥಂಡಿ ಥಂಡಿಯಿಂದ ಜಡ್ಡುಗಟ್ಟಿದ ನಾಲಿಗೆಯನ್ನು ಶುಚಿಯಾಗಿಸುತ್ತದೆ. ಅನ್ನದ ಜತೆ ಬಿಸಿ ಬಿಸಿಯಾಗಿ ಸಾರಿನ ಊಟ ಮಾಡಿ. ಪ್ರತೀಕೂಲ ಹವಾಮಾನಕ್ಕೆ ತಕ್ಕ ಉತ್ತರ ನೀಡಿ.
ಬೇಕಾಗುವ ಸಾಮಾನು
1) ನೆಲ್ಲಿಕಾಯಿ : 3 ಅಥವಾ 4
2) ತೆಂಗಿನ ತುರಿ : 2 ದೊಡ್ದ ಚಮಚ
3) ಹುರಿದ ಕೆಂಪು ಮೆಣಸು : 2 ಸಾಕು
4) ಹುಣಸೆ ಹುಳಿ : ಚಿಕ್ಕದು
5) ತುಪ್ಪದಲ್ಲಿ ಸ್ವಲ್ಪ ಹುರಿದ ಜೀರಿಗೆ ಇಂಗು
ಉಪ್ಪು ಬೆಲ್ಲ : ರುಚಿಗೆ ತಕ್ಕಷ್ಟು. ಸಾಸಿವೆ ಕರಿಬೇವು ಒಗ್ಗರಣೆಗೆ ಬೇಕೇಬೇಕು.
ಮಾಡುವ ವಿಧಾನ
ನಂ 1ರಿಂದ 5ರವರೆಗೆ ಪಟ್ಟಿಮಾಡಿದ ಸಾಮಾನುಗಳನ್ನು ನುಣ್ಣಗೆ ರುಬ್ಬಿ. ಒಗ್ಗರಣೆ ಹಾಕಿ, ನೀರು ಬೆರೆಸಿ ರುಬ್ಬಿದ ಸಾಮಾನನ್ನು ಸುರಿಯಿರಿ. ಅದಕ್ಕೆ ಉಪ್ಪು, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ. ಸಾರು ತಯಾರು. ಬಾಯಲ್ಲಿ ನೀರೂರಿಸುವ ಈ ಸಾರನ್ನು ಅನ್ನಕ್ಕೆ ಸೇರಿಸಿ ಸೇವಿಸಬಹುದು. ಹಾಗೇ ಕುಡಿಯಲೂ ಇದು ಚೆನ್ನಾಗಿರುತ್ತದೆ.



Click it and Unblock the Notifications
