For Quick Alerts
ALLOW NOTIFICATIONS  
For Daily Alerts

ರೆಸಿಪಿ: ಬಾಯಲ್ಲಿ ನೀರೂರಿಸುವ ರುಚಿಯ ಸೀಗಡಿ ರೋಸ್ಟ್

Posted By:
|

ಮೀನು ಪ್ರಿಯರಿಗೆ ಸೀಗಡಿ ಫುಡ್‌ ಎಂದರೆ ಸಾಕು ಖುಷಿಯಾಗಿ ಬಿಡುತ್ತಾರೆ. ಅದರ ರುಚಿಯೇ ಅಂಥದ್ದು, ಇದನ್ನು ಗ್ರೇವಿ ರೀತಿ ಮಾಡಿದರೂ ಚೆನ್ನಾಗಿರುತ್ತೆ, ರೋಸ್ಟ್ ಮಾಡಿದರೆ ಮತ್ತಷ್ಟು ರುಚಿ.

ಮನೆಯಲ್ಲಿ ತುಂಬಾ ಜನ ಇದ್ದರೆ ರೋಸ್ಟ್ ಮಾಡಿದರೆ ಸಾಕಾಗುವುದಿಲ್ಲ, ಅದೇ 2-4 ಜನ ಇದ್ದರೆ ಒಂದು ಕೆಜಿ ಸೀಗಡಿ ತಂದು ರೋಸ್ಟ್ ಮಾಡಿ ಸವಿಯಬಹುದು.

prawn roast recipe

ನಾವಿಲ್ಲಿ ರುಚಿಕರವಾದ ಸೀಗಡಿ ರೋಸ್ಟ್‌ನ ರೆಸಿಪಿ ನೀಡಿದ್ದೇವೆ ನೋಡಿ:

Prawn Roast Recipe, ಸೀಗಡಿ ರೋಸ್ಟ್ ರೆಸಿಪಿ
Prawn Roast Recipe, ಸೀಗಡಿ ರೋಸ್ಟ್ ರೆಸಿಪಿ
Prep Time
10 Mins
Cook Time
20M
Total Time
30 Mins

Recipe By: Reena TK

Recipe Type: Non Veg

Serves: 4

Ingredients
  • ಬೇಕಾಗುವ ಸಾಮಗ್ರಿ

    2 ಕಪ್ ಪ್ರಾನ್ಸ್(ಸೀಗಡಿ)

    2 ಚಮಚ ಖಾರದ ಪುಡಿ

    1 ಚಮಚ ಕೊತ್ತಂಬರಿ ಪುಡಿ

    1 ಚಮಚ ಕಾಳು ಮೆಣಸಿನ ಪುಡಿ

    1ಚಮಚ ಗರಂ ಮಸಾಲ

    1/4 ಚಮಚ ಅರಿಶಿಣ ಪುಡಿ

    ಚಿಟಿಕೆಯಷ್ಟು ಮೆಂತೆ ಪುಡಿ

    ಸ್ವಲ್ಪ ಕರಿಬೇವು

    11/2 ಕಪ್ ಈರುಳ್ಳಿ (ತೆಳುವಾಗಿ , ಉದ್ದುದ್ದವಾಗಿ ಕತ್ತರಿಸಿದ್ದು)

    1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್

    1/2 ಕಪ್ ತೆಳುವಾಗಿ ಕತ್ತರಿಸಿದ ತೆಂಗಿನಕಾಯಿ

    ರುಚಿಗೆ ತಕ್ಕ ಉಪ್ಪು

    ತೆಂಗಿನೆಣ್ಣೆ (ನೀವು ಇಷ್ಟವಾದ ಅಡುಗೆ ಎಣ್ಣೆ ಬಳಸಬಹುದು)

Red Rice Kanda Poha
How to Prepare
  • ಮಾಡುವ ವಿಧಾನ:

    * ಸೀಗಡಿಯನ್ನು ಸ್ವಚ್ಛ ಮಾಡಿ ಅದಕ್ಕೆ ಖಾರದ ಪುಡಿ, ಕೊತ್ತಂಬರಿ ಪುಡಿ, ಕಾಳು ಮೆಣಸಿನ ಪುಡಿ, ಅರಿಶಿಣ ಪುಡಿ, ಗರಂ ಮಸಾಲೆ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ ಒಂದು ಅರ್ಧ ಗಂಟೆ ಇಡಿ. ಆಗ ಮಸಾಲೆ ಚೆನ್ನಾಗಿ ಹಿಡಿಯುತ್ತದೆ.

    * ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಸಾಧಾರಣ ಉರಿಯಲ್ಲಿ ಬಿಸಿ ಮಾಡಿ. ಅದರಲ್ಲಿ ತೆಳುವಾಗ ಕತ್ತರಿಸಿದ ತೆಂಗಿನಕಾಯಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ಈಗ ಅವುಗಳನ್ನು ಒಂದು ಬದಿಯಲ್ಲಿ ತೆಗೆದಿಡಿ.

    * ಈಗ ಅದೇ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಮಿಕ್ಸ್ ಮಾಡಿಟ್ಟ ಸೀಗಡಿ ಹಾಕಿ ಎರಡೂ ಬದಿಯನ್ನು ರೋಸ್ಟ್ ಮಾಡಿ. ಈಗ ಪ್ಯಾನ್‌ನಿಂದ ತೆಗೆದು ಒಂದು ಬೌಲ್‌ನಲ್ಲಿ ಹಾಕಿಡಿ.

    * ಈಗ ಅದೇ ಪ್ಯಾನ್‌ಗೆ 1 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಕರಿಬೇವು, ಹಸಿ ಮೆಣಸಿನ ಕಾಯಿ, ರುಚಿಗೆ ತಕ್ಕ ಉಪ್ಪು ಈರುಳ್ಳಿ 3-4 ನಿಮಿಷ ಫ್ರೈ ಮಾಡಿ.

    * ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿ.

    * ಈಗ ಇದಕ್ಕೆ ರೋಸ್ಟ್ ಮಾಡಿದ ಪ್ರಾನ್ಸ್ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ 2 ನಿಮಿಷ ಬೇಯಿಸಿ, ನಂತರ ಉಪ್ಪು ಸರಿಯಾಗಿದೆಯೇ ನೋಡಿ, ಉರಿಯಿಂದ ಇಳಿಸಿ ಪಾತ್ರೆಯ ಬಾಯಿ ಮುಚ್ಚಿ ಇಡಿ.

    * ಸರ್ವ್‌ ಮಾಡುವ ಮುನ್ನ ಒಮ್ಮೆ ಮಿಕ್ಸ್ ಮಾಡಿ ಸರ್ವ್ ಮಾಡಿ.

    * ಅನ್ನ, ಚಪಾತಿ ಇವುಗಳ ಜೊತೆ ಸವಿಯಲು ತುಂಬಾ ರುಚಿಯಾಗಿರುತ್ತೆ.

Instructions
  • ನೀವು ಪ್ರಾನ್ಸ್ ರೋಸ್ಟ್ ಮಾಡುವಾಗ ತೆಂಗಿನೆಣ್ಣೆ ಬಳಸಿದರೆ ಅದರ ಫ್ಲೇವರ್ ಸೇರಿ ರುಚಿ ಹೆಚ್ಚುವುದು, ತೆಂಗಿನೆಣ್ಣೆ ಬಳಸಿ ಅಭ್ಯಾಸ ಇಲ್ಲದಿದ್ದರೆ ಬೇರೆ ಎಣ್ಣೆ ಬಳಸಿ.
Nutritional Information
  • ಕೊಬ್ಬು - 72%
  • ಪ್ರೊಟೀನ್ - 18%
  • ಕಾರ್ಬ್ಸ್ - 9%
[ 4.5 of 5 - 53 Users]
X
Desktop Bottom Promotion