Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗೋಡಂಬಿ ಅಣಬೆ ಸಾರು ಮತ್ತು ಬಿಸಿ ಆಮ್ಲೆಟ್!

ಗೋಡಂಬಿ - ಅಣಬೆ ಸಾರು
ಬೇಕಾಗುವ ಸಾಮಗ್ರಿ:
100 ಗ್ರಾಂ ಅಣಬೆ, ಗೋಡಂಬಿ 75 ಗ್ರಾಂ. 2 ಈರುಳ್ಳಿ, 3 ಒಣಮೆಣಸಿನ ಕಾಯಿ, 2 ಹಸಿ ಮೆಣಸಿನ ಕಾಯಿ, ಒಂದು ಚಿಟಿಕೆ ಅರಿಸಿನ, 1 ಟೀ ಚಮಚ ಕೊತ್ತಂಬರಿ ಬೀಜ, ಅರ್ಧ ಟೀ ಚಮಚ ಜೀರಿಗೆ, 4 ಎಸಳು ಬೆಳ್ಳುಳ್ಳಿ, 1 ಇಂಚು ಹಸಿ ಶುಂಠಿ, ಅರ್ಧ ಬಟ್ಟಲು ಹಸಿ ತೆಂಗಿನ ಕಾಯಿ ತುರಿ, 3 ಎಸಳು ಕರಿಬೇವಿನ ಎಲೆ, ಎಣ್ಣೆ, ರುಚಿಗೆ ಬೇಕಾಗುವಷ್ಟು ಉಪ್ಪು .
ವಿಧಾನ :
ತೆಂಗಿನ ತುರಿಯಿಂದ ಹಾಲನ್ನು ಬೇರ್ಪಡಿಸಬೇಕು. ಸ್ವಲ್ಪ ತೆಂಗಿನ ಹಾಲನ್ನು ತೆಗೆದುಕೊಂಡು ಅದಕ್ಕೆ ಸ್ವಚ್ಛ ಮಾಡಿ ಹೆಚ್ಚಿದ ಅಣಬೆ ಮತ್ತು ಬಿಸಿ ನೀರಿನಲ್ಲಿ ನೆನೆಸಿದ ಗೋಡಂಬಿಯನ್ನು ಹಾಕಿ ಬೇಯಿಸಬೇಕು.
ನಂತರ ಒಣ ಮೆಣಸಿನ ಕಾಯಿ, ಕೊತ್ತಂಬರಿ ಬೀಜ, ಜೀರಿಗೆ ಅರಿಶಿನ, ಸ್ವಲ್ಪ ತೆಂಗಿನ ತುರಿ ಇವೆಲ್ಲವುಗಳನ್ನು ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ. ಎಣ್ಣೆ ಕಾಯಿಸಿ, ಅದರಲ್ಲಿ ಹೆಚ್ಚಿದ ಹಸಿ ಮೆಣಸಿನ ಕಾಯಿ, ಈರುಳ್ಳಿ, ಕರಿಬೇವು, ಅರೆದಿಟ್ಟ ಮಸಾಲೆ ಸೇರಿಸಿ. ಈರುಳ್ಳಿ ಮೃದುವಾಗುವ ತನಕ ಬೇಯಬೇಕು. ಈಗ ಅದರಲ್ಲಿ ಬೇಯಿಸಿಟ್ಟ ಗೋಡಂಬಿ, ಅಣಬೆ, ಹಾಗೂ ನಿಂಬೆ ರಸ, ಉಪ್ಪನ್ನು ಸೇರಿಸಿ.
ಇದನ್ನು ಕುದಿ ಬರುವ ತನಕ ಕುದಿಸಿ ಉಳಿದ ತೆಂಗಿನ ಕಾಯಿ ಹಾಲನ್ನು ಸೇರಿಸಿ ಮತ್ತೆ 5 ನಿಮಿಷಗಳ ಕಾಲ ಬೇಯಿಸಿ ಕೆಳಗಿಳಿಸಿ. ಗೋಡಂಬಿ-ಅಣಬೆ ಸಾರು ರೆಡಿ.
*
ಅಣಬೆ ಆಮ್ಲೆಟ್
ಬೇಕಾಗುವ ಸಾಮಗ್ರಿ:
3-4 ಅಣಬೆ. (ಸಣ್ಣಗೆ ಹೆಚ್ಚಿದ್ದು), 1 ಮೊಟ್ಟೆ, 1 ಟೀ ಸ್ಪೂನ್ ಹಾಲು, 1 ಸಣ್ಣ ಈರುಳ್ಳಿ ಸಣ್ಣಗೆ ಹೆಚ್ಚಿದ್ದು. ಸಣ್ಣಗೆ ಹೆಚ್ಚಿದ 2 ಹಸಿ ಮೆಣಸಿನ ಕಾಯಿ, 1 ಚಿಟಿಕೆ ಕರಿಮೆಣಸಿನ ಪುಡಿ, 1 ಟಿ ಚಮಚ ನಿಂಬೆ ರಸ. ಸ್ವಲ್ಪ ಎಣ್ಣೆ, ರುಚಿಗೆ ಬೇಕಾಗುವಷ್ಟು ಉಪ್ಪು.
ವಿಧಾನ :
ಮೊಟ್ಟೆಯನ್ನು ಹಾಲಿನೊಂದಿಗೆ ಒಡೆಯಬೇಕು. ಅಣಬೆಯನ್ನು ಈರುಳ್ಳಿ ಹಾಗೂ ಹಸಿ ಮೆಣಸಿನ ಕಾಯಿಯಾಂದಿಗೆ ಹುರಿಯಬೇಕು. ಅದಕ್ಕೆ ಮೊಟ್ಟೆಯ ಮಿಶ್ರಣ, ಮೆಣಸಿನ ಪುಡಿ, ನಿಂಬೆ ರಸ, ಉಪ್ಪು ಸೇರಿಸಿ. ನಂತರ ತವೆಯಲ್ಲಿ ಎಣ್ಣೆ ಹಚ್ಚಿ ಮಿಶ್ರಣ ಹಾಕಿ ಆಮ್ಲೆಟ್ ತಯಾರಿಸಿ.



Click it and Unblock the Notifications
