Just In
Don't Miss
- Movies
ಸುದೀಪ್ 'ಫ್ಯಾಂಟಮ್' ಸಿನಿಮಾದ ಟೈಟಲ್ ಬದಲಾವಣೆ: ನಿರ್ದೇಶಕರು ಹೇಳಿದ್ದೇನು?
- Sports
ಭಾರತ vs ಆಸ್ಟ್ರೇಲಿಯಾ: ಅಂತಿಮ ಟೆಸ್ಟ್ ಪಂದ್ಯ ಗೆಲ್ಲಲು ಕಾರಣವಾದ ಐದು ಅಂಶಗಳು
- News
ಹಸನಾಗದ ಅರಳಿಕಟ್ಟೆಹುಂಡಿ ಗ್ರಾಮದ ಜನರ ಬದುಕು!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್ಯುವಿ300
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕುಂಬಳಕಾಯಿ ತಿರುಳಿನಲ್ಲಿ ತಯಾರಿಸಿ ರುಚಿಕರ ಸೂಪ್
ಅಂಗಡಿಯಿಂದ ತರುವ ಕೆಲವು ತರಕಾರಿಗಳು ಹೇಗಾಗುತ್ತದೆ ಎಂದರೆ ಒಂದು ಕೆಜಿ ತಂದರೆ ಅದ್ರಲ್ಲಿ ಹಾಳುಮೂಳು ಎಲ್ಲಾ ಹೋಗಿ, ಸಿಪ್ಪೆ ತೆಗೆದು ಚೊಕ್ಕ ಮಾಡಿದಾಗ ಅಡುಗೆಗೆ ಬಳಸಲು ಯೋಗ್ಯವಾಗುವುದು ಅರ್ಧ ಕೆಜಿ ಆಗಿರುತ್ತದೆ. ಅವುಗಳನ್ನು ಮುಲಾಜಿಲ್ಲದೆ ಕಸಕ್ಕೆ ಎಸೆಯಲೇ ಬೇಕಾದ ಅನಿವಾರ್ಯತೆ ಪೇಟೆಯವರಿಗೆ ಇರುತ್ತದೆ.
ಆದರೆ ಸೌತೆ, ಕುಂಬಳ, ಚೀನಿಗುಂಬಳ ಅಂದರೆ ಪಂಪ್ಕಿನ್ ಗಳಲ್ಲಿ ಯಾವುದೂ ವೇಸ್ಟ್ ಅಲ್ಲ. ಸಿಪ್ಪೆ, ತಿರುಳು, ಬೀಜ ಸೇರಿದಂತೆ ಎಲ್ಲದರಿಂದಲೂ ಅಡುಗೆ ಮಾಡಬಹುದು. ಆದರೆ ಇವುಗಳ ಸದುಪಯೋಗ ಮಾಡಿಕೊಳ್ಳುವ ಬಗೆ ಹೆಚ್ಚಿನವರಿಗೆ ತಿಳಿದಿಲ್ಲ.
ನಾವಿಲ್ಲಿ ಪಂಪ್ಕಿನ್ ತಿರುಳಿನಿಂದ ರುಚಿರುಚಿಯಾಗಿ ತಂಬಳಿ ಮಾಡುವುದು ಹೇಗೆ ಅನ್ನೋದನ್ನು ತಿಳಿಸಿಕೊಡುತ್ತಿದ್ದೇವೆ. ಪ್ರತಿ ದಿನ ಸಾರು, ಸಾಂಬಾರು ತಿಂದು ಬೇಸರವಾದವರು ಖಂಡಿತ ಈ ಅಡುಗೆ ಮಾಡಿಕೊಂಡು ಸವಿಯಬಹುದು. ಸೂಪ್ ನಂತೆ ಕುಡಿಯಲೂ ಬಹುದು. ಡಯಟ್ ಗೆ ಹೇಳಿ ಮಾಡಿಸಿದ ರೆಸಿಪಿ ಇದು. ಹಾಗಾದ್ರೆ ಮಾಡುವುದು ಹೇಗೆ ತಿಳಿಯೋಣ ಬನ್ನಿ.
Recipe By: Sushma
Recipe Type: Soup
Serves: 4
-
ಬೇಕಾಗುವ ಸಾಮಗ್ರಿಗಳು
ಪಂಪ್ಕಿನ್ ತಿರುಳು - ಒಂದು ಬೌಲ್
ಹಸಿ ಮೆಣಸು - ಮೂರರಿಂದ ನಾಲ್ಕು
ತೆಂಗಿನ ತುರಿ- ಅರ್ಧ ಬೌಲ್
ಉಪ್ಪು - ರುಚಿಗೆ ತಕ್ಕಷ್ಟು
ಕಡೆದ ಮಜ್ಜಿಗೆ - ಕಾಲು ಲೀಟರ್
ಕೊಬ್ಬರಿ ಎಣ್ಣೆ - ಮೂರು ಟೀ ಸ್ಪೂನ್
ಸಾಸಿವೆ - ಅರ್ಧ ಚಮಚ
ಕೆಂಪು ಮೆಣಸು - ಎರಡು
-
ಮಾಡುವ ವಿಧಾನ
ಪಂಪ್ಕಿನ್ ತಿರುಳನ್ನು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ.
ಬೇಯಿಸಿದ ತಿರುಳು ತಣಿದ ನಂತರ ಅದಕ್ಕೆ ತೆಂಗಿನತುರಿ, ಹಸಿಮೆಣಸು ಮತ್ತು ಉಪ್ಪು ಸೇರಿಸಿ ರುಬ್ಬಿಕೊಳ್ಳಿ.
ರುಬ್ಬಿದ ಮಿಶ್ರಣವನ್ನು ಸೋಸಿಕೊಳ್ಳಿ. ನಂತರ ಅದಕ್ಕೆ ಕಡೆದ ಮಜ್ಜಿಗೆ ಸೇರಿಸಿ.
ಅಡುಗೆ ಎಣ್ಣೆಗೆ ಸಾಸಿವೆಕಾಳು ಹಾಕಿ ಚಟಿಪಟಿ ಅಂದಾಗ ಕೆಂಪು ಮೆಣಸು ಹಾಕಿ ಒಗ್ಗರಣೆ ಮಾಡಿದರೆ ರುಚಿರುಚಿಯಾದ ಪಂಪ್ಕಿನ್ ತಿರುಳಿನ ತಂಬಳಿ ಸಿದ್ಧವಾಗುತ್ತದೆ.
ಅರಿಶಿಣದ ಬಣ್ಣದಲ್ಲಿ ಕಾಣುವ ಇದು ಸೂಪ್ ನಂತೆ ಕುಡಿಯುವುದಕ್ಕೂ, ಅನ್ನದ ಜೊತೆಗೆ ಕಲಸಿ ತಿನ್ನುವುದಕ್ಕೂ ರುಚಿಯಾಗಿರುತ್ತದೆ.
- ಇದು ಆಂಟಿ ಆಕ್ಸಿಡೆಂಟ್ ಆಗಿದೆ. ವಿಟಮಿನ್ ಗಳು ಹೇರಳವಾಗಿರುವ ಇದನ್ನು ಚೀನಿಕಾಯಿ ಎಂದು ಕೂಡ ಕರೆಯಲಾಗುತ್ತದೆ. ಇಮ್ಯುನಿಟಿ ಅಥವಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಇದಕ್ಕಿದೆ. ನಿಮ್ಮ ಕಣ್ಣುಗಳ ರಕ್ಷಣೆ ಮಾಡುವ ಶಕ್ತಿ ಇದಕ್ಕಿದೆ. ಕಡಿಮೆ ಕ್ಯಾಲೋರಿ ಇರುವ ಆಹಾರವಾಗಿರುವುದರಿಂದಾಗಿ ತೂಕ ಇಳಿಸಲು ಇಚ್ಛಿಸುವವರು ಇದನ್ನು ಬಳಕೆ ಮಾಡಬಹುದು.
- ಪೊಟಾಷಿಯಂ - 360ಮಿಲಿಗ್ರಾಂ
- ಕ್ಯಾಲೊರಿ - 26
- ಕೊಬ್ಬಿನಾಂಶ - 0
- ಪ್ರೊಟೀನ್ - 1ಗ್ರಾಂ
- ಸೋಡಿಯಂ - 1ಗ್ರಾಂ