Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ದಟ್ಸ್ ಪಾಕಶಾಲೆ : ಆಲೂಗಡ್ಡೆ ಕೂಟು
100 ಗ್ರಾಂ ಆಲೂಗಡ್ಡೆ 80 ಕಿ.ಲೋ ಕ್ಯಾಲೊರಿಗಳಷ್ಟು ಶಕ್ತಿ ಕೊಡುತ್ತದೆ. ಅನ್ನಾಂಗ 'ಬಿ'ಯಿಂದ ಸಮೃದ್ಧವಾಗಿದ್ದು ಕಬ್ಬಿಣ, ಮೆಗ್ನಿಷಿಯಂ, ರಂಜಕ. ಪೊಟ್ಯಾಷಿಯಂ, ಸೋಡಿಯಂ ನಂತಹ ಖನಿಜಗಳು ಹೇರಳವಾಗಿವೆ. ದೈಹಿಕ ಕೆಲಸ ಅಧಿಕವಾಗಿ ಮಾಡುವವರಿಗೆ ಆಲೂಗಡ್ಡೆ ಮತ್ತಷ್ಟು ಶಕ್ತಿಯನ್ನು ಒದಗಿಸುತ್ತದೆ. ಆರೋಗ್ಯವಂತರು ಆಲೂಗಡ್ಡೆಯನ್ನು ತಿಂದರೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದನ್ನ್ನು ಮರೆಯಬೇಡಿ.
*ಶ್ರೀರಕ್ಷಾ, ಬೆಂಗಳೂರು
ಬೇಕಾಗುವ ಪದರ್ಥಗಳು
ಆಲೂಗಡ್ಡೆ: ¼ ಕೆ.ಜಿ
ಸಾಸಿವೆ: 1 ಚಮಚ
ಮೆಂತ್ಯ: ½ ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಕೆಂಪು ಮೆಣಸಿನಕಾಯಿ: 6
ಇಂಗು: 1 ಚಿಟಿಕೆ
ಹುಣಸೆಹಣ್ಣಿನ ರಸ: ½ ಕಪ್ಪು
ಹರಿಶಿಣ ಪುಡಿ: 2 ಚಿಟಿಕೆ
ಕರಿಬೇವು: ಒಗ್ಗರಣೆಗೆ
ಎಣ್ಣೆ: 6 ಚಮಚ
ಮಾಡುವ ವಿಧಾನ
ಮೊದಲು ಆಲೂಗಡ್ಡೆಯನ್ನು ನೀರಿನಲ್ಲಿ ಶುಚಿಯಾಗಿ ತೊಳೆದುಕೊಳ್ಳಿ. ನಂತರ ಸಿಪ್ಪೆ ಸುಲಿದು, ಸಣ್ಣಗೆ ಹೆಚ್ಚಿಕೊಳ್ಳಿ. ಉಪ್ಪು ಬೆರೆಸಿ ಒಂದು ಪಾತ್ರೆಯಲ್ಲಿ ಹಾಕಿ ಸ್ವಲ್ಪ ಸಮಯ ಬಿಟ್ಟ ನಂತರ, ಬಾಣಲೆಯಲ್ಲಿ ಹುರಿಯಿರಿ. ಆಲೂಗಡ್ಡೆ ಹೋಳುಗಳು ಹೊಂಬಣ್ಣಕ್ಕೆ ಬರುವವರೆಗೂ ಮಧ್ಯಮ ಪ್ರಮಾಣದ ಉರಿಯಲ್ಲಿ ಹುರಿಯಬೇಕು.
ಈಗ ಸಣ್ಣಗೆ ಹೆಚ್ಚಿಕೊಂಡ ಕೆಂಪು ಮೆಣಸಿನಕಾಯಿಯ ಜೊತೆಗೆ ಮೆಂತ್ಯ, ಸಾಸಿವೆ, ಕರಿಬೇವು, ಹರಿಶಿಣ ಪುಡಿ ಮತ್ತು ಇಂಗುಗಳನ್ನು ಸೇರಿಸಿ ಎರಡು ಚಮಚ ಎಣ್ಣೆಯಲ್ಲಿ ಹುರಿದುಕೊಂಡು ನಯವಾಗಿ ಅರೆದುಕೊಳ್ಳಬೇಕು. ಹುರಿದುಕೊಂಡ ಆಲೂಗಡ್ಡೆಗೆ ಹುಣಸೆ ರಸ, ಉಪ್ಪು ಸೇರಿಸಿ ಕಣಕವನ್ನು ತಯಾರಿಸಿಕೊಳ್ಳಬೇಕು. ಕೊನೆಯದಾಗಿ ಅರೆದ ಮಸಾಲೆಯನ್ನು ಆಲೂಗಡ್ಡೆ ತುಂಡುಗಳೊಂದಿಗೆ ಬೆರೆಸಿ ಅಗಲವಾದ ಪಾತ್ರೆಯಲ್ಲಿ 4 ಚಮಚ ಎಣ್ಣೆಯಲ್ಲಿ ಬಿಸಿ ಮಾಡಿ ಚೆನ್ನಾಗಿ ಕಲಕ ಬೇಕು. ಬಿಸಿಯಾಗಿದ್ದಾಗ ಬಡಿಸಿದರೆ ರುಚಿ ಮತ್ತಷ್ಟು ಸೊಗಸಾಗಿರುತ್ತದೆ.
ಸೂಚನೆ: ಬೇಕಿದ್ದರೆ ತುರಿದ ತೆಂಗಿನಕಾಯಿ, ¼ ಕೆ.ಜಿ ಹುರುಳಿಕಾಯಿ, ಕ್ಯಾರೆಟ್, ಒಂದು ಕಪ್ ತೊಗರಿ ಬೇಳೆಯನ್ನು ಉಪಯೋಗಿಸಬಹುದು.



Click it and Unblock the Notifications
