Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಹುಣಿಸೆ ಎಲೆ ಚಿಗುರಿನ ದಾಲ್ಮಖಾನಿ

ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಹುಣಸೆಹಣ್ಣಿನ ಜೊತೆಗೆ ಕೈಗೆಟಕುವ ಅಳತೆಯಲ್ಲಿ ಜೋತಾಡುವ ಗಿಡದ ಎಳೆ ಚಿಗುರು ಕೂಡ ಅಡುಗೆಯೋಗ್ಯ. ಅದರಿಂದ ತಯಾರಿಸಿದ ಹುಳಿ ಬಲೇ ಪಸಂದಾಗಿರ್ತದೆ. ಹುಣಸೆ ಚಿಗುರೆಲೆಯನ್ನು ಬರೀ ಬಾಯಲ್ಲೇ ತಿನ್ನಬಹುದು. ಹುಳಿ ಮತ್ತು ರುಚಿಯ ಅದ್ಭುತ ಸಂಗಮದಂತಿರುತ್ತದೆ. ಅಡ್ಡಾಡಲು ಹೋದಾಗ ಹುಣಿಸೆ ಮರ ಕಂಡರೆ ಚಿಗುರೆಲೆಗಳನ್ನು ವ್ಯಾನಿಟಿಗೆ ಬ್ಯಾಗಿಗೆ ತುಂಬಿಕೊಳ್ಳುವುದನ್ನು ಮರೆಯಬೇಡಿ. ಬಹುಶಃ ಕಾಸಿಲ್ಲದೇ ಸಿಗುವ ಸೊಪ್ಪು ಇದೊಂದೇ ಇರಬಹುದು.
ಬೇಕಾಗುವ ಸಾಮಾನುಗಳು :
ಎಳೆಯ ಹುಣಸೆ ಚಿಗುರೆಲೆ, ಏಳೆಂಟು
ಒಂದು ಕಪ್ ಹೆಸರುಬೇಳೆ
ಮೆಣಸಿನಪುಡಿ ಒಂದು ಚಮಚ
ಚಿಟಿಕೆ ಇಂಗು
ಸಾಸಿವೆ ಚಮಚ - 1/2 ಟೀ ಚಮಚ
ಒಣ ಮೆಣಸಿನಕಾಯಿ ಕೆಂಪು ನಾಲಕ್ಕು
ಚೂರು ಬೆಣ್ಣೆ, ಕರಿಬೇವು, ಉಪ್ಪು
ಮಾಡುವ ವಿಧಾನ :
ಎಳೆ ಹುಣಸೆ ಎಲೆಗಳನ್ನು ಕಡ್ಡಿಯಿಂದ ಬೇರ್ಪಡಿಸಿಕೊಂಡು ಚೆನ್ನಾಗಿ ತೊಳೆಯಿರಿ. ಎರಡು ಲೋಟ ನೀರು ಮತ್ತು ಹೆಸರುಬೇಳೆ ಹಾಗೂ ಎಲೆಗಳನ್ನು ಹಾಕಿ ಕುದಿಸಿ. ಒಣಮೆಣಸಿನಕಾಯಿಯನ್ನು ಸಣ್ಣ ಸಣ್ಣ ಚೂರು ಮಾಡಿ ಸಾಸಿವೆ, ಉದ್ದಿನಬೇಳೆ, ಕರಿಬೇವಿನ ಸೊಪ್ಪು ಬೆರೆಸಿ ಹುರಿಯಿರಿ. ಕುದಿಯುತ್ತಿರುವ ಬೇಳೆಗೆ ಇದನ್ನೆಲ್ಲಾ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಉಪ್ಪು, ಮೆಣಸಿನಪುಡಿ ಮತ್ತು ಇಂಗನ್ನು ಹಾಕಿ ದಪ್ಪವಾಗುವವರೆಗೆ ಕುದಿಸಿ. ಪಾತ್ರೆ ಇಳಿಸಿದ ನಂತರ ಬೆಣ್ಣೆ ಹಾಕಿ. ಚಪಾತಿಗೆ, ರೊಟ್ಟಿಯ ಜತೆಗೆ ಸೊಗಸಾಗಿರುತ್ತದೆ. ಹೆಸರು ಬೇಳೆ ಅಲ್ಲದಿದ್ದರೆ ತೊಗರಿಬೇಳೆಯನ್ನು ಬಳಸಬಹುದು.
ಎಳೆ ಹುಣಸೆ ಎಲೆಗಳನ್ನು ತಟಕು ಉಪ್ಪು, ಖಾರ, ಜೀರಿಗೆ ಹಾಕಿ ರುಬ್ಬಿ ಇನ್ ಸ್ಟಂಟ್ ಚಟ್ನಿ ಮಾಡಿಕೊಂಡು ಕೂಡ ತಿನ್ನಬಹುದು. ಜಾಸ್ತಿ ತಿಂದ್ರೆ ಹಲ್ಲು ಚುಳ್ ಅಂದೀತು ಹುಷಾರ್.



Click it and Unblock the Notifications
