Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಪಾಕಶಾಲೆ: ಘಂ ಎನ್ನುವ ಮೈಸೂರು ಹುಳಿ
ಈ ಸಾರನ್ನು ನಮ್ಮ ಅಜ್ಜಿ ಕಲಿಸಿದ್ದು. ಮೈಸೂರು ಹುಳಿ ಮಾಡುವುದನ್ನು ಇಂದಿಗೂ ನಾನು ಮರೆತಿಲ್ಲ. ದಟ್ಸ್ ಕನ್ನಡ ಓದುಗರಿಗೆ ಇಷ್ಟ ಆಗಬಹುದು ಅಂತ ನಿಮಗೂ ತಿಳಿಸುತ್ತಿದ್ದೇನೆ.ಇಲ್ಲಿ ಬಳಸಿರುವ ತರಕಾರಿಗಳಿಗೆ ಬದಲಾಗಿ ನಿಮಗಿಷ್ಟವಾದ ತರಕಾರಿಗಳನ್ನು ಉಪಯೋಗಿಸಿಕೊಳ್ಳಬಹುದು.
*ರೇಶ್ಮಾ, ಮೈಸೂರು
ಬೇಕಾಗುವ ಸಾಮಗ್ರಿಗಳು:
ತೊಗರಿ ಬೇಳೆ: 1 ಕಪ್ಪು
ಈರುಳ್ಳಿ: 1
ಟೊಮ್ಯಾಟೊ: 2
ಹುರಳಿಕಾಯಿ: ¼ ಕೆ.ಜಿ
ಆಲೂಗಡ್ಡೆ:'
ಉಪ್ಪು: ರುಚಿಗೆ ತಕ್ಕಷ್ಟು
ಹುಣಸೆ ಹಣ್ಣಿನ ರಸ: 1 ಟೇಬಲ್ ಚಮಚ
ಮಸಾಲೆ ಪದಾರ್ಥಗಳು
ಕೊತ್ತಂಬರಿ ಬೀಜ: 2 ಟೇಬಲ್ ಚಮಚ
ತೊಗರಿ ಬೇಳೆ: 2 ಟೇಬಲ್ ಚಮಚ
ಜೀರಿಗೆ: 1 ಟೀ ಚಮಚ
ಹಸಿ ಅಕ್ಕಿ: 1ಟೀ ಚಮಚ
ಸಾಸಿವೆ: 1 ಟೀ ಚಮಚ
ಒಣ ಮೆಣಸಿನ ಕಾಯಿ: 2
ಮೆಂತ್ಯ: ' ಟೀ ಚಮಚ
ಒಣ ಕೊಬ್ಬರಿ: 2 ಟೇಬಲ್ ಚಮಚ
ಚಕ್ಕೆ: 1 ಇಂಚು
ಹರಿಶಿಣ ಪುಡಿ: ' ಟೀ ಚಮಚ
ಒಗ್ಗರಣೆಗೆ
ಎಣ್ಣೆ: 1 ಟೀ ಚಮಚ
ಸಾಸಿವೆ: 1 ಟೀ ಚಮಚ
ಮೆಂತ್ಯ: 1 ಟೀ ಚಮಚ
ಕರಿಬೇವು: ಒಗ್ಗರಣೆಗೆ
ಇಂಗು:¼ ಟೀ ಚಮಚ
ಮಾಡುವ ವಿಧಾನ
1. ಎಲ್ಲ ಮಸಾಲೆ ಪದಾರ್ಥಗಳನ್ನು ಹುರಿದುಕೊಂಡು ಮಿಕ್ಸಿಗೆ ಹಾಕಿ ನುಣ್ಣಗೆ ಅರೆದುಕೊಳ್ಳ ಬೇಕು ಆಗ ಸಾರಿನ ಪುಡಿ ಸಿದ್ಧವಾಗುತ್ತದೆ. ಹುಳಿಗೆ ಉಪಯೋಗಿಸಿಕೊಂಡು ನಂತರಉಳಿದದ್ದನ್ನು ಗಾಳಿಯಾಡದ ಡಬ್ಬಿಗೆ ಹಾಕಿಡಿ.
2. ಈರುಳ್ಳಿ, ಟೊಮ್ಯಾಟೊ ಹಾಗೂ ಇತರೆ ತರಕಾರಿಗಳನ್ನು ಸಣ್ಣ ಹೋಳುಗಳಾಗಿ ಹೆಚ್ಚಿಕೊಂಡು ಬೇಯಿಸಿಕೊಳ್ಳಿ
3. ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಒಗ್ಗರಣೆ ಸಾಮಗ್ರಿಗಳನ್ನು ಎಣ್ಣೆಗೆ ಹಾಕಿ. ಸಾಸಿವೆ ಚಿಟಗುಟ್ಟುವ ಸಮಯಕ್ಕೆ 2 ಟೇಬಲ್ ಚಮಚ ಸಾಂಬಾರು ಪುಡಿ, ಹುಣಸೆಹಣ್ಣಿನ ರಸ, ಉಪ್ಪನು ಸೇರಿಸಿ.
4. ಬೇಯಿಸಿಕೊಂಡ ಬೇಳೆ ತರಕಾರಿಗಳನ್ನು ಹಾಕಿ.
5. ಈಗ ಬಿಸಿಬಿಸಿ ಅನ್ನ, ಹಪ್ಪಳ, ವ್ಯಂಜನಗಳೊಂದಿಗೆ ಬಡಿಸಿರಿ.



Click it and Unblock the Notifications
