ಗಣೇಶ ಚತುರ್ಥಿ ವಿಶೇಷ: ಆಲೂ ಬಜ್ಜಿ ಪಾಕವಿಧಾನ

Posted By: Lekhaka
Subscribe to Boldsky

ಉತ್ತರ ಭಾರತದಲ್ಲಿ ಆಲೂ ಪಕೋರಾ ಎಂದು ಪ್ರಸಿದ್ಧಿ ಪಡೆದಿರುವ ಆಲು ಬಜ್ಜಿ ಕರ್ನಾಟಕದಲ್ಲೂ ಹೆಚ್ಚು ಪ್ರಸಿದ್ಧಿ ಪಡೆದಿದೆ. ಸಾಮಾನ್ಯವಾಗಿ ಮನೆಯಲ್ಲಿ ತಯಾರಿಸುವ ಈ ತಿಂಡಿಯನ್ನು ಆಲೂ ಮತ್ತು ಮಸಾಲೆ ಪದಾರ್ಥಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಎಣ್ಣೆ ಮತ್ತು ಬೆಣ್ಣೆಯಲ್ಲಿ ಕರಿಯುವ ಈ ತಿನಿಸನ್ನು ಒಂದು ಕಪ್ ಕಾಫಿ ಅಥವಾ ಟೀ ಜೊತೆ ಸವಿದರೆ ಹೆಚ್ಚು ಆಹ್ಲಾದ ಕೊಡುವುದು.

ಮಳೆಗಾಲದ ಚಳಿಯಲ್ಲಿ ಏನನ್ನಾದರೂ ಬಿಸಿ ಬಿಸಿಯಾದ ತಿಂಡಿ ಸವಿಯಬೇಕು ಎಂದು ಬಯಸಿದಾಗ ನೆನಪಾಗುವುದು ಆಲೂ ಬಜ್ಜಿ. ವಿಶೇಷ ಸಮಾರಂಭಗಳಲ್ಲಿ, ಅತಿಥಿಗಳ ಆಗಮನಕ್ಕೆ ಮತ್ತು ಏನಾದರೂ ಬಿಸಿ ತಿಂಡಿ ಸವಿಯಬೇಕೆಂದು ಮನಸ್ಸು ಬಯಸಿದರೆ ತಕ್ಷಣದಲ್ಲಿಯೇ ತಯಾರಿಸಿ ಸವಿಯಬಹುದಾದ ತಿಂಡಿ ಇದು. ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಕೆಚಪ್ ಜೊತೆಯೂ ಸವಿಯಬಹುದು. ಕಡಿಮೆ ಸಮಯದಲ್ಲಿ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದಾದ ಈ ತಿಂಡಿಯನ್ನು ನೀವೂ ತಯಾರಿಸಬೇಕೆನ್ನುವ ಬಯಕೆಯಾದರೆ ಈ ಕೆಳಗೆ ನೀಡಿರುವ ವಿಡಿಯೋ ಪಾಕವಿಧಾನ ಮತ್ತು ಹಂತ ಹಂತವಾದ ಚಿತ್ರ ವಿವರಣೆಯನ್ನು ನೋಡಿ...

potato bajji recipe
ಆಲೂ ಬಜ್ಜಿ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಆಲೂ ಬಜ್ಜಿ ರೆಸಿಪಿ | ಆಲೂ ಬಜ್ಜಿ ರೆಸಿಪಿ | ಆಲೂ ಪಕೋರಾ ರೆಸಿಪಿ | ಆಲೂ ಪಕೋರಾ ರೆಸಿಪಿ ವಿಡಿಯೋ
ಆಲೂ ಬಜ್ಜಿ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಆಲೂ ಬಜ್ಜಿ ರೆಸಿಪಿ | ಆಲೂ ಬಜ್ಜಿ ರೆಸಿಪಿ | ಆಲೂ ಪಕೋರಾ ರೆಸಿಪಿ | ಆಲೂ ಪಕೋರಾ ರೆಸಿಪಿ ವಿಡಿಯೋ
Prep Time
15 Mins
Cook Time
5M
Total Time
20 Mins

Recipe By: ಸುಮಾ ಜಯಂತ್

Recipe Type: ಸ್ನ್ಯಾಕ್ಸ್

Serves: 6 ಬಜ್ಜಿ

Ingredients
 • ತೊಳೆದ ಆಲೂಗಡ್ಡೆ - 1

  ರುಚಿಗೆ ತಕ್ಕಷ್ಟು ಉಪ್ಪು

  ಕಡಲೇ ಹಿಟ್ಟು - 1 ಕಪ್

  ಅಕ್ಕಿ ಹಿಟ್ಟು - 2 ಟೇಬಲ್ ಚಮಚ

  ಜೀರಿಗೆ 1 ಟೀ ಚಮಚ

  ಖಾರದ ಪುಡಿ - 3 ಟೀ ಚಮಚ

  ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - 2 ಟೀ ಚಮಚ

  ಎಣ್ಣೆ - 4 ಟೇಬಲ್ ಚಮಚ+ ಕರಿಯಲು

  ನೀರು 2 1/4 ಕಪ್

Red Rice Kanda Poha
How to Prepare
 • 1. ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದುಕೊಳ್ಳಬೇಕು.

  2. ನಂತರ ಆಲೂಗಡ್ಡೆಯನ್ನು ಸ್ಲೈಸ್ ಆಗಿ ಕತ್ತರಿಸಿಕೊಳ್ಳಿ.

  3. ಒಂದು ಬೌಲ್‍ನಲ್ಲಿ ಕಡಲೇ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟನ್ನು ಸೇರಿಸಿ.

  4. ಜೀರಿಗೆ ಮತ್ತು ಖಾರದ ಪುಡಿಯನ್ನು ಸೇರಿಸಿ.

  5. ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ.

  6. ಹೆಚ್ಚಿಕ್ಕೊಂಡ 2 ಟೀ ಚಮಚ ಕೊತ್ತಂಬರಿ ಸೊಪ್ಪನ್ನು ಸೇರಿಸಿ.

  7. ನಂತರ ಒಂದು ಸಣ್ಣ ಪಾತ್ರೆಯಲ್ಲಿ 4 ಟೇಬಲ್ ಚಮಚ ಎಣ್ಣೆಯನ್ನು ಹಾಕಿ.

  8. ಎಣ್ಣೆಯನ್ನು ಬಿಸಿ ಮಾಡಿ ಮಿಶ್ರಣಕ್ಕೆ ಸೇರಿಸಿ.

  9. ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತ ಮೃದುವಾದ ಬೆಣ್ಣೆಯ ಹದಕ್ಕೆ ಕದಡಿ.

  10. ಕರಿಯಲು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

  11. ಆಲೂಗಡ್ಡೆಯ ಸ್ಲೈಸ್ ಅನ್ನು ಕಡಲೇ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ.

  12. ಅದ್ದಿಕೊಂಡ ಆಲೂ ಸ್ಲೈಸ್ ಅನ್ನು ಒಂದಾದ ಮೇಲೊಂದರಂತೆ ಎಣ್ಣೆಯಲ್ಲಿ ಬಿಡಿ.

  13. ಒಂದು ಕಡೆ ಬೆಂದಿದೆ ಎಂದಾದ ಮೇಲೆ ತಿರುವಿ ಇನ್ನೊಂದು ಕಡೆಯೂ ಬೇಯಿಸಿ.

  14. ಇವು ಹೊಂಬಣ್ಣಕ್ಕೆ ತಿರುಗಿ ಗರಿ ಗರಿಯಾಗುವವರೆಗೆ ಬೇಯಿಸಿ.

  15. ನಂತರ ಎಣ್ಣೆಯಿಂದ ತೆಗೆದು ಒಂದು ಬೌಲ್‍ನಲ್ಲಿ ಹಾಕಿ.

  16. ಬಿಸಿ ಇರುವಾಗಲೇ ಚೆಟ್ನಿ ಅಥವಾ ಕೆಚಪ್ ಜೊತೆ ಸವಿಯಲು ನೀಡಿ.

Instructions
 • 1. ಬಜ್ಜಿ ಹೆಚ್ಚು ಗರಿಗರಿಯಾಗಲು ಅಕ್ಕಿ ಹಿಟ್ಟನ್ನು ಸೇರಿಸಲಾಗುವುದು.
 • 2. ನಿಮಗೆ ಅನುಕೂಲಕ್ಕೆ ತಕ್ಕಂತಹ ಸ್ಲೈಸರ್ ಬಳಸಿ ಕತ್ತರಿಸಬಹುದು.
 • 3. ನಿಮಗೆ ಬೇಕಿದ್ದರೆ ಅಜ್ವೈನ್ ಅನ್ನು ಮಿಶ್ರಣಕ್ಕೆ ಸೇರಿಸಬಹುದು. ಇದು ಬೇರೆ ರುಚಿಯನ್ನು ನೀಡುತ್ತದೆ.
Nutritional Information
 • ಸರ್ವಿಂಗ್ ಸೈಜ್ - 4 ಬಜ್ಜಿ
 • ಕ್ಯಾಲೋರಿ - 651 ಕ್ಯಾಲ್
 • ಫ್ಯಾಟ್ - 56 ಗ್ರಾಂ
 • ಪ್ರೋಟೀನ್ - 6 ಗ್ರಾಂ
 • ಕಾರ್ಬೋಹೈಡ್ರೇಟ್ - 38 ಗ್ರಾಂ
 • ಸಕ್ಕರೆ - 1 ಗ್ರಾಂ
 • ಫೈಬರ್ - 6 ಗ್ರಾಂ

ಸ್ಟೆಪ್ ಬೈ ಸ್ಟೆಪ್ ಆಲೂ ಬಜ್ಜಿ ರೆಸಿಪಿ ಮಾಡುವ ವಿಧಾನ:

1. ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದುಕೊಳ್ಳಬೇಕು.

potato bajji recipe
potato bajji recipe

2. ನಂತರ ಆಲೂಗಡ್ಡೆಯನ್ನು ಸ್ಲೈಸ್ ಆಗಿ ಕತ್ತರಿಸಿಕೊಳ್ಳಿ.

potato bajji recipe

3. ಒಂದು ಬೌಲ್‍ನಲ್ಲಿ ಕಡಲೇ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟನ್ನು ಸೇರಿಸಿ.

potato bajji recipe
potato bajji recipe

4. ಜೀರಿಗೆ ಮತ್ತು ಖಾರದ ಪುಡಿಯನ್ನು ಸೇರಿಸಿ.

potato bajji recipe
potato bajji recipe

5. ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ.

potato bajji recipe

6. ಹೆಚ್ಚಿಕ್ಕೊಂಡ 2 ಟೀ ಚಮಚ ಕೊತ್ತಂಬರಿ ಸೊಪ್ಪನ್ನು ಸೇರಿಸಿ.

potato bajji recipe

7. ನಂತರ ಒಂದು ಸಣ್ಣ ಪಾತ್ರೆಯಲ್ಲಿ 4 ಟೇಬಲ್ ಚಮಚ ಎಣ್ಣೆಯನ್ನು ಹಾಕಿ.

potato bajji recipe

8. ಎಣ್ಣೆಯನ್ನು ಬಿಸಿ ಮಾಡಿ ಮಿಶ್ರಣಕ್ಕೆ ಸೇರಿಸಿ.

potato bajji recipe
potato bajji recipe

9. ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತ ಮೃದುವಾದ ಬೆಣ್ಣೆಯ ಹದಕ್ಕೆ ಕದಡಿ.

potato bajji recipe
potato bajji recipe
potato bajji recipe

10. ಕರಿಯಲು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

potato bajji recipe

11. ಆಲೂಗಡ್ಡೆಯ ಸ್ಲೈಸ್ ಅನ್ನು ಕಡಲೇ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ.

potato bajji recipe

12. ಅದ್ದಿಕೊಂಡ ಆಲೂ ಸ್ಲೈಸ್ ಅನ್ನು ಒಂದಾದ ಮೇಲೊಂದರಂತೆ ಎಣ್ಣೆಯಲ್ಲಿ ಬಿಡಿ.

potato bajji recipe

13. ಒಂದು ಕಡೆ ಬೆಂದಿದೆ ಎಂದಾದ ಮೇಲೆ ತಿರುವಿ ಇನ್ನೊಂದು ಕಡೆಯೂ ಬೇಯಿಸಿ.

potato bajji recipe

14. ಇವು ಹೊಂಬಣ್ಣಕ್ಕೆ ತಿರುಗಿ ಗರಿ ಗರಿಯಾಗುವವರೆಗೆ ಬೇಯಿಸಿ.

potato bajji recipe

15. ನಂತರ ಎಣ್ಣೆಯಿಂದ ತೆಗೆದು ಒಂದು ಬೌಲ್‍ನಲ್ಲಿ ಹಾಕಿ.

potato bajji recipe

16. ಬಿಸಿ ಇರುವಾಗಲೇ ಚೆಟ್ನಿ ಅಥವಾ ಕೆಚಪ್ ಜೊತೆ ಸವಿಯಲು ನೀಡಿ.

potato bajji recipe
[ 5 of 5 - 54 Users]
Story first published: Thursday, August 24, 2017, 14:00 [IST]
Subscribe Newsletter