Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈರುಳ್ಳಿ, ಹುಣಸೆಹಣ್ಣಿನ ಬೊಂಬಾಟ್ ಗೊಜ್ಜು

ಬೇಕಾಗುವ ಸಾಮಾನುಗಳು
ಈರುಳ್ಳಿ 2ರಿಂದ 3
ಹುಣಸೆಹಣ್ಣು ಒಂದು ಹಿಡಿ
ಬೆಲ್ಲ ಒಂದು ಬಟ್ಟಲು
ಮೆಣಸಿನ ಪುಡಿ - 1 ಚಮಚ
ಎಣ್ಣೆ
ಕರಿಬೇವು ಸೊಪ್ಪು
ಒಣ ಮೆಣಸಿನ ಕಾಯಿ
ಸಾಸಿವೆ
ಜೀರಿಗೆ
ಇಂಗು
ರುಚಿಗೆ ತಕ್ಕಷ್ಟು ಉಪ್ಪು
ಮಡುವ ವಿಧಾನ
* ಗೊಜ್ಜು ತಯಾರಿಕೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಜೋಡಿಸಿಟ್ಟುಕೊಳ್ಳುವ ಅರ್ಧ ಗಂಟೆ ಮೊದಲು ಹುಣಸೆಹಣ್ಣನ್ನು ಒಂದು ದೊಡ್ಡ ಬಟ್ಟಲಲ್ಲಿ ನೀರಲ್ಲಿ ನೆನೆಯಿಡಿ. ನಂತರ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಟ್ಟುಕೊಂಡು ಒಂದು ಪಕ್ಕಕ್ಕೆ ತೆಗೆದಿಟ್ಟುಕೊಳ್ಳಿ.
* ಹುಣಸೆಹಣ್ಣು ನೆಂದು ಅರ್ಧಗಂಟೆಯಾದ ನಂತರ ಸಣ್ಣದಾಗಿ ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನು ಒಂದು ಬೋಗುಣಿಯಲ್ಲಿ ಸ್ವಲ್ಪವೇ ಎಣ್ಣೆಹಾಕಿ ಕಂದು ಬಣ್ಣ ಬರುವವರೆಗೆ ತಾಳಿಸಿ ಸ್ಟೌನಿಂದ ಕೆಳಗಿಳಿಸಿಡಿ.
* ಒಂದು ತಳ ಹತ್ತದಿರುವ ಬಾಣಲೆಯಲ್ಲಿ ಹುಣಸೆಹಣ್ಣಿನ ರಸವನ್ನು ಹಿಂಡಿರಿ. ಇದಕ್ಕೆ ಪುಡಿ ಮಾಡಿಟ್ಟುಕೊಂಡ ಬೆಲ್ಲವನ್ನು ಹಾಕಿ ಕುದಿಯಲು ಬಿಡಿ. ಉರಿ ಕಡಿಮೆಯಿರಲಿ. ತಳ ಹತ್ತದಂತೆ ಆಗಾಗ ಕೈಯಾಡಿಸುತ್ತಿರಿ.
* ಚೆನ್ನಾಗಿ ಕುದ್ದ ನಂತರ ತಾಳಿಸಿಟ್ಟ ಈರುಳ್ಳಿ, ಖಾರದ ಪುಡಿ (ಮೆಣಸಿನ ಪುಡಿ), ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಮುಚ್ಚಿಟ್ಟು ಮತ್ತೆ ಎರಡು ನಿಮಿಷ ಕುದಿಯಲು ಬಿಟ್ಟು ಕೆಳಗಿಳಿಸಿಬಿಡಿ.
* ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಇಂಗು, ಜೀರಿಗೆ, ಒಣ ಮೆಣಸಿನಕಾಯಿ, ಕರಿಬೇವು ಸೊಪ್ಪು ಹಾಕಿ ಬಾಡಿಸಿ. ಈ ಒಗ್ಗರಣೆಯನ್ನು ಕುದಿಸಿಟ್ಟ ಹುಣಸೆ ಗೊಜ್ಜಿಗೆ ಸೇರಿಸಿ. ಈರುಳ್ಳಿ, ಹುಣಸೆ ಹಣ್ಣಿನ ಗೊಜ್ಜು ರೆಡಿ. ಇದು ಬಿಸಿ ಅನ್ನದ ಜೊತೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ.
* ದಿನಾ ಬೇಳೆ ಹಾಕಿ ಸಾರು, ಹುಳಿ ಮಾಡುವ ಬದಲು, ಆಗಾಗ ಇದನ್ನು ಮಾಡಿ ಕೊಳ್ಳಬಹುದು. ಮಾಡಿ, ತಿಂದು ನಿಮ್ಮ ಅನಿಸಿಕೆ ತಿಳಿಸಿ.



Click it and Unblock the Notifications
