Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಳೆಗಾಲಕ್ಕೆ ಟೇಸ್ಟಿ ಟೊಮೊಟೊ ಸೂಪ್

ಟೊಮೊಟೊ ಸೂಪ್ ಗೆ ಬೇಕಾಗುವ ಪದಾರ್ಥ:
* 5-6 ಟೊಮೊಟೊ
* 2 ಚಮಚ ಕಡಲೆಹಿಟ್ಟು
* 1/2 ಹೋಳು ತುರಿದ ತೆಂಗಿನಕಾಯಿ
* 1 ಚಮಚ ಶುಂಠಿ ಪೇಸ್ಟ್, 1 ಚಮಚ ಬೆಳ್ಳುಳ್ಳಿ
* 1 ಚಮಚ ಜೀರಿಗೆ, 1 ಚಮಚ ಧನಿಯಾ
* 2 ಒಣಗಿದ ಕೆಂಪು ಮೆಣಸಿನ ಕಾಯಿ
* 1 ಚಮಚ ಸಕ್ಕರೆ, 1 ಚಮಚ ತುಪ್ಪ
* ರುಚಿಗೆ ಉಪ್ಪು, ಕೊತ್ತಂಬರಿ ಸೊಪ್ಪು
ಟೊಮೊಟೊ ಸೂಪ್ ಮಾಡುವ ವಿಧಾನ: ಬಾಣಲೆಯಲ್ಲಿ ಧನಿಯಾ, ಜೀರಿಗೆ, ಒಣಗಿದ ಕೆಂಪು ಮೆಣಸಿನಕಾಯಿಯನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಂಡು ಪುಡಿಮಾಡಿಕೊಳ್ಳಬೇಕು. ನಂತರ ಟೊಮೊಟೊ, ಬೆಳ್ಳುಳ್ಳಿ, ಶುಂಠಿ ಸೇರಿಸಿ ನುಣ್ಣಗೆ ರುಬ್ಬಿಕೊಂಡು ಬಿಸಿ ಮಾಡಲು ಇಡಬೇಕು. ಇದಕ್ಕೆ ತೆಂಗಿನ ತುರಿ, ಕಡಲೆಹಿಟ್ಟಿಗೆ ಬೆರೆಸಿದ ನೀರು, ಪುಡಿಮಾಡಿದ ಮಸಾಲೆ, ಸಕ್ಕರೆ ಮತ್ತು ಉಪ್ಪನ್ನು ಬೆರೆಸಿ ಚೆನ್ನಾಗಿ ಬಿಸಿ ಮಾಡಬೇಕು. ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಬೇಕು.
ಈಗ ಮಳೆಗಾಲದ ವಿಶೇಷ ಟೊಮೊಟೊ ಸೂಪ್ ರೆಡಿಯಾಗಿದೆ. ಬಿಸಿ ಬಿಸಿಯಾಗಿ ಸೂಪ್ ಕುಡಿಯಬಹುದು ಅಥವಾ ಬ್ರೆಡ್ ನೊಂದಿಗೂ ಸೇರಿಸಿ ತಿನ್ನಬಹುದು. ಹೇಗೆ ತಿಂದರೂ ರುಚಿಗೆ ಮಾತ್ರ ಲೋಪವಿಲ್ಲ.



Click it and Unblock the Notifications
