Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ರೆಸಿಪಿ: ಆಹಾ! ತುಂಬಾ ರುಚಿಯಾಗಿರುತ್ತೆ ಈ ಪತ್ರೊಡೆ ಸ್ನ್ಯಾಕ್ಸ್
ಇಂಗು ಇದ್ರೆ ಮಂಗನೂ ಅಡುಗೆ ಮಾಡುತ್ತೆ ಅನ್ನುತ್ತಾರಲ್ಲ, ಹಾಗೇ ಈ ಪತ್ರೊಡೆ ಸ್ನ್ಯಾಕ್ಸ್ ಮಾಡುವುದಾದರೆ ಇಂಗು ಬೇಕೇಬೇಕು. ಈ ಪತ್ರೊಡೆ ತುಳುಕೂಟ ಮುಂತಾದ ಕಡೆ ಸವಿದಿದ್ದೆ ಆದರೆ ಎಂದೂ ಮಾಡಿರಲಿಲ್ಲ, ತುಂಬಾ ಕಷ್ಟದ ರೆಸಿಪಿ ಅಂದುಕೊಂಡಿದ್ದೆ, ಆದರೆ ಇದನ್ನು ಮಾಡವುದು ತುಂಬಾನೇ ಸುಲಭ ಇದೆ ಎಂದು ತಿಳಿದ ಮೇಲೆ ಅದನ್ನು ಮಾಡಿ ಸಕ್ಸಸ್ ಆದೆ... ಪತ್ರೊಡೆ ಸ್ನ್ಯಾಕ್ಸ್ ಮನೆಯವರಿಗೆ ತುಂಬಾನೇ ಇಷ್ಟ ಆಯ್ತು.

ಹೆಚ್ಚಿನ ಶ್ರಮವಿಲ್ಲದೆ ಈ ಪತ್ರೊಡೆ ಸ್ನ್ಯಾಕ್ಸ್ ಮಾಡಬಹುದು. ಇದಕ್ಕೆ ಎಲೆಗಳು ಸ್ವಲ್ಪ ಅಧಿಕ ಬೇಕಾಗಬಹುದು, ಒಂದು ರೋಲ್‌ಗೆ 10-15 ಎಲೆ ಇಡಿ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Snacks
Serves: 5
-
ಬೇಕಾಗುವ ಸಾಮಗ್ರಿ
ಕೆಸದ ಎಲೆ 60-65
ಅಕ್ಕಿ 1 ಕಪ್
ಅವಲಕ್ಕಿ ಒಂದು ಹಿಡಿಯಷ್ಟು
ಬ್ಯಾಡಗಿ ಮೆಣಸು 10
1 ಕಪ್ ತೆಂಗಿನತುರಿ
ಇಂಗು (2 ಹುಣಸೆಬೀಜ ಗಾತ್ರದಷ್ಟು)
ಹುಣಸೆ ಹಣ್ಣು( ದೊಡ್ಡ ನಿಂಬೆಹಣ್ಣು ಗಾತ್ರದಷ್ಟು (ಹುಣಸೆ ಕಡಿಮೆಯಾದರೆ ತುರಿಕೆ ಬರಬಹುದು))
ಉಪ್ಪು 2 ಚಮಚ
-
ಇಂಗು ಇದ್ರೆ ಮಂಗನೂ ಅಡುಗೆ ಮಾಡುತ್ತೆ ಅನ್ನುತ್ತಾರಲ್ಲ, ಹಾಗೇ ಈ ಪತ್ರೊಡೆ ಸ್ನ್ಯಾಕ್ಸ್ ಮಾಡುವುದಾದರೆ ಇಂಗು ಬೇಕೇಬೇಕು. ಈ ಪತ್ರೊಡೆ ತುಳುಕೂಟ ಮುಂತಾದ ಕಡೆ ಸವಿದಿದ್ದೆ ಆದರೆ ಎಂದೂ ಮಾಡಿರಲಿಲ್ಲ, ತುಂಬಾ ಕಷ್ಟದ ರೆಸಿಪಿ ಅಂದುಕೊಂಡಿದ್ದೆ, ಆದರೆ ಇದನ್ನು ಮಾಡವುದು ತುಂಬಾನೇ ಸುಲಭ ಇದೆ ಎಂದು ತಿಳಿದ ಮೇಲೆ ಅದನ್ನು ಮಾಡಿ ಸಕ್ಸಸ್ ಆದೆ... ಪತ್ರೊಡೆ ಸ್ನ್ಯಾಕ್ಸ್ ಮನೆಯವರಿಗೆ ತುಂಬಾನೇ ಇಷ್ಟ ಆಯ್ತು.
ಹೆಚ್ಚಿನ ಶ್ರಮವಿಲ್ಲದೆ ಈ ಪತ್ರೊಡೆ ಸ್ನ್ಯಾಕ್ಸ್ ಮಾಡಬಹುದು. ಇದಕ್ಕೆ ಎಲೆಗಳು ಸ್ವಲ್ಪ ಅಧಿಕ ಬೇಕಾಗಬಹುದು, ಒಂದು ರೋಲ್‌ಗೆ 10-15 ಎಲೆ ಇಡಿ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
{recipe}
ಮಾಡುವ ವಿಧಾನ
* ಅಕ್ಕಿಯನ್ನು 1 ತಾಸು ನೆನೆಹಾಕಿ ತೊಳೆದು ನೀರು ಸೋಸಲು ಇಡಿ.
{image-11-1627730425.jpg kannada.boldsky.com}
* ಎಲೆಯನ್ನು ತೊಳೆದು ಅದರ ತೊಟ್ಟು ತೆಗಿಯಿರಿ.
* ಮೊದಲಿಗೆ ನೀವು ಒಣ ಮೆಣಸನ್ನು ಸ್ವಲ್ಪ ತೆಂಗಿನೆಣ್ಣೆ ಹಾಕಿ ಹುರಿಯಿರಿ (ಒಣ ಮೆಣಸನ್ನು ಸುಟ್ಟು ಕೂಡ ಹಾಕಬಹುದು)
* ಈಗ ತೆಂಗಿನಕಾಯಿ, ಒಣ ಮೆಣಸು, ಹುಣಸೆ ಹಣ್ಣು, ಅವಲಕ್ಕಿ, ಉಪ್ಪು ಹಾಕಿ ನುಣ್ಣನೆ ರುಬ್ಬಿ.
{image-o3-1627730548.jpg kannada.boldsky.com}
* ನಂತರ ಅದೇ ಮಸಾಲೆಗೆ ಅಕ್ಕಿ ಹಾಕಿ ತರಿ-ತರಿಯಾಗಿ ರುಬ್ಬಿಕೊಳ್ಳಿ.
{image-o2-1627730572.jpg kannada.boldsky.com}
* ಈಗ ಎಲೆಯನ್ನು ಒಂದು ಅಗಲವಾದ ತಟ್ಟೆಯನ್ನು ಮಗುಚಿ ಹಾಕಿ ಅದರ ಮೇಲೆ ಉಲ್ಟಾ ಹಾಕಿ ಅದರ ಮೇಲೆ ಮಸಾಲೆ ಸವರಿ, ಮೊದಲಿಗೆ ದೊಡ್ಡ ಎಲೆ ಇಡಿ, ಅದರ ಮೇಲೆ ಮತ್ತೊಂದು ಎಲೆ ಇಟ್ಟು ಮಸಾಲೆ ಸವರಿ, ಈ ರೀತಿ ಪ್ರತೀ ಎಲೆಯ ಮೇಲೆ ಮಸಾಲೆ ಸವಿರಿ.
{image-o8-1627730613.jpg kannada.boldsky.com}
* ಒಂದು 10-15 ಎಲೆ ಇಟ್ಟ ಬಳಿಕ ಅದರ ಎರಡೂ ಬದಿ ಉಲ್ಟಾ ಮಡಚಿ ನಂತರ ಅದನ್ನು ರೋಲ್ ಮಾಡಿ. ರೋಲ್ ಮಾಡುವಾಗ ಸಡಿಲ ಬಿಡಬೇಡಿ.
{image-o9-1627730638.jpg kannada.boldsky.com}
* ನಂತರ ಅದನ್ನು ಕತ್ತರಿಸಿ ಸ್ಟೀಮರ್ ಅಥವಾ ಇಡ್ಲಿ ಪಾತ್ರೆಯಲ್ಲಿ ಹಬೆಯಲ್ಲಿ ಬೇಯಿಸಿ.
{image-o6-1627730686.jpg kannada.boldsky.com}
* 40-45 ನಿಮಿಷ ಬೇಯಿಸಿದ ಬಳಿಕ ಅದನ್ನು ದೋಸೆ ತವಾಕ್ಕೆ ಸ್ವಲ್ಪ ತೆಂಗಿನೆಣ್ಣೆ ಹಾಕಿ ಫ್ರೈ ಮಾಡಿ ಸವಿಯಲು ಸೂಪರ್ ಆಗಿರುತ್ತೆ.
{image-o7-1627730712.jpg kannada.boldsky.com}
{image-o4-1627730736.jpg kannada.boldsky.com}
- ನೀವು ಬೇಕಾದರೆ ರೋಲ್ ಹಾಗೇ ಸ್ಟೀಮ್ ಮಾಡಿ ನಂತರ ಕತ್ತರಿಸಬಹುದು, ಇನ್ನು ಬೇಯಿಸಿದ ಪತ್ರೊಡೆ ಹಾಗೇ ತಿನ್ನುವುದಾದರೆ ಸ್ವಲ್ಪ ತೆಂಗಿನೆಣ್ಣೆ ಹಾಕಿ ಸವಿಯಿರಿ, ಇಲ್ಲದಿದ್ದರೆ ತವಾದಲ್ಲಿ ಫ್ರೈ ಮಾಡಿ ತಿನ್ನಿ'.
ಮಾಡುವ ವಿಧಾನ
* ಅಕ್ಕಿಯನ್ನು 1 ತಾಸು ನೆನೆಹಾಕಿ ತೊಳೆದು ನೀರು ಸೋಸಲು ಇಡಿ.

* ಮೊದಲಿಗೆ ನೀವು ಒಣ ಮೆಣಸನ್ನು ಸ್ವಲ್ಪ ತೆಂಗಿನೆಣ್ಣೆ ಹಾಕಿ ಹುರಿಯಿರಿ (ಒಣ ಮೆಣಸನ್ನು ಸುಟ್ಟು ಕೂಡ ಹಾಕಬಹುದು)
* ಈಗ ತೆಂಗಿನಕಾಯಿ, ಒಣ ಮೆಣಸು, ಹುಣಸೆ ಹಣ್ಣು, ಅವಲಕ್ಕಿ, ಉಪ್ಪು ಹಾಕಿ ನುಣ್ಣನೆ ರುಬ್ಬಿ.

Click it and Unblock the Notifications